Ticker

6/recent/ticker-posts

Ad Code

Responsive Advertisement

ಜಿ.ವಿ ಮೆಗಾ ಹ್ಯಾಕಥನ್ 2.0 ಸಮಾರೋಪ ಸಮಾರಂಭ

 ದಿನಾಂಕ 22 ಜನವರಿ 2023ರ, ಭಾನುವಾರದಂದು ಜಿ.ವಿ ಮೆಗಾ  ಹ್ಯಾಕಥನ್ 2.0 ಸಮಾರೋಪ ಸಮಾರಂಭವನ್ನು ಬೆಂಗಳೂರಿನ ಜೆಪಿ ನಗರದ ಬಳಿ ಇರುವ ಸ್ಟುಡಿಯೋ 8 ವಾಯ್ಸಸ್ ನಲ್ಲಿ ನೆರವೇರಿಸಲಾಯಿತ್ತು. ಹೆಸರಾಂತ ನಟ ಮಿಮಿಕ್ರಿ ಕಲಾವಿದ ಶ್ರೀ ಮಿಮಿಕ್ರಿ ಮಹೇಶ್ ನೇತೃತ್ವದ  ದಿ ಗೋಲ್ಡನ್ ವಾಯ್ಸ್ ಸ್ಟುಡಿಯೋ ಏರ್ಪಡಿಸಿದ್ದ  ಮೂರು ತಿಂಗಳ ಜಿ.ವಿ ಮೆಗಾ  ಹ್ಯಾಕಥನ್ 2.0 ರಲ್ಲಿ ಧ್ವನಿ ಕ್ಷೇತ್ರದ ದಿಗ್ಗಜರಾದ ಅಂತರಾಷ್ಟ್ರೀಯ ನಿರೂಪಕರಾದ ಶ್ರೀ ಶಂಕರ್ ಪ್ರಕಾಶ್, ಟ್ಯೂಸ್ಡೇ ಟ್ಯೂನರ್ ಆರ್ ಜೆ ಆಶಾ ವಿಶ್ವನಾಥ್, ಶ್ರೀ ಅವಿನಾಶ್ ಕಾಮತ್, ಖ್ಯಾತ ಧ್ವನಿ ಕಲಾವಿದರಾದ ಶ್ರೀ ಬಡೇಕಿಲ ಪ್ರದೀಪ್ ಹಾಗೂ ಲಕ್ಷ್ಮಿ ಭಾಗವತರ್ ಭಾಗವಹಿಸಿದ್ದರು. ಹೊಸ ಧ್ವನಿ ಕಲಾವಿದರನ್ನು ಧ್ವನಿ ಕ್ಷೇತ್ರಕ್ಕೆ ಪರಿಚಯಿಸುವುದು ಹಾಗೂ ಅವರ ಪ್ರತಿಭೆಯನ್ನು ಬೆಂಬಲಿಸಿ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. 

ಈ ಕಾರ್ಯಕ್ರಮದಲ್ಲಿ ಮಹಂತ್ ಕೆ ಹೆಚ್ ಪ್ರಥಮ, ಮೋಹನ ಟಿ ಆರ್ ದ್ವಿತೀಯ ಹಾಗೂ ಶೋಭಾ ಪರಮೇಶ್ವರ್ ನಾರಾಯಣಕರ್ ತೃತೀಯ ಬಹುಮಾನವನ್ನು ಪಡೆದುಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ  ಕರ್ನಾಟಕ ಧ್ವನಿರತ್ನ ಪ್ರಶಸ್ತಿ ಪುರಸ್ಕೃತರು ಖ್ಯಾತ ರಾಷ್ಟ್ರೀಯ ದ್ವನಿ ಕಲಾವಿದರು ಹಾಗೂ ಸ್ಟುಡಿಯೋ 8 ವಾಯ್ಸಸ್ ನಾ ಮುಖ್ಯಸ್ಥರಾದ ಶ್ರೀ ಜಯಶಿಲ್ ಸುವರ್ಣ ರವರು ಶ್ರೀ ಮಿಮಿಕ್ರಿ ಮಹೇಶ್ ಹಾಗೂ ತಂಡದ ಶ್ರಮವನ್ನು ಕುರಿತು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.

 ದಿ ಗೋಲ್ಡನ್ ವಾಯ್ಸ್ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಧ್ವನಿ ಕಲಾವಿದರಿಗೆ ತರಬೇತಿ ನೀಡಿ ಅವರನ್ನು ದ್ವನಿ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ,

 ಕಲಾವಿದರಲ್ಲಿ ಇಂತಹ ಸ್ನೇಹದಾಯಕ ಸ್ಪರ್ಧೆಗಳು ನಡೆಯಬೇಕು ಮತ್ತು ಇನ್ನಷ್ಟು ಧ್ವನಿ ಕಲಾವಿದರು ಕನ್ನಡ ದ್ವನಿ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಬೇಕೆಂದು ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ ಆರುಷ ಏನ್ ಶೆಟ್ಟಿ ರವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. 

ಕಳೆದ ಹಲವು ವರ್ಷಗಳಲ್ಲಿ ಕನ್ನಡದಲ್ಲಿ ಮಾಹಿತಿ ಹಾಗೂ ಮನೋರಂಜನೆ ಕನ್ನಡಿಗರಿಗೆ ದೊರಕಬೇಕೆಂದು ಅನೇಕ ಸಂಘ ಸಂಸ್ಥೆಗಳು ದುಡಿಯುತ್ತಿದ್ದು ಇದರಲ್ಲಿ ಶ್ರೀ ಮಿಮಿಕ್ರಿ ಮಹೇಶ್ ರವರು ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

Post a Comment

0 Comments

Ad Code

Responsive Advertisement