Ticker

6/recent/ticker-posts

Ad Code

Responsive Advertisement

ಪ್ರೇಕ್ಷಕರನ್ನು ಸೆರೆಹಿಡಿದ "ನೃತ್ಯ ಪ್ರದರ್ಶನ"

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 2, ಸೋಮವಾರದಂದು ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ(ಟಿಟಿಡಿ)ದ ಬೃಹತ್ ವೇದಿಕೆಯಲ್ಲಿ

ನೃತ್ಯ ದಿಶಾ ಟ್ರಸ್ಟ್ ನ ಕಲಾವಿದರಿಂದ

ನೃತ್ಯ ಸೇವಾ ಜರುಗಿತು. ಗುರು ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು. 

ಸಂಸ್ಥೆಯ ಕಲಾವಿದರು ನೆರೆದಂತಹ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮ ಸುಮಾರು 2 ಗಂಟೆ ಕಾಲ ನಡೆಯಿತು.

ಮೊದಲಿಗೆ ಸಾಂಪ್ರದಾಯಿಕ ಪುಷ್ಪಾಂಜಲಿ ಇಂದ ಕಾರ್ಯಕ್ರಮ ಪ್ರಾರಂಭವಾಗಿ, ವಿಘ್ನ  ವಿನಾಶಕ ಗಣಪನ ವಂದಿಸಿತು.  ಸಿಂಧುಭೈರವಿ ರಾಗದ ಪುರಂದರದಾಸರ ವೆಂಕಟಾಚಲನಿಲಯಂ,  ನರಸಿಂಹ , ಸುಬ್ರಹ್ಮಣ್ಯನ ಕೃತಿಗಳು, ಕೃಷ್ಣನ ರಾಸಲೀಲೆಗಳು, ಕೃಷ್ಣ ಭಜನ್, ಕೊರವಂಜಿ, ನೃತ್ಯಗಳನ್ನು ಪ್ರಸ್ತುತಪಡಿಸಿದರು.  ವಿಶೇಷವಾಗಿ ಪ್ರದರ್ಶನವಾಗಿದ್ದು ಅಷ್ಟಲಕ್ಷ್ಮಿ ವೈಭವ ನೃತ್ಯ ರೂಪಕ. ಈ ನೃತ್ಯ ರೂಪಕ ಆಕರ್ಷಣಿವಾಗಿದ್ದು, ನೃತ್ಯ ಸಂಯೋಜನೆ ಅದ್ಭುತವಾಗಿತ್ತು.





ಸಂಸ್ಥೆಯ  ವಿದ್ಯಾರ್ಥಿಗಳಾದ ಮನಿಷಾ, ಸಹನ, ನಮಿತಾ, ದೀಪರಾಣಿ,  ಸಹನಾ ಎಚ್. ಬಿ , ಸಂಧ್ಯಾ, ಸ್ಪೂರ್ತಿ, ದಿಶಾ, ದೇಷಿಕಾ, ಭೂಮಿಕಾ, ಲಿಜ, ನಿಹಾರಿಕ, ಕೀರ್ತನ, ಮಿತ್ರಶ್ರೀ, ಸುಹನಿ, ಶ್ರಾವಣಿ, ವಾನ್ಯ, ಖುಷಿ, ದಶಮಿ, ಮಾನ್ಯತಾ, ಚಾರ್ವಂಗಿ, ಲಿಖಿತ ಇವರುಗಳು ನರ್ತಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಟಿಟಿಡಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗರಾವ್ ಅವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು.

Post a Comment

0 Comments

Ad Code

Responsive Advertisement