ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಲಿಯೋ ಕ್ಲಬ್ ಆಪ್ ಕಿರಣ ಹಾಗೂ ಶ್ರೀ ಶಾರದ ಎಜುಕೇಷನ್ ಟ್ರಸ್ಟ್ ಇವರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಹಾಗೂ ಡಾಕ್ಟರೇಟ್ ಪುರಸ್ಕೃತ ಡಾ.ಕೆ.ಮೂರ್ತಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ ರಾಜಣ್ಣರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕಟ್ಟ ಕಡೆಯ ವ್ಯಕ್ತಿಯಿಂದ ರಾಷ್ಟ್ರಪತಿಯವರೆಗೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕೆಂದು ಎಂದರು.
ಪ್ರಜಾಪ್ರಭುತ್ವಕ್ಕೆ ಬಲ ನೀಡುವ, ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆ ಕಾಪಾಡುವ ನಮ್ಮ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಆಶಯ ಭಾರತದ ಕಟ್ಟ ಕಡೆಯ ವ್ಯಕ್ತಿಒಗೂ, ಸ್ವಾಭಿಮಾನದ ಘನತೆಯ ಬದುಕಿಗೆ ಆಸರೆ ಮತ್ತು ಭರವಸೆಯೇ ನಮ್ಮ ಹೆಮ್ಮೆಯ ಸಂವಿಧಾನ ಎಂದು ತಿಳಿಸಿದರು.
ಭಾರತದ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ನಂತರ ಎ.ಎಸ್.ಪಿ ಕುಶಾಲ್ ಚೌಕ್ಸಿ ಅವರು ಮಾತನಾಡಿ ಭಾರತಕ್ಕೆ ಸಂವಿಧಾನವನ್ನು ಕೊಟ್ಟ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಇಂದು ಸ್ಮರಿಸಬೇಕು. ಸಂವಿಧಾನವೇ ಇಲ್ಲದೇ ಇದ್ದರೆ ನಮಬಗೆ ಬದಕುವುದಕ್ಕೂ ಸಹ ತುಂಬಾ ಕಷ್ಟವಾಗುತ್ತಿತ್ತು. ಅಂಬೇಡ್ಕರ್ ಅವರು ನಮ್ಮ ದೇಶದ ಬಡ ಮತ್ತು ಶೋಷಿತ ವರ್ಗಗಳಿಗೆ ಸಂವಿಧಾನವೆಂಬ ಆರದ ದೀಪವನ್ನು ಕೊಟ್ಟು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ ಸಮಾನತೆಯ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ ಎಂದರು.
ಎಆರ್ ಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ ಮೂರ್ತಿ ಸಾಮ್ರಾಟ್ ಅವರಿಗೆ ಮಾಜಿ ಶಾಸಕ ಎಂ ರಾಜಣ್ಣ,ಹಾಗೂ ಅಧ್ಯಕ್ಷರಾದ ಎ.ಆರ್ ಮುನಿರತ್ನಂ ರವರಿಂದ ಡಾಕ್ಟರೇಟ್ ಪುರಸ್ಕೃತ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದ್ಭದಲ್ಲಿ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕ ಮಹೇಶ್ ಮೌಲ್ಯ, ಕಸಾಪ ಅಧ್ಯಕ್ಷ ಅನಂತ್ ಕೃಷ್ಣ, ಕಾರ್ಯದರ್ಶಿ ಶ್ರೀಕಾಂತ್,ನಗರ ಸಭೆಯ ಉಪಾಧ್ಯಕ್ಷ ಅಪ್ಸರ್ ಪಾಷಾ,ದ್ಯಾವಪ್ಪ,ಕೃಷ್ಣಮೂರ್ತಿ, ಟಿಎ ಚಲಪತಿ ,ಲಿಯೋ ಕ್ಲಬ್ ನವೀನ್,ಶ್ರೀಕಾಂತ್,ಲೋಕೇಶ್,ಡಾಲ್ಫಿನ್ ಕಾಲೇಜು ಪ್ರಾಂಶುಪಾಲ ಮುನಿಶಾಮಿರೆಡ್ಡಿ, ವಿಧ್ಯಾರ್ಥಿಗಳು ಭಾಗವಹಿಸಿದ್ದರು.

0 Comments