ಬೆಂಗಳೂರು : ಸನ್ಯುಕ್ತ ಭಾರತೀಯ ಖೇಲ್ ಫೌಂಡೇಶನ್- ಎಸ್ ಬಿ ಕೆ ಎಫ್ ರವರು, ಇಂದು ಶ್ರೀ ಆರ್ಗನೈಸೇಶನ್-ಐ ಎಸ್ ಓ ರವರ ಸಹಕಾರದೊಂದಿಗೆ ನೇಪಾಳದ ಪೊಖರದಲ್ಲಿ 7 ನೇ ಅಂತರರಾಷ್ಟ್ರೀಯ ಕ್ರೀಡಾ ಕೂಟ 2022 ನ್ನು ಇದೇ ನವೆಂಬರ್ 16 ರಿಂದ 19 ರವರೆಗೂ ಆಯೋಜಿಸಲಾಗಿತ್ತು. ಮಹಿಳೆಯರು ಹಾಗೂ ಪುರುಷರು ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದ್ದ ಈ ಕ್ರೀಡಾ ಕೂಟದಲ್ಲಿ 30+, 40+, 50+, 60+, 70+, 80+ ವಯೋಮಾನದ ಕ್ರೀಡಾ ಪಟುಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಾನಾ ಬಗೆಯ ಆಟೋಟ ಸ್ಪರ್ಧೆಗಳನ್ನು ಕ್ರೀಡಾಕೂಟದಲ್ಲಿ ಆಯೋಜಿಸಲಾಗಿತ್ತು.
ಭಾರತ, ನೇಪಾಳ, ಭೂತಾನ ಹಾಗೂ ಕತಾರ್ ದೇಶಗಳ ತಂಡಗಳ ನಡುವಿನ 40-50 ವರ್ಷ ವಯೋಮಾನದ ವಿಭಾಗದಲ್ಲಿ ನಡೆದ ಪಂದ್ಯಾವಳಿಗಳಲ್ಲಿ, ನಮ್ಮ
ಭಾರತ ದೇಶವನ್ನು ಪ್ರತಿನಿಧಿಸಿದ, ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರಿನ ಮಹಿಳಾ ಕಬ್ಬಡ್ಡಿ ತಂಡವು, ಎಲ್ಲಾ ತಂಡಗಳನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದು ದಾಖಲೆ ಮಾಡಿದ್ದಾರೆ.
ನಮ್ಮ ಬೆಂಗಳೂರಿನ ಯಶವಂತಪುರದ ಮಾತಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಕಬ್ಬಡಿ ತರಭೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಎಸ್. ಮಂಜುನಾಥ್ ರವರ ನೇತೃತ್ವದಲ್ಲಿ ನೇಪಾಳದ ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿ, ಕಬಡ್ಡಿ ಪಂದ್ಯಾವಳಿಯಲ್ಲಿ ಸಿ.ಶೋಭಾರವರ ನಾಯಕತ್ವದಲ್ಲಿ ಚಿನ್ನದ ಪದಕ ಗೆದ್ದ ತಂಡದಲ್ಲಿ ದಾಕ್ಷಾಯಿಣಿ, ಸುಧಾಮಣಿ, ಇಂದ್ರಮ್ಮ, ಸುಮಿತ್ರ, ರಜಿಯಾ, ನೂರಜಹಾನ್ ಹಾಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರೊಂದಿಗೆ ತಂಡದ ಇತರೆ ಸದಸ್ಯೆಯರಾದ ಸಿ.ಮಮತ, ಮಂಜುಳ, ಲಕ್ಷ್ಮೀಬಾಯಿ, ಜ್ಯೋತಿ, ರೇಖಾ ಮುಂತಾದ ಆಟಗಾರರು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು.
ಕಬಡ್ಡಿ ಪಂದ್ಯದಲ್ಲಿ ಸಂಘಟಿತರಾಗಿ ಚಿನ್ನ ಗೆದ್ದ ತಂಡದ ಸದಸ್ಯರು, ಇದೇ ಕ್ರೀಡಾಕೂಟದಲ್ಲಿ ನಡೆದ ಇತರೆ ಆಟದ ಸ್ಪರ್ಧೆಗಳಲ್ಲೂ ವೈಯಕ್ತಿಕವಾಗಿ ಭಾಗವಹಿಸಿ, ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಈ ತಂಡದ ನೇಪಾಳ ಪ್ರವಾಸವನ್ನು ಖ್ಯಾತ ಚಿತ್ರನಿರ್ಮಾಪಕರು ಹಾಗೂ ಸಮಾಜ ಸೇವಕರಾದ ಸುರೇಶ್ ಗೌಡರು,
ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರು ಹಾಗೂ ಮಾತಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಆಗಿರುವ ಡಾ.ಜಿ.ಎಸ್.ಚೌಧರಿರವರ ಹಾಗೂ ಅವರ ಮಿತ್ರರ ತಂಡವು ಆರ್ಥಿಕ ನೆರವನ್ನು ಒದಗಿಸುವ ಮೂಲಕ, ಪ್ರಾಯೋಜಕತ್ವ ನೀಡಿ ತಮ್ಮನ್ನು ಪ್ರೋತ್ಸಾಹಿಸಿದ್ದಕ್ಕೆ ಈ ಸಾಧನೆ ಮಾಡಲು ತಮ್ಮೆಲ್ಲರಿಗೂ ಈ ಅವಕಾಶ ಲಭ್ಯವಾಯಿತು.
ಎಂಬುದಾಗಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ ಆಟಗಾರರೆಲ್ಲರೂ, ಮನಃಪೂರ್ವಕವಾಗಿ ಎಲ್ಲರಿಗೂ ಕೃತಜ್ಞತೆಯನ್ನು ತಿಳಿಸಿದರು.



0 Comments