ಲೆಕ್ಕಪರಿಶೋಧಕ ಪದವಿದರರಿಗೆ ಜಗತ್ತಿನಾದ್ಯಂತ ವಿಫುಲ ಅವಕಾಶವಿದೆ. ಭಾರತೀಯ ಲೆಕ್ಕಪರಿಶೋಧಕರ ಜಗತ್ತಿನಲ್ಲಿ ಅಗ್ರಗಣ್ಯ ಸ್ಥಾನಹೊಂದಿದ್ದು ಭವಿಷ್ಯದಲ್ಲಿ ಜಾಗತಿಕ ನಾಯಕತ್ವ ಪಡೆಯಲಿದ್ದಾರೆ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಸಿಎ ಶ್ರೀನಿವಾಸ್ ಟಿ ಹೇಳಿದರು.
ದಿ ಇನ್ಸಿಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾದ ಬೆಂಗಳೂರು ಘಟಕ ಆಯೋಜಿಸಿದ ಲೆಕ್ಕಪರಿಶೋಧನಾ ವಿದ್ಯಾರ್ಥಿಗಳಿಗೆ ಕ್ಷಿತೀಜ ಹೆಸರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿತು.
ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಸಿಎ ಶ್ರೀನಿವಾಸ್ ಟಿ ಜಗತ್ತಿನ ಎಲ್ಲಾ ದೇಶಗಳಲ್ಲೂ ಭಾರತೀಯ ಲೆಕ್ಕ ಪರಿಶೋಧಕರಿಗೆ ದಿನೆ ದಿನೆ ಬೇಡಿಕೆ ಹಚ್ಚಾಗುತ್ತಿದೆ. ಮಾರುಕಟ್ಟೆ ಬದಲಾವಣೆ ತಕ್ಕಂತೆ ಲೆಕ್ಕಪರಿಶೋಧಕರು ವೃತ್ತಿ ಪ್ರಾವೀಣ್ಯತೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಉಪಾಧ್ಯಕ್ಷ ಸಿಎ ಅನೀಕೇತ ಸುನೀಲ್ ತಲಾಟಿ ಮಾತನಾಡಿ ಲೆಕ್ಕಪರಿಶೋಧನ ಕ್ಷೇತ್ರ ಅತ್ಯಂತ ಸ್ಪರ್ಧಾತ್ಮಕ ಕ್ಷೇತ್ರವಾಗಿದ್ದು ವೃತ್ತಿಯಲ್ಲಿ ಯಶಸ್ಸು ಗಳಿಸಲು ನಿರಂತರ ಅಧ್ಯಯನ ಅಗತ್ಯ. ದೇಶದ ಆರ್ಥಿಕ ಪ್ರಗತಿಯಲ್ಲಿ ಲೆಕ್ಕ ಪರಿಶೋಧಕರ ಕೊಡುಗೆ ಅಪಾರ ಎಂದರು.
ಮಾಹಿತಿ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಬೆಂಗಳೂರು ನಗರದಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಅನೀಕೇತ ಸುನೀಲ್ ತಲಾಟಿ ಹೇಳಿದರು.
ಎನ್ ಟಿ ಟಿ ಎಫ್ ವ್ಯವಸ್ಥಾಪಕ ನಿರ್ದೇಶಕ ಡಾ ಎನ್ ರೇಗುರಾಜ್ ಲೆಕ್ಕ ಪರಿಶೋಧಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು ಬದ್ದತೆ ಹಾಗೂ ದೈರ್ಯದಿಂದ ಮುನ್ನೆಡೆದರೆ ಜೀವನದಲ್ಲಿ ಯಶಸ್ಸುಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೋರ್ಡ್ ಆಫ್ ಸ್ಟಡೀಸ್ ಉಪಾಧ್ಯಕ್ಷ ಸಿಎ ಶ್ರೀಧರ್ ಮುಪ್ಪಾಲ. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ರಾಷ್ಟ್ರೀಯ ಮಂಡಳಿ ಸದಸ್ಯ ಸಿಎ ಕೋಥಾ ಶ್ರೀನಿವಾಸ್,
ನಾಗರಾಜ್ ಹೇಮನಿ, ಸಿಎ ಗೀತಾ ಎ ಬಿ, ಸಿಎ ಕವಿತಾ ಪರಮೇಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ದೇಶದ ವಿವಿಧ ರಾಜ್ಯಗಳಿಂದ 1300 ಕ್ಕೂ ಅಧಿಕ ಮಂದಿ ಲೆಕ್ಕ ಪರಿಶೋಧನ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.


0 Comments