ಕೊಳ್ಳೇಗಾಲ ಸುದ್ದಿ: ಕೋಳ್ಳೇಗಾಲ ತಾಲ್ಲೂಕಿನ ವರವಲಯದಲ್ಲಿ ಜಿಂಕೆ ಚರ್ಮ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಸಿಐಡಿ ಪೊಲೀಸ್ ಅಧಿಕಾರಿಗಳು ತಾಲ್ಲೂಕಿನ ನರೀಪುರ ಗ್ರಾಮದ ಬಳಿ ಇಬ್ಬರು ಆರೋಪಿಗಳನ್ನ ಮಾಲು ಸಮೇತ ಬಂಧಿಸಿ ವಶಕ್ಕೆ ಪಡೆದಿದ್ದಾರೆ,
ಆರೋಪಿಗಳಾದ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೇ ಗ್ರಾಮದ ಇಪ್ತಕರ್ ಅಹಮ್ಮದ್ ಖಾನ್, ಬಿನ್ ಇಕ್ಪಾಲ್ ಅಹಮ್ಮದ್ ಖಾನ್, ಮತ್ತು ಅಬ್ದುಲ್ ಮುತಲಿಕ್ ಬಿನ್ ಮಹಮ್ಮದ್ ರಿಜ್ವನ್, ಇಬ್ಬರು ಆರೋಪಿಗಳನ್ನ ಎರಡು ಜಿಂಕೆ ಚರ್ಮ, ಮಾಲು ಸಾಗಿಸುತ್ತಿದ ಕೆ,ಎ, 09 ಎಚ್ ಇ- 2934 ನಂಬರಿನ ಹೋಂಡಾ ಡಿಯೋ ಬೈಕ್, ಎರಡು ಮೊಬೈಲ್, ಒಂದು ಪ್ಲಾಸ್ಟಿಕ್ ಬ್ಯಾಗ್ ಗಳನ್ನ ವಶಕ್ಕೆ ಪಡೆದು ಪಂಚಾರ ಸಮಾಕ್ಷಮದಲ್ಲಿ ಮಹಾಜರ್ ನಡೆಸಿ ಪ್ರಕರಣ
ದಾಖಲಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ,

0 Comments