Ticker

6/recent/ticker-posts

Ad Code

Responsive Advertisement

26ನೇ ಧನುರ್ಮಾಸ ಸಂಗೀತೋತ್ಸವ

ನಗರದ ಬಳೇಪೇಟೆಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯು ಕಳೆದ 25 ವರ್ಷಗಳನ್ನು ಪೂರೈಸಿ, ಈಗ 26ನೇ "ಧನುರ್ಮಾಸ ಸಂಗೀತೋತ್ಸವ"ವು  ದಿನಾಂಕ 16-12-2022 ರಿಂದ 15-1-2023ರ ವರೆಗೆ ಏರ್ಪಡಿಸಿದ್ದು, ಒಂದು ತಿಂಗಳ ಕಾಲ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ 6-30ರ ವರೆಗೆ ಭಜನೆ, ನಂತರ 6-30 ರಿಂದ 7-30ರ ವರೆಗೆ ನಾಡಿನ ಹೆಸರಾಂತ ಕಲಾವಿದರುಗಳಿಂದ ಸಂಗೀತ ಸೇವೆ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರಥಮ ದಿನದ ಕಾರ್ಯಕ್ರಮವಾಗಿ ಡಿಸೆಂಬರ್ 16ರಂದು ವಿ|| ಎಂ. ನಾಗರಾಜ್ (ರಾಜಪ್ಪ) ರಿಂದ ಗಾಯನ, ವಿ|| ಎಸ್ ಶಶಿಧರ್ ರಿಂದ ಪಿಟೀಲು, ವಿ|| ಫಣೀಂದ್ರ ಭಾಸ್ಕರ್ ರಿಂದ ಮೃದಂಗ, ವಿ|| ಶ್ರೀನಿವಾಸ್ ಅನಂತರಾಮಯ್ಯ ರಿಂದ ತಬಲಾ ವಾದ್ಯದೊಂದಿಗೆ ಪ್ರಾರಂಭವಾಗುತ್ತದೆ. 


ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಂಡಲಿಯ ಮುಖ್ಯಸ್ಥರಾದ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ವಿನಂತಿಸಿದ್ದಾರೆ.

Post a Comment

0 Comments

Ad Code

Responsive Advertisement