Ticker

6/recent/ticker-posts

Ad Code

Responsive Advertisement

ವಾಹನ ಕಳವು ಮಾಡುತ್ತಿದ್ದ ಆರೋಪಿ ಬಂಧನ, 1.6 ಲಕ್ಷ ರೂ. ಬೆಲೆಯ ವಾಹನಗಳ ವಶ

ವಾಹನ ಕಳವು ಮಾಡುತ್ತಿದ್ದ ಆರೋಪಿ ಬಂಧನ, 1.6 ಲಕ್ಷ ರೂ. ಬೆಲೆಯ ವಾಹನಗಳ ವಶ.

ದಿನಾಂಕ 24-11-2022 ರಂದು ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಜನನಿ ಹೋಟೇಲ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಆತನ ಹಿಡಿದುಕೊಂಡು ವಿಚಾರಣೆ ಮಾಡಲಾಗಿ, ಸುಬ್ರಮಣ್ಯನಗರ ಪೊಲೀಸ್ ಠಾಣಾ ಮೊ.ಸಂ. 152/2021 ಕಲಂ 379 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯಾಗಿರುವುದಾಗಿ ತಿಳಿದು ಬಂದಿರುತ್ತದೆ. 

ಈ ಪ್ರಕರಣದಲ್ಲಿ ಸದರಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 1.6 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 3 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಯ ಬಂಧನದಿಂದ ಒಟ್ಟು 3 ದ್ವಿಚಕ್ರವಾಹನಗಳ ಪತ್ತೆಯಾಗಿರುತ್ತವೆ. ಅದರಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಯ-1 ಪ್ರಕರಣ ಪತ್ತೆಯಾಗಿರುತ್ತದೆ. ಉಳಿದ 2 ದ್ವಿಚಕ್ರವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.  

ಈ ಪ್ರಕರಣದಲ್ಲಿ ಪ್ರವೀಣ್ ಎಂ., ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶರಣಗೌಡ ವಿ.ಹೆಚ್., ಪೊಲೀಸ್ ಇನ್ಸ್‍ಪೆಕ್ಟರ್, ಸುಬ್ರಮಣ್ಯನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ಅಮರಯ್ಯ ಹೆಚ್. ಪಿಎಸ್‍ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ  ಗುಣಶೇಖರ್,  ಬಿ.ಎನ್. ನಟರಾಜು,  ಹೆಚ್.ಆರ್. ನರಸಿಂಹಮೂರ್ತಿ, ಜಗದೀಶ್,  ರಂಜಿತ್‍ಕುಮಾರ್, ಚಂದ್ರಕಾಂತ್, ಧರಣೇಶ್  ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. 


Post a Comment

0 Comments

Ad Code

Responsive Advertisement