Ticker

6/recent/ticker-posts

Ad Code

Responsive Advertisement

ವಾಹನ ಕಳವು ಪ್ರಕರಣ 2 ಆರೋಪಿಗಳ ಬಂಧನ: 10 ದ್ವಿಚಕ್ರವಾಹನಗಳ ವಶ.

ಉತ್ತರ ವಿಭಾಗದ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ, ದ್ವಿಚಕ್ರವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 02 ಆರೋಪಿಗಳ ಬಂಧನ, ಸುಮಾರು 8.1 ಲಕ್ಷ ರೂ. ಮೌಲ್ಯದ 13 ದ್ವಿಚಕ್ರವಾಹನಗಳ ವಶ.

ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 6.5 ಲಕ್ಷ ರೂ. ಬೆಲೆ ಬಾಳುವ ಸುಮಾರು ವಿವಿಧ ಕಂಪನಿಯ 10 ದ್ವಿಚಕ್ರವಾಹನಗಳ ವಶ.

14-06-2022 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ತಮ್ಮ ಯಮಹಾ ದ್ವಿಚಕ್ರವಾಹನವನ್ನು ಮೇಲ್ಕಂಡ ವಿಳಾಸದ ತಮ್ಮ ಮನೆಯ ಮುಂದೆ ನಿಲ್ಲಿಸಿ, ಮರು ದಿನ ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ಬಂದು ನೋಡಲಾಗಿ ತಮ್ಮ ದ್ವಿಚಕ್ರವಾಹನ ಇರಲಿಲ್ಲ. ಯಾರೋ ಕಳ್ಳರು ತಮ್ಮ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.

ಸುಬ್ರಮಣ್ಯನಗರ ಠಾಣೆ ಅಪರಾಧ ವಿಭಾಗದ ಸಿಬ್ಬಂದಿ ಆರ್.ಪಿ. ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಒಬ್ಬ ಹುಡುಗ ದ್ವಿಚಕ್ರವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದನ್ನು ಗಮನಿಸಿ, ತಡೆದು ವಿಚಾರ ಮಾಡಲಾಗಿ ಕಳವು ಮಾಡಿರುವ ದ್ವಿಚಕ್ರವಾಹನವೆಂದು ತಿಳಿದು ಬಂದಿದ್ದರಿಂದ ದ್ವಿಚಕ್ರವಾಹನದ ಸಮೇತ ಠಾಣೆಗೆ ಕರೆ ತಂದು ಹೆಚ್ಚಿನ ವಿಚಾರಣೆ ಮಾಡಲಾಗಿರುತ್ತದೆ. 

ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನು ನೀಡಿದ ಮಾಹಿತಿ ಮೇರೆಗೆ ಸುಮಾರು 6.5 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 10 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸುಬ್ರಮಣ್ಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ವೀಲಿಂಗ್ ಮಾಡುವ ಉದ್ದೇಶದಿಂದ ಕಳವು ಮಾಡಿ, ಸ್ವಲ್ಪ ದಿನಗಳ ನಂತರ ಯಾರಿಗಾದರೂ ಮಾರಾಟ ಮಾಡಿ ಬಂದ ಹಣದಿಂದ ಮೋಜಿನ ಜೀವನ ನಡೆಸಲು ಕಳವು ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. 2021ನೇ ಸಾಲಿನ ಆಕ್ಟೋಬರ್ ಮಾಹೆಯಲ್ಲಿ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದು ಮೈಸೂರು ನಗರ ಮತ್ತು ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಮನೆಗಳ ಮುಂದೆ ಬೀಗ ಹಾಕಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳನ್ನು ಲಾಕ್ ಮುರಿದು ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.  

ಆರೋಪಿಯ ಬಂಧನದಿಂದ ಸುಬ್ರಮಣ್ಯನಗರ-2, ಹೆಬ್ಬಾಳ-1, ಬಾಣಸವಾಡಿ-1, ಮೈಸೂರು ನಗರ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ-1 ದ್ವಿಚಕ್ರವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 5 ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ. ಉಳಿದ 5 ದ್ವಿಚಕ್ರವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. 

Post a Comment

0 Comments

Ad Code

Responsive Advertisement