ಕೊಳ್ಳೇಗಾಲ ಸುದ್ದಿ : ಕೊಳ್ಳೇಗಾಲ ಪಟ್ಟಣದಲ್ಲಿ ನಿರ್ಮಾಣವಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ನಲ್ಲಿ ಪುತ್ತಳಿ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಲಾಗಿದ್ದು ,ಬೆಂಗಳೂರಿನಿಂದ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗೆ ಆಗಮಿಸಿದ ಅಂಬೇಡ್ಕರ್ ಪುತ್ತಳಿಯನ್ನು ಅಲಂಕೃತ ವಾಹನದಲ್ಲಿ ಇರಿಸಿಲಾಗಿದ್ದು ಹ್ಯಾಂಡ್ ಪೋಸ್ಟ್ ಬಳಿ ಪ್ರತಿಮೆ ನಿರ್ಮಾತೃ ವಾಲೆ ಮಹಾದೇವ ಹಾಗೂ ಹನೂರು ಶಾಸಕ ಆರ್. ನರೇಂದ್ರರವರು ಪಾಲ್ಗೊಂಡಿದ್ದು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು,
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಯನ್ನು ಸ್ವಾಗತಿಸಲು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ತಾಲ್ಲೂಕಿನ ಅನೇಕ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು
ಪ್ರತಿಮೆ ಬರುತ್ತಿದಂತೆ ಪಟಾಕಿ ಸಿಡಿಸಿ ಹರ್ಷೋದ್ಘಾರವನ್ನು ಮಾಡಿ ಪ್ರತಿಮೆಯನ್ನು ಸ್ವಾಗತಿಸಿ ಬರಮಾಡಿ ಕೊಂಡರು,
ವಾದ್ಯ ಮೇಳ, ತಮಟೆ, ಡೊಳ್ಳು ಕುಣಿತ ನಗಾರಿ ಹಾಗೂ ವಿವಿಧ ಕಲಾ ತಂಡಗಳೊಡನೆ ರಸ್ತೆ ಉದ್ದಕ್ಕೂ ಮೆರವಣಿಗೆ ಮಾಡಲಾಯಿತು,
ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿಂದ ಮಾರ್ಗ ಮದ್ಯ ಸಿಗುವ ಸತ್ತೇಗಾಲ, ಧನಗೆರೆ, ಸರಗೂರು, ನರಿಪುರ, ಹೊಸ ಅಣಗಳ್ಳಿ ಗ್ರಾಮಗಳಲ್ಲಿ ನೂರಾರು ಅಭಿಮಾನಿಗಳು ಪ್ರತಿಮೆ ಸ್ವಾಗತಕ್ಕೆ ಕಾದು ಕುಳಿತ್ತಿದ್ದು, ಪ್ರತಿಮೆ ಪುಷ್ಪ ಮಳೆಯನ್ನು ಸುರಿಸಿ ಪೂಜೆ ಸಲ್ಲಿಸಿದರು,
ಒಂದೊಂದು ಗ್ರಾಮಗಳಲ್ಲಿಯೂ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಮಜ್ಜಿಗೆ ಪಾನಕವನ್ನು ನೀಡಿದರು,
ಸಾವಿರಾರು ಸಂಖ್ಯೆಯ ಜನಸ್ತೋಮದ ನಡುವೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಮೆರವಣಿಗೆಯಲ್ಲಿ ಆಗಮಿಸಿ ಇತಿಹಾಸವನ್ನ ಸೃಷ್ಟಿಸಿದೆ,
ಗುತ್ತಿಗೆದಾರ ವಾಲೆ ಮಹಾದೇವ ರವರ ಮಹತ್ವ ಪೂರ್ವ ಕೆಲಸಕ್ಕೆ ಹಿಡಿ ತಾಲ್ಲೂಕಿನಲ್ಲಿಯೇ ಅಭೂತ ಪೂರ್ವ ಗೌರವ ಲಭಿಸಿದೆ, ಬಾಬಾ ಸಾಹೇಬ್ ಪ್ರತಿಮೆ ಇರಿಸಲಾಗಿದ್ದ ವಾಹನದಲ್ಲಿ ಪ್ರತಿಮೆ ನಿರ್ಮಾತೃ ವಾಲೆ ಮಹಾದೇವ ರವರ ಕುಟುಂಬವರು ನಿಂತಿದ್ದು ಒಂದೊಂದು ಗ್ರಾಮದಲ್ಲಿಯೂ ಸೇರಿದ್ದ ಜನರು ವಾಲೆ ಮಹಾದೇವರಿಗೆ ಜೈಕಾರ ಕೂಗಿ ಗೌರವ ಸಲ್ಲಿಸಿದರು,
ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿಂದ ಹೊರಟ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿ ಮೆರವಣಿಗೆ ಕೊಳ್ಳೇಗಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐ ಬಿ ಸರ್ಕಲ್, ಎಂ. ಜಿ. ಎಸ್ ವಿ ಕಾಲೇಜು ರಸ್ತೆ ಮಾರ್ಗವಾಗಿ ಮಸೀದಿ ಸರ್ಕಲ್ ಮುಖಾಂತರ ಅಂಬೇಡ್ಕರ್ ಸರ್ಕಲ್ ತಲುಪಿ ಬೌದ್ಧ ಬಿಕ್ಕುಗಳ ಧಮ್ಮ ವಿಧಿವಿಧಾನಗಳೊಡನೆ ಮಂಟಪದಲ್ಲಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು,
ಪ್ರತಿಮೆ ಮೆರವಣಿಗೆಯಲ್ಲಿಹನೂರು ಶಾಸಕ ಆರ್. ನರೇಂದ್ರ, ಕೊಳ್ಳೇಗಾಲ ಮಾಜಿ ಶಾಸಕ ಜಯಣ್ಣ, ಬಾಲರಾಜು, ಜಿ. ನಂಜುಂಡ ಸ್ವಾಮಿ ಹಾಗೂ ಇನ್ನಿತರರು ಇದ್ದರು
0 Comments