Ticker

6/recent/ticker-posts

Ad Code

Responsive Advertisement

ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ದಿನಾಚರಣೆ

ಕೊಳ್ಳೇಗಾಲ ಸುದ್ದಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ ಜಿಲ್ಲೆ,
ತಾಲ್ಲೂಕು ಸೇವೆಗಳ ಪ್ರಾಧಿಕಾರ, ಕೊಳ್ಳೇಗಾಲ,
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲ ಸಂಘ ಕೊಳ್ಳೇಗಾಲ ಇವರ ಸಹಯೋಗದಲ್ಲಿ ನವೆಂಬರ್ 2

6 ರ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ವಕೀಲ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು,

ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಎನ್. ಆರ್. ಲೋಕಪ್ಪ ರವರು ಮಾತನಾಡಿ ಈ ದಿನ ಭಾರತ ಸ್ವಾತಂತ್ರವಾದ ಮೇಲೆ ಈ ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು  ಸಮರ್ಪಣೆ ಮಾಡಿದ ದಿನ  ಇದು ಮಹತ್ವ ವಾದ ದಿನ ಎಂದು ಹೇಳಬಹುದು,
ದೇಶದ ಪ್ರಜೆಗಳಾದ ನಾವು ಸಾಮಾಜಿಕ, ಆರ್ಥಿಕ, ಶಿಕ್ಷಣ, ರಾಜಕೀಯ, ಸ್ಥಾನಮಾನಗಳನ್ನು ಪಡೆದುಕೊಂಡು ಶಾಂತಿ ಬಾತೃತ್ವದಿಂದ ಸಹೋದರತೆಯಿಂದ ಶಾಂತಿ ಸುವ್ಯವಸ್ತೆಯಿಂದ ಜೀವನ ನಡೆಸಲು ನಮಗೆ ನಾವೇ ಅರ್ಪಿಸಿಕೊಂಡು ಸಂವಿಧಾನ ಇದು, ಈ ಸಂವಿಧಾನಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕು, ವಿಶ್ವವೇ ಮೆಚ್ಚುವಂತ ಈ ಸಂವಿಧಾನಕ್ಕೆ ನಾವೆಲ್ಲರೂ ವಿದೇಯರಾಗಿರಬೇಕು, ಎಂದು ಹೇಳಿದರು, ನಂತರ ಕಾರ್ಯಕ್ರಮದಲ್ಲಿ ನ್ಯಾಯಧೀಶರು ವಕೀಲರು ಒಮ್ಮತವಾಗಿ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶರು ಹಾಗು ವಕೀಲ ಸಂಘದ ಅಧ್ಯಕ್ಷರಾದ ಆನಂದ ಎಂ,
ಪ್ರಧಾನ ಸಿವಿಲ್ ನ್ಯಾಯಧೀಶರಾದ ನಂದಿನಿ ಎಂ. ಎನ್. ಅಪರ ಸಿವಿಲ್ ನ್ಯಾಯಧೀಶರಾದ ಸಿ. ಜೆ. ರಘು, ವಕೀಲ ಸಂಘದ ಉಪಾಧ್ಯಕ್ಷೆ ಸೀಮಾತಹಸೀನ್ ಸುಲ್ತಾನ್, ವಕೀಲ ಸಂಘದ ಕಾರ್ಯದರ್ಶಿ ಮೋಹನ್ ಕುಮಾರ್,
ಹಿರಿಯ ವಕೀಲರಾದ ಎಂ. ಮಲ್ಲಿಕಾರ್ಜುನ, ಎಂ. ಮಾದಪ್ಪ, ನಾಗರಾಜು,, ರಾಜು, ಕೆಂಪರಾಜು, ಮಹೇಶ್, ಸಂದೀಪ್, ಗೋಪಾಲನಾಯ್ಕ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement