Ticker

6/recent/ticker-posts

Ad Code

Responsive Advertisement

*ಕೋಲಾರ ಬಂದ್ ಭಾಗಶಃ ಯಶಸ್ವಿ*

*ಹದಗೆಟ್ಟ ರಸ್ತೆಗಳ ದುರಸ್ಥಿತಿಗಾಗಿ ಪ್ರಗತಿಪರ ಸಂಘಟನೆಗಳು ನೀಡಿದ್ದ ಬಂದ್ ಕರೆ*

*ಬೆಳಗ್ಗಿನಿಂದಲೇ ಸಂಘಟಕರು ಸರ್ಕಲ್ ಗಳಲ್ಲಿ ಪ್ರತಿಭಟನೆ*

ಕೋಲಾರ. ನಗರದಲ್ಲಿನ ಹದಗೆಟ್ಟ ರಸ್ತೆಗಳ ದುರಸ್ಥಿಗೆ ಒತ್ತಾಯಿಸಿ ಪ್ರಗತಿಪರ ಸಂಘಟಕರು ನೀಡಿದ್ದ ಕೋಲಾರ ಬಂದ್  ಬಹುತೇಕ ಯಶಸ್ವಿಯಾಗಿದೆ.

ಬೆಳಗ್ಗಿನಿಂದಲೇ ಎಲ್ಲಾ ಸಂಘಟಕರೂ ತಮ್ಮ ತಮ್ಮ ದ್ವಿಚಕ್ರವಾಹನಗಳಲ್ಲಿ ಸಂಚರಿಸುತ್ತಾ ಬಂದ್ ಗೆ ಮನವಿ ಮಾಡುತ್ತಿದ್ದರಲ್ಲದೇ ವೃತ್ತಗಳಲ್ಲೂ ಪ್ರತಿಭಟನೆ ನಡೆಸುತ್ತಿದ್ದಾರೆ.


ಬಸ್ ಡಿಪೋಗಳಿಂದಲೂ ಯಾವುದೇ ಬಸ್ ಗಳು ರಸ್ತೆಗಿಳಿಯದಂತೆ ಪ್ರತಿಭಟನಾ ನಿರತರು ಬೆಳಗ್ಗೆಯೇ ಎಚ್ಚರಿಕೆವಹಿಸಿದ್ದರಿಂದ ಯಾವುದೇ ಬಸ್ ಗಳು ರಸ್ತೆಗಿಳಿಯದೇ ಸಾರಿಗೆ ಬಸ್ ನಿಲ್ದಾಣವು ಸಂಪೂರ್ಣ ಖಾಲಿ ಖಾಲಿ ಯಾಗಿ ಬಣಗುಡುತ್ತಲಿತ್ತು.

ಇದರ ಜೊತೆಗೆ ಸಂಘಟಕರು  ಕೆಲವು ಪೆಟ್ರೋಲ್ ಬಂಕ್ ಮಾಲೀಕರೊಂದಿಗೂ ಮಾತುಕತೆ ನಡೆಸುವ ಮೂಲಕ ಸಹಕಾರ ಕೋರುತ್ತಲಿದ್ದದ್ದು ಕಂಡು ಬಂತು.

ಮುನ್ನೆಚ್ಚರಿಕಾ ಕ್ರಮವಾಗಿ ಪೋಲೀಸು ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲೀಸು ಬಂದೋ ಬಸ್ತ್  ಏರ್ಪಡಿಸಿದ್ದಾರೆ.

Post a Comment

0 Comments

Ad Code

Responsive Advertisement