Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ : ಜೆಡಿಎಸ್ ಸೇರ್ಪಡೆ ಹಾಗೂ ಅಭಿನಂದನೆ ಕಾರ್ಯಕ್ರಮ

ಕೊಳ್ಳೇಗಾಲ ಸುದ್ದಿ : ತಾಲ್ಲೂಕಿನ ಕಾಮಗೆರೆ ಗ್ರಾಮದ ಮುಖಂಡರ ಹಾಗೂ ಯುವಕರ ವತಿಯಿಂದ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜೆಡಿಎಸ್ ಸೇರ್ಪಡೆ ಹಾಗೂ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಹನೂರು ವಿಧಾನಸಭಾ ವ್ಯಾಪ್ತಿಗೆ ಸೇರಿದ ಕಾಮಗೆರೆ ಗ್ರಾಮದ ಎಲ್ಲ ಸಮುದಾಯದ ಹಲವಾರು ಮುಖಂಡರು ಹಾಗೂ ಯುವಕರು ಮಹಿಳೆಯರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಹನೂರು ಕ್ಷೇತ್ರದ ಜೆಡಿಎಸ್ ಮುಖಂಡರಾದ ಆರ್, ಮಂಜುನಾಥ್ ರವರು ಕಾರ್ಯವೈಖರಿಯನ್ನು ಮೆಚ್ಚಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನ ಕನಸನ್ನ ಹೊತ್ತು 

ಜೆಡಿಎಸ್ ಮುಖಂಡ ಆರ್, ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು,

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಆರ್. ಮಂಜುನಾಥ್ ರವರು ಮಾತನಾಡಿ ಮಾಜಿ ಮುಖ್ಯಮಂತ್ರಿಯಾವರ ಮೇಲೆ ಅಭಿಮಾನಿ ಇಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೀರ ಎಲ್ಲರಿಗೂ ಅಭಿನಂದನೆಗಳು

ಕ್ಷೇತ್ರದಲ್ಲಿ  ನಿರುದ್ಯೋಗ ಸಮಸ್ಯೆ ಅಭಾವವಾಗಿದೆ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರು ಸಹ ಸಿಗುತ್ತಿಲ್ಲ,

ಈ ಭಾಗದಲ್ಲಿ ಜೀವನ ನಿರ್ವಹಣೆಗೆ ಜನರು ತುಂಬಾ ಕಷ್ಟ ಪಡುತ್ತಿದ್ದಾರೆ,

ಕ್ಷೇತ್ರದ ಶಾಸಕರು ಒಂದೆರಡು ಗಾರ್ಮೆಂಟ್ಸ್ ಗಳನ್ನ ಕಟ್ಟಿಸಿ ಜನರಿಗೆ ನೇರವಾಗಬಹುದಿತ್ತು ಅದರೆ ಅವರು ಯಾಕೋ ಮನಸು ಮಾಡಿಲ್ಲ,

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರೆ, ಹನೂರು ಕ್ಷೇತ್ರದ ಜನತೆ ನನಗೇ ಆಶೀರ್ವಾದ ಮಾಡಿ ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಅಭಿವೃದ್ಧಿಗಾಗಿ ದುಡಿಯುತ್ತೇನೆ,

ಹಾಗೂ ಕ್ಷೇತ್ರದಲ್ಲಿ ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳನ್ನ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುತ್ತೇವೆ,

ಹಳ್ಳಿ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ,

ಹೀಗಾಗಲೇ ರಾಜ್ಯದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯುತ್ತಿದೆ,

ಐದು ಯೋಜನೆಗಳನ್ನ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆಯನ್ನು ನಡೆಸುತ್ತಿದ್ದಾರೆ,

ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತ ಸಾಲ ಮನ್ನಾ, ಉದ್ಯೋಗ ಸೃಷ್ಟಿ, ಹಾಗೂ ಇನ್ನಿತರ ಯೋಜನೆಗಳನ್ನ ನೆರವೇರಿಸಲಾಗುತ್ತದೆ ಎಂದರು,

ಈ ಸಂದರ್ಭದಲ್ಲಿ   ಜೆಡಿಎಸ್ ಕಾರ್ಯಕರ್ತ ಶಿವಮೂರ್ತಿ, ಹನೂರು ಮಂಜೇಶ್, ಗೋವಿಂದರಾಜು, ದೊಡ್ಡಿಂದುವಾಡಿ ಗೋವಿಂದ ಹಾಗೂ ಇನ್ನಿತರರು ಇದ್ದರು

Post a Comment

0 Comments

Ad Code

Responsive Advertisement