ಬೆಂಗಳೂರು : ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ನಗರದ ಎಂ.ಇ.ಐ. ಬಡಾವಣೆಯ ಆಟದ ಮೈದಾನದಲ್ಲಿ ಅಧ್ಯಪನಾ ಪ್ರೀ ಸ್ಕೂಲ್ ವಿದ್ಯಾ ಸಂಸ್ಥೆಯ ವತಿಯಿಂದ 5 ನೇ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
2-8 ವರ್ಷ ವಯೋಮಾನದ ಮಕ್ಕಳಿಗಾಗಿ ಫ್ಲೇ ಗ್ರೂಫ್, ನರ್ಸರಿ, ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳನ್ನು ನಡೆಸುತ್ತಾ, ಈ ಭಾಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿ ಹೆಸರನ್ನು ಮಾಡುತ್ತಿರುವ ಶಾಲೆಯಾಗಿದ್ದು, ಆಡಳಿತ ಮಂಡಳಿಯವರು ಈ ವರ್ಷ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಉದ್ಯಮಿಗಳು, ಸಮಾಜ ಸೇವಕರು, ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲೇಶ್ವರಂ ಕ್ಷೇತ್ರದ ಅಧ್ಯಕ್ಷರು ಆಗಿರುವ ಡಾ. ಜಿ. ಎಸ್. ಚೌಧರಿರವರು ಆಗಮಿಸಿದ್ದರು.
ಈ ವೇಳೆ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಜಯ ಸಂತೋಷಿಣಿ ಬಾಯಿ ಪಿ., ಉಪ ಪ್ರಾಂಶುಪಾಲರಾದ ಶ್ರೀಮತಿ ವೀಣಾ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಕ್ರೀಡಾ ವಾರ್ಷಿಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.




0 Comments