Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರಂ 13 ನೇ ಕ್ರಾಸ್ ನಲ್ಲಿ ಆಟೋ ಚಾಲಕರಿಂದ ಸಂಭ್ರಮದ ರಾಜ್ಯೋತ್ಸವ

ಬೆಂಗಳೂರು : ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದಲ್ಲಿ, ಮುನೇಶ್ವರ ಭಕ್ತ ಮಂಡಳಿ ಆಟೋ ಚಾಲಕರ ಸಂಘದ ವತಿಯಿಂದ ಮಲ್ಲೇಶ್ವರಂ 13 ನೇ ಕ್ರಾಸ್‍‌ ನಲ್ಲಿ  ಆಟೋ ನಿಲ್ದಾಣದ ಗೆಳೆಯರ ಬಳಗದವರು ಕಳೆದ ಇಪ್ಪತ್ನಾಲಕ್ಕು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವಂತೆ, ಈ ಬಾರಿಯೂ ಸಂಭ್ರಮದಿಂದ ಆಯೋಜಿಸಿದ್ದ 67 ನೇ ಕನ್ನಡ ರಾಜ್ಯೋತ್ಸವವನ್ನು ಖ್ಯಾತ ಚಿತ್ರ ನಿರ್ಮಾಪಕರು ಹಾಗೂ ಸಮಾಜ ಸೇವಕರು ಆದ ಡಿ.ಸುರೇಶ್ ಗೌಡ್ರು, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್  ಹಾಗೂ ಜೈ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಜಗದೀಶ್  ಗೌಡರವರುಗಳು ಕನ್ನಡ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




ಈ ವೇಳೆ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ (ಕೆ.ಪಿ.)  ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಆರ್.ಕೆ.ರಾಜು, ಕೇಶವ್ ಇನ್ನೂ ಮುಂತಾದವರೊಂದಿಗೆ ಸಂಘದ ಎಲ್ಲಾ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ   ಸಾರ್ವಜನಿಕರು  ಭಾಗವಹಿಸಿದ್ದರು. ಈ ವೇಳೆ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

Post a Comment

0 Comments

Ad Code

Responsive Advertisement