ನವೋದಯ ಚಾರಿಟಬಲ್ ಟ್ರಸ್ಟ್, ದೃಷ್ಟಿ ಕಣ್ಣಿನ ಆಸ್ಪತ್ರೆ ಮತ್ತು ಶ್ರೀ ಕೆಂಪೇಗೌಡ ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೂಬಗೆರೆಯಲ್ಲಿ ಆಯೋಜಿಸಲಾಗಿತ್ತು.
ಈ ಒಂದು ಶಿಬಿರದಲ್ಲಿ ಸುಮಾರು 250 ರೋಗಿಗಳಿಗೆ ತಪಾಸಣೆ ಮಾಡಲಾಯಿತು. ಈ ಶಿಬಿರದಲ್ಲಿ ಮಾತನಾಡಿದ ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನವೋದಯ ಚೇತನ್ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಈ ಶಿಬಿರವನ್ನು ಸತತ ಮೂರನೇ ಬಾರಿ ಆಯೋಜಿಸುತ್ತಾ ಬರುತ್ತಿದ್ದು ಈ ಬಾರಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ 125 ಜನರಿಗೆ ಉಚಿತ ಕನ್ನಡಕ ನೀಡಲಾಗಿದ್ದು 55 ಮಂದಿಗೆ ಉಚಿತ ಸರ್ಜರಿಯನ್ನು ಮಾಡಿಕೊಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಪರಮೇಶ್ವರ್ ರವರು ಗ್ರಾಮೀಣ ಭಾಗದ ಜನರು ಆರೋಗ್ಯ ಸಂಬಂಧಿ ಕಾರ್ಡುಗಳಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಯಶಸ್ವಿನಿ ಗಳನ್ನು ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳ ಅನುಕೂಲ ಪಡೆಯಬೇಕು ಎಂದು ಹೇಳಿದರು. ಈ ಶಿಬಿರದಲ್ಲಿ ದೃಷ್ಟಿ ಕಣ್ಣಿನ ಆಸ್ಪತ್ರೆಯ ಡಾ. ನಾಯ್ಡು, ಶ್ರೀ ಕೆಂಪೇಗೌಡ ಆಸ್ಪತ್ರೆಯ ಡಾ. ಕೃಷ್ಣವೇಣಿ ರೆಡ್ಡಿ, ತೂಬಗೆರೆ ಗ್ರಾಮ ಪಂಚಾಯತಿಯ ಸದಸ್ಯರಗಳಾದ ಸುರೇಶ್, ವೆಂಕಟೇಶ್ ,ಮುನಿಕೃಷ್ಣಪ್ಪ, ಹೋಬಳಿ ಕ.ಸಾ.ಪ. ಕಾರ್ಯದರ್ಶಿ ಉದಯ್ ಆರಾಧ್ಯ ಹಾಗೂ ನವೋದಯ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಇಂದ್ರಕುಮಾರ್ ಜಂಟಿ ಕಾರ್ಯದರ್ಶಿ ಕಾರ್ತಿಕ್ ಗೌಡ ಕಾರ್ಯಕ್ರಮ ಸಂಯೋಜಕ ಜನಾರ್ಧನ್ ಕಾನೂನು ಸಲಹೆಗಾರ ಎಚ್ ಕೆ ಮಂಜುನಾಥ್ ಟ್ರಸ್ಟಿನ ಸ್ವಯಂಸೇವಕರಾದ ಪುನೀತ್ ಕುಮಾರ್ ವಿ ಮಹೇಂದ್ರ ನಾಯ್ಕ, ಪ್ರಕಾಶ್ , ನರಸಿಂಹಮೂರ್ತಿ, ಕೃಷ್ಣ ಸಿಎಂ, ಸುನೀಲ್ ಇದ್ದರು.


0 Comments