Ticker

6/recent/ticker-posts

Ad Code

Responsive Advertisement

ಕವಿ ಪ್ರತಿಮೆಗಳಿಗೆ ಮಾಲಾರ್ಪಣೆ, ‘ಕನ್ನಡ ಗೆಳೆಯರ ಬಳಗ-೩೭’ರ ಸಂಭ್ರಮ, ಕನ್ನಡ ಚಿಂತನೆ

ಕನ್ನಡ ಗೆಳೆಯರ ಬಳಗವು ೧೯೯೫ರಿಂದ ನಿರಂತರವಾಗಿ ಪ್ರತಿ ವರ್ಷ ರಾಜ್ಯೋತ್ಸವದಂದು ಕುವೆಂಪು, ಬಿ.ಎಂ.ಶ್ರೀ. ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ಕನ್ನಡ ಚಿಂತನ ಸಭೆಯನ್ನು ನಡೆಸಿಕೊಂಡು ಬಂದಿದೆ. ೦೧-ನವೆಂಬರ್-೨೦೨೨ರಂದು ತೀ.ನಂ.ಶ್ರೀ. ಪ್ರತಿಮೆಗೆ ಡಾ. ಶಾರದ ನಾಗಭೂಷಣ, ಕುವೆಂಪು ಪ್ರತಿಮೆಗೆ ಭಾರ್ಗವಿ ಹೇಮಂತ್, ಬಿ.ಎಂ.ಶ್ರೀ. ಪ್ರತಿಮೆಗೆ ಹ.ನ. ವಸಂತಕುಮಾರಿ, ಎಚ್.ಎನ್. ಪ್ರತಿಮೆಗೆ ಎಸ್. ಮಂಜುಳಾಂಬ ಮಾಲಾರ್ಪಣೆ ಮಾಡುತ್ತಾರೆ.  

ನಂತರ ಬೆಳಗ್ಗೆ ೮.0೦ಕ್ಕೆ ಬಸವನಗುಡಿ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆ ಎದುರು ‘ಕನ್ನಡ ಗೆಳೆಯರ ಬಳಗ-೩೭ ಸಂಭ್ರಮ’  ಕನ್ನಡ ಚಿಂತನ ಸಭೆ ನಡೆಯಲಿದ್ದು  ಸಭೆಯಲ್ಲಿ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ. ತೀ.ಶ್ರೀ ನಾಗಭೂಷಣ, ಬಳಗದ ಸ್ಥಾಪಕ ಸದಸ್ಯ ಹಿರಿಯ ಕನ್ನಡ ಪರಿಚಾರಕ ಎನ್. ದೇವಿಕುಮಾರ್ ಅವರಿಗೆ ಗೌರವಾರ್ಪಣೆ, ಖ್ಯಾತ ಸಂಶೋಧಕಿ ಡಾ. ಸ್ಮಿತಾರೆಡ್ಡಿ ಅವರು ಕನ್ನಡ ಚಿಂತನೆ ನಡೆಸಲಿದ್ದಾರೆ. ಹಲವು ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

Post a Comment

0 Comments

Ad Code

Responsive Advertisement