ಕೊಳ್ಳೇಗಾಲ ಸುದ್ದಿ : ಪಟ್ಟಣದ ಎಚ್,ಕೆ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿಯವರ ನೇತೃತ್ವದಲ್ಲಿ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಕಾಲೇಜಿನ 2022 ನೇ ಸಾಲಿನ ವಿಶ್ವ ಚೇತನೋತ್ಸವ ಕಾರ್ಯಕ್ರಮವನ್ನು ಡಿ.10/2022ರಂದು ಸಂಜೆ 5:00 ಗಂಟೆಗೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ, ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಲಿಗರ ಮಾದಮ್ಮರವರಿಗೆ ವಿಶ್ವಚೇತನ ಪ್ರಶಸ್ತಿ ಪ್ರಧಾನ ನಡೆಸಲಾಗುವುದು,
ಈ ಕಾರ್ಯಕ್ರಮಕ್ಕೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪೀಠಧಿಕಾರಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಕೊಳ್ಳೇಗಾಲ ಮಾಜಿ ಶಾಸಕ ಜಿ. ಎನ್. ನಂಜುಂಡ ಸ್ವಾಮಿ ಅಪರ ಆರಕ್ಷಕ ಅಧೀಕ್ಷಕರು ಕೆ. ಎಸ್.ಸುಂದರ್ ರಾಜ್, ಪ್ರೇಮಲತಾ ಕೃಷ್ಣಸ್ವಾಮಿ, ಡಿ. ವೈ. ಎಸ್ ಪಿ ಮಹಾನಂದ, ವಲಯ ಅರಣ್ಯಧಿಕಾರಿ ಭರತ್, ಡಿ.ವೈ. ಎಸ್. ಪಿ ನಾಗರಾಜು, ಕೊಳ್ಳೇಗಾಲ ಉಪ ವಿಭಾಗೀಯ ಅಧಿಕಾರಿ ಗೀತಾ ಉಡೆದ, ಪಪೂ ಸಿ ಇ ಉಪ ನಿರ್ದೇಶಕರು ಮಂಜುನಾಥ್ ಪ್ರಸನ್ನ, ರವರು ಆಗಮಿಸಲಿದ್ದಾರೆ,
ಸಂಯೋಜಕರು, ರಾಜೇಶ್, ಎಸ್. ಬಿ.

0 Comments