Ticker

6/recent/ticker-posts

Ad Code

Responsive Advertisement

ನಮ್ಮೂರ ಜಾತ್ರೆ ಬಲು ಜೋರು



ನಮ್ಮೂರ ಜಾತ್ರೆ ಬಲು ಜೋರು
ರಥದಲಿ ದೇವ್ರ ಸುಂದರ ವಿಗ್ರಹ ತೋರು
ಎಲ್ರೂ ಸೇರಿಕೊಂಡು ಎಳಿತಿವಿ ತೇರು
ಉತ್ಸವದಲ್ಲಿ ರಥಕೆ ಬಾಳೆ ಕಬ್ಬು ತೂರು

ಬೆಂಡು ಬತ್ತಾಸು ಬೆಲ್ಲಗಳು ಮೂರು
ಸಿಹಿ ಕೊಳ್ಳುವೇವು ಸೇರು ಸೇರು
ಆಕರ್ಷಕ ಆಟಿಕೆಯ ಕಾರುಬಾರು 
ಕೊಳ್ಳುವೆವು ಆಟಿಗೆ ಸೈಕಲ್ ಕಾರು
ನಮ್ಮ ಸಂತಸವನು ತಡೆಯುವರಾರು

ಎಲ್ಲೆಲ್ಲೂ ಸಿಂಪಡಿಕೆ ಪನ್ನೀರು
ಮಲ್ಲಿಗೆ ಜಾಜಿ ಸಂಪಿಗೆ ಮೊಳ ಮಾರು
ಗಮ್ ಎನಿಸುವುವ ಸುವಾಹಸನೆ 
ಹರಡಿ ಪ್ರತಿ ಸೂರು ಸೂರು

ಜಾತ್ರೆಯಲಿ ಎತ್ತು ಹೋರಿ ಹಸು ಕರು
ಉಪಕರಣಾದಿಗಳು ಹಲವಾರು 
ಕೊಳ್ಳುವರು ಸಂತಸದಿ 
ರೈತಾಪಿ ವರ್ಗದವರು

ಬಳೆ ಹರಿಷಿಣ ಕುಂಕುಮ ಸಾಲು ಸಾಲು
ಉಲ್ಲಾಸದಿ ಕೊಳ್ಳುವರು ಮಹಿಳೆಯರು
ಕುಸ್ತಿ ಹಗ್ಗ ಜಗ್ಗಾಟ ಸ್ಪರ್ಧೆ ಹತ್ತಾರು
ಜಾತ್ರೆಯಲಿ ನಡೆಸುವವರು ಗಣ್ಯರು
ಇದರಲಿ ಗೆದ್ದು ಬೀಗುವರು ಬಹದ್ದೂರರು

ಇತರೆ ಸಾಮಾನು ಸರಂಜಾಮು
ಮಾರಾಟವಾಗುವವು ನೂರಾರು
ಕೊಂಡು ನಲಿ ನಲಿವರು
ಎಲ್ಲಾ ಹುಡುಗ ಹುಡುಗಿಯರು

ಸುತ್ತಾ ಮುತ್ತಾ ಹತ್ತು ಊರು 
ಕೇರಿಗಳಿಂದ ಓಡೋಡಿ
ಬರುವರು ಜನ ಸಾವಿರಾರು 
ನಮ್ಮೂರ ಜಾತ್ರೆಯೇ 
ಬಲು ಜೋರು ಬಲು ಜೋರು

******************************************
ವಿಜಯಕುಮಾರ್ ಎಚ್. ಕೆ. 
ಶ್ರೀ ಸದನ
ನಂ.೩೦
ಸ. ನಂ. ೨೯೧/೩/ಅ
ಹನುಮಾನ್ ಮಂದಿರ ಪಕ್ಕದಲ್ಲಿ
ರಾಘವೇಂದ್ರ ಕಾಲೋನಿ 
ಶಕ್ತಿನಗರ-೫೮೪೧೭೦
ರಾಯಚೂರು

Post a Comment

0 Comments

Ad Code

Responsive Advertisement