Ticker

6/recent/ticker-posts

Ad Code

Responsive Advertisement

ನೃತ್ಯ ಕಲಾ ಸಂಭ್ರಮ-2022ವಿಶಿಷ್ಟ ನೃತ್ಯ ಕಾರ್ಯಕ್ರಮ

ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ನೃತ್ಯ ಕಲಾ ಸಂಭ್ರಮ-2022, ವಿಶಿಷ್ಟ ನೃತ್ಯ ಹಬ್ಬವನ್ನು ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಡಿಸೆಂಬರ್ 25 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ, ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ತಮೋಹ ಆರ್ಟ್ಸ್ ಫೌಂಡೇಶನ್ ಸಂಸ್ಥೆ, ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ ಸಂಸ್ಥೆ, ಕಾಳಿಕಾಂಭ ಆರ್ಟ್ಸ್ ಸಂಸ್ಥೆ, ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಹಾಗು ಕುಶಾಲನಗರದ ಕುಂದಣ ನೃತ್ಯಾಲಯ, ಸಂಸ್ಥೆಯ ಮಕ್ಕಳಿಂದ ಭರತನಾಟ್ಯ, ಜಾನಪದ ನೃತ್ಯ ಪ್ರದರ್ಶನಗಳಿದ್ದು, ಈಶ್ವರಿ ಕಲಾ ಸಂಗಮ ಸಂಸ್ಥೆಯ ವತಿಯಿಂದ '"ಕಂಸ ವಧೆ" ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. 




ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಆರ್ ಚಂದ್ರಶೇಖರ್ , ಬೆಂಗಳೂರು ನಗರಜಿಲ್ಲೆ ಹಾಗು  ವಿದುಷಿ ಶ್ರೀಮತಿ ಉಷಾ ಬಸಪ್ಪ, ನಿರ್ದೇಶಕಿ ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ, ಬೆಂಗಳೂರು ರವರು ಆಗಮಿಸಲಿದ್ಧಾರೆ ಎಂದು ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್ ರವರು ತಿಳಿಸಿದ್ಧಾರೆ.

Post a Comment

0 Comments

Ad Code

Responsive Advertisement