Ticker

6/recent/ticker-posts

Ad Code

Responsive Advertisement

ನಾಡದೇವಿಯ ಚಿತ್ರವನ್ನು ಸರಕಾರ ಅಧಿಕೃತಗೊಳಿಸಿ ಆದೇಶ

ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಮೂಲದ ಕಲಾವಿದ ಕೆ.ಸೋಮಶೇಖರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ರಚಿಸಿರುವ ನಾಡದೇವಿಯ ಚಿತ್ರವನ್ನು ಸರಕಾರ ಅಧಿಕೃತಗೊಳಿಸಿ ಆದೇಶ ಹೊರಡಿಸಿದೆ.


ತಂದೆಯಿAದ ಬಂದ ಬಳುವಳಿ: ಕೆ.ಸೋಮಶೇಖರ್ ಕಲಾವಿದ ಕುಟುಂಬದಿAದ ಬಂದವರು. ಅವರ ತಂದೆ ದಿ.ಕೆಂಪಯ್ಯ ಶಿಕ್ಷಕರು. ಬಹುಮುಖ ಪ್ರತಿಭೆ ಹೊಂದಿದ್ದ ಅವರು ವಿಶಿಷ್ಠ ಕಲಾಕೃತಿ ರಚನೆಯಲ್ಲಿ ಸಿದ್ಧಹಸ್ತರು. ಗಣೇಶನ ರ‍್ತಿ ತಯಾರಿಕೆಯಲ್ಲಿಯೂ ಪ್ರಸಿದ್ಧಿ ಪಡೆದಿದ್ದರು. ತಂದೆಯಿAದ ಬಳುವಳಿಯಾಗಿ ಬಂದಿದ್ದ ಚಿತ್ರಕಲೆಯನ್ನು ಕೆ.ಸೋಮಶೇಖರ್ ಬಾಲ್ಯದಿಂದ ಮೈಗೂಡಿಸಿಕೊಂಡು ಬಂದಿದ್ದಾರೆ.
ತ್ಯಾಮಗೊAಡ್ಲು ರ‍್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸೋಮಶೇಖರ್, ಮಕನಕುಪ್ಪೆ ತಿಮ್ಮೇಗೌಡ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದರು. ನಂತರ ಶೇಷಾದ್ರಿಪುರಂ ಕೆನ್ ಕಲಾ ಶಾಲೆಯಲ್ಲಿ ಪದವಿ ಪಡೆದರು. ಬಾದಾಮಿ ಕಲಾ ಶಿಕ್ಷಕ ರಾಮಪ್ಪ ಭೀಮಪ್ಪ ಹಡಪದ್ ರ‍್ಗರ‍್ಶನದಲ್ಲಿ ಕಲೆ ಕರಗತ ಮಾಡಿಕೊಂಡರು. ಕಲೆಯಲ್ಲಿ ವೃತ್ತಿ ಆರಂಭಿಸಿ, ಪ್ರಾರಂಭದಲ್ಲಿ ಸಾಹಿತಿಗಳ ಪುಸ್ತಕಗಳಿಗೆ ಮುಖಪುಟ ರಚನೆ, ವಾರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಥೆಗಳಿಗೆ ಚಿತ್ರ ಬರೆಯುತ್ತಿದ್ದರು. ಮೈಸೂರು, ಹೊಯ್ಸಳ ಶೈಲಿ, ಪೇಪರ್ ಕಟಿಂಗ್ ಮತ್ತು ಮಣ್ಣಿನ ರ‍್ತಿಗಳ ರಚನೆಯಲ್ಲಿ ಪರಿಣಿತಿ ಸಾಧಿಸಿದ್ದರು.
ನಾಡದೇವತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಆಯ್ಕೆ ಮಾಡಿ ಶಿಫಾರಸು ಮಾಡಲು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ನಾಡದೇವಿಯ ಚಿತ್ರ ಬರೆಯಲು ೫ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಐದು ಜನರಲ್ಲಿ ಸೋಮಶೇಖರ್ ಸಹ ಇದ್ದು, ಅಂತಿಮವಾಗಿ ಇವರು ಬರೆದ ನಾಡದೇವಿಯ ಚಿತ್ರವನ್ನು ಸಮಿತಿ ಆಯ್ಕೆ ಮಾಡಿದೆ.
ಈ ಬಗ್ಗೆ ಸಂತಸ ಹಂಚಿಕೊAಡ ಕೆ.ಸೋಮಶೇಖರ್ ಸಮಿತಿಯ ಮಾರ್ಗದರ್ಶನದಂತೆ ಮತ್ತು ನನ್ನ ಕಲಾ ಅನುಭವದ ಮೇಲೆ ನಾಡದೇವಿಯ ಚಿತ್ರ ರಚಿಸಿದೆ. ಮುಖದಲ್ಲಿ ದೇವಿ ಕಳೆ ಮತ್ತು ರ‍್ನಾಟಕ ಕಲೆ ಚಿತ್ರದಲ್ಲಿ ಚಿತ್ರಿಸುವ ಸವಾಲು ನನ್ನದಾಗಿತು. ಒಂದು ತಿಂಗಳ ಕಾಲಾವಧಿಯಲ್ಲಿ ನಾಡದೇವಿಯ ಚಿತ್ರವನ್ನು ರ‍್ಣಗೊಳಿಸಿದ್ದಾಗಿ ಹೇಳಿದ್ದಾರೆ. 

Post a Comment

0 Comments

Ad Code

Responsive Advertisement