Ticker

6/recent/ticker-posts

Ad Code

Responsive Advertisement

ದೀಪಗಳ ವಿಧಗಳು ! - ದೀಪಾವಳಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ

ಮಾನವನು ಅನೇಕ ಶತಮಾನಗಳಿಂದ ಹಲವಾರು ರೀತಿಯ ದೀಪಗಳನ್ನು ನಿರ್ಮಿಸಿದನು ಮತ್ತು ಇಂದಿಗೂ ನಿರ್ಮಿಸುತ್ತಿದ್ದಾನೆ. ಅವು ಪ್ರಮುಖವಾಗಿ ಈ ೩ ವಿಧಗಳಲ್ಲಿ ಬರುತ್ತವೆ. ಎಣ್ಣೆಯ ದೀಪಗಳು, ಗ್ಯಾಸಿನ ದೀಪಗಳು ಹಾಗೂ ವಿದ್ಯುತ್ ದೀಪಗಳು. ಇವುಗಳಲ್ಲದೇ ಸೌರ ಶಕ್ತಿಯ ದೀಪಗಳಿದ್ದರೂ ಅವು ‘ವಿದ್ಯುತ್ ದೀಪ’ ಈ ವಿಧದಲ್ಲಿಯೇ ಬರುತ್ತವೆ.

ಪ್ರಾಚೀನ ಕಾಲದಲ್ಲಿ ಸಮುದ್ರದಲ್ಲಿನ ಚಿಪ್ಪು ಅಥವಾ ತಗ್ಗುಗಳು ಬಿದ್ದಿರುವ ಕಲ್ಲುಗಳನ್ನು ಉಪಯೋಗಿಸಿ ತಯಾರಿಸಿದ ದೀಪಗಳನ್ನು ಬಳಸುವ ರೂಢಿಯಿತ್ತು. ದೀಪಗಳನ್ನು ತಯಾರಿಸಲು ಕೆಲವು ವನಸ್ಪತಿಗಳ ಬತ್ತಿಗಳನ್ನು ಬಳಸುತ್ತಿದ್ದರು. ಪುರಾತನ ಕಾಲದಲ್ಲಿ ಜನರು ತಗ್ಗುಗಳನ್ನು ಮಾಡಿದ ಕಲ್ಲು ಬಳಸುತ್ತಿದ್ದರು. ಅದರಲ್ಲಿ ಹತ್ತಿಯ ಬತ್ತಿ ಹಾಗೂ ಎಣ್ಣೆಯಿರುತ್ತಿತ್ತು. ಪಂಜು ಅಥವಾ ದೀವಟಿಗೆಗಳೂ ಪ್ರಕಾಶ ದೀಪಗಳೇ ಆಗಿವೆ. ಪೇಶ್ವೆಗಳ ಕಾಲದಲ್ಲಿ ಕೆಲವು ವಿದ್ವಾಂಸರನ್ನು ಪಲ್ಲಕ್ಕಿಯಲ್ಲಿ ತೆಗೆದುಕೊಂಡು ಹೋಗುವಾಗ ಹಗಲಿನಲ್ಲಿಯೂ ಪಂಜುಗಳನ್ನು ಹಚ್ಚಿಕೊಂಡು ಹೋಗಿ, ಅವರ ವಿದ್ವತ್ತನ್ನು ಗೌರವಿಸಲಾಗುತ್ತಿತ್ತು. ಹಿಂದೆ ಪಂಜುಗಳನ್ನು ಅಥವಾ ದೀವಟಿಗೆಗಳನ್ನು ಹಚ್ಚಿಕೊಂಡು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗುತ್ತಿದ್ದರು. ಹಿಂದೆ ಕೋಟೆಗಳಲ್ಲಿ ರಾತ್ರಿಯ ಸಮಯದಲ್ಲಿ ಕಾವಲನ್ನು ಕಾಯುವ ಸೈನಿಕರಿಗೆ ಇದೇ ಪಂಜುಗಳ ಆಧಾರವಿತ್ತು. ಹಿಂದೆ ಸಭೆಗಳು, ಹಾಗೆಯೇ ದೇವಸ್ಥಾನಗಳಲ್ಲಿ ಪ್ರವಚನಗಳ ಸಮಯದಲ್ಲಿಯೂ ಪಂಜುಗಳನ್ನು ಅಥವಾ ದೀವಟಿಗೆಗಳನ್ನು ಬಳಸಲಾಗುತ್ತಿತ್ತು.

ನಯನಮನೋಹರ ದೀಪೋತ್ಸವ !

ಅನೇಕ ದೇವಾಲಯಗಳ ಪ್ರಾಂಗಣಗಳಲ್ಲಿ ಇಂದಿಗೂ ದೀಪಮಾಲೆ ಅಸ್ತಿತ್ವದಲ್ಲಿದೆ. ಹಬ್ಬ ಅಥವಾ ಉತ್ಸವಗಳ ದಿನ ಈ ದೀಪಗಳನ್ನು ಪ್ರಜ್ವಲಿಸಲಾಗುತ್ತದೆ. ಆಗ ಕಾಣಿಸುವ ನಯನಮನೋಹರ ರೂಪವು ಶಬ್ದಾತೀತವಾಗಿರುತ್ತದೆ. ದೇವಸ್ಥಾನಗಳ ಕೆಳಗಿನ ಮೆಟ್ಟಿಲಿನಿಂದ ಕಳಸದ ತನಕ ಮಾಡಲಾಗುವ ದೀಪಗಳ ಅಲಂಕಾರ ಮತ್ತು ಆಕರ್ಷಕ ಜೋಡಣೆಯು ಎಲ್ಲರಿಗೂ ತಿಳಿದಿದೆ. ಹರಿದ್ವಾರದಲ್ಲಿ ಗಂಗಾನದಿಯ ತೀರದಲ್ಲಿ ಇಂತಹ ಅಸಂಖ್ಯಾತ ದೀಪಗಳನ್ನು ನೀರಿನಲ್ಲಿ ಬಿಡಲಾಗುತ್ತದೆ. ನೀರಿನೊಂದಿಗೆ ಹರಿಯುತ್ತ ಹೋಗುವ ಈ ದೀಪಗಳು ಹಾಗೂ ಅವುಗಳ ನೀರಿನಲ್ಲಿನ ಪ್ರತಿಬಿಂಬಗಳ ನಯನಮನೋಹರ ದೃಶ್ಯವು ಮನಸ್ಸಿನಲ್ಲಿ ಮನೆ ಮಾಡುತ್ತದೆ.

ನೈಸರ್ಗಿಕ ದೀಪಗಳಾಗಿ ಹೊಳೆಯುವ ಅಸಂಖ್ಯಾತ ಮಿಂಚುಹುಳಗಳು !

ಮಿಂಚುಹುಳಗಳು ಕೂಡ ಪ್ರಕಾಶ ದೀಪಗಳೇ ಆಗಿವೆ. ಕರಾವಳಿ ಭಾಗದಲ್ಲಿ ಮಳೆಗಾಲದ ಮೊದಲು ಅಸಂಖ್ಯಾತ ಮಿಂಚು ಹುಳಗಳು ಮಿಂಚುತ್ತಾ ಹಾರುಡುತ್ತಿರುತ್ತವೆ. ಸಂಪೂರ್ಣ ಗಿಡವೇ ಅವುಗಳ ಪ್ರಕಾಶದಿಂದ ಮಿಂಚುತ್ತಿರುತ್ತದೆ. ಈ ಅಲಂಕಾರವು ಸಂಪೂರ್ಣ ನೈಸರ್ಗಿಕವಾಗಿದೆ ! ಈ ಆಕರ್ಷಕ ಹೊಳೆಯುವಿಕೆಯನ್ನು ಸತತ ನೋಡುತ್ತಲೇ ಇರಬೇಕು ಎಂದು ಅನಿಸುತ್ತದೆ. ಮಳೆಗಾಲ ಪ್ರಾರಂಭವಾದ ಕೂಡಲೇ ಈ ಹಾರಾಡುವ ದೀಪಗಳು ಎಲ್ಲಿ ಹಾರಿ ಹೋಗುತ್ತವೆ ಎಂಬುದು ತಿಳಿಯುವುದೇ ಇಲ್ಲ. ಅವು ಒಂದು ವರ್ಷದ ನಂತರ ಮುಂದಿನ ಮಳೆಗಾಲದ ಮೊದಲು ಪುನಃ ಕಾಣಿಸುತ್ತವೆ. ಅವು ಒಂದು ರೀತಿಯಲ್ಲಿ ಮಳೆಗಾಲದ ಸೂಚನೆಯನ್ನು ನೀಡುವ ನಿಸರ್ಗದೀಪಗಳೇ ಆಗಿವೆ.

ಭಾವಭಕ್ತಿಯನ್ನು ಹೆಚ್ಚಿಸುವ ಮನೆಗಳಲ್ಲಿನ ಸಾಯಂಕಾಲದ ಸಮಯದಲ್ಲಿ ಹಚ್ಚುವ ದೀಪ !

ದೀಪದೊಂದಿಗೆ ಮಾಂಗಲ್ಯದ, ಪಾವಿತ್ರ್ಯದ ಹಾಗೂ ಅದರಲ್ಲಿ ದೇವತ್ವವಿರುವುದರ ಭಾವನೆಯು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ಮೂಡಿದೆ. ಆದ್ದರಿಂದ ದೀಪ ಹಚ್ಚುವ ಸಮಯದಲ್ಲಿ ನಮ್ಮ ಕರಗಳು ತನ್ನಷ್ಟಕ್ಕೆ ಜೋಡಿಸಲ್ಪಡುತ್ತವೆ. ದೇವರಕೋಣೆ ಹಾಗೂ ತುಳಸಿ ವೃಂದಾವನಗಳಲ್ಲಿ ನೀಲಾಂಜನ ಅಥವಾ ಹಣತೆಯನ್ನು ಹಚ್ಚುವುದು ನಮ್ಮ ಪ್ರಾಚೀನ ಪರಂಪರೆಯಾಗಿದೆ. ಇತ್ತೀಚೆಗೆ ‘ಫ್ಲ್ಯಾಟ್ ಸಂಸ್ಕೃತಿ’ಗಳ ಯುಗದಲ್ಲಿ ತುಳಸೀ ವೃಂದಾವನ ಇತ್ಯಾದಿಗಳು ಕಾಣಿಸುವುದೇ ಇಲ್ಲ; ಆದರೆ ಹಳ್ಳಿಗಳಲ್ಲಿ ಅದೇ ರೀತಿ ದೇವಸ್ಥಾನಗಳಲ್ಲಿ ಮತ್ತು ಆಶ್ರಮಗಳಲ್ಲಿ ಮಾತ್ರ ಈ ಮಂಗಳ ಆಚರಣೆ ಈಗಲೂ ಕಾಣಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸುವ ‘ತಮಸೋ ಮಾ ಜ್ಯೋತಿರ್ಗಮಯ’ವನ್ನು ಹೇಳುವ ಹಾಗೂ ‘ಶುಭಂ ಕರೋತಿ ಕಲ್ಯಾಣಂ’ನಂತಹ ಮಂಗಲಮಯ ಸ್ತೋತ್ರಗಳನ್ನು ಹೇಳುವ ಭಾಗ್ಯ ಈಗ ಎಷ್ಟು ಮನೆಗಳಲ್ಲಿದೆ ? ದೀಪವು ಅಂಧಃಕಾರವನ್ನು ದೂರಗೊಳಿಸುವುದಾಗಿದ್ದರೂ, ಅದು ಯಾವ ಅಂಧಃಕಾರವನ್ನು ದೂರಗೊಳಿಸಬೇಕು ಎಂಬುದಕ್ಕೂ ಬೇರೆ ಬೇರೆ ನಂಬಿಕೆಗಳಿವೆ. ಅಂಧಃಕಾರವು ಕೇವಲ ಪ್ರಾಕೃತಿಕವಷ್ಟೇ ಆಗಿರುತ್ತದೆ ಎಂದೇನಿಲ್ಲ, ಬದಲಾಗಿ ಮಾನವನ ಜೀವನದಲ್ಲಿ ಅನೇಕ ವಿಧದ ನೆರಳು ಅಥವಾ ಕತ್ತಲೆಗಳು ಬರುತ್ತವೆ ಹಾಗೂ ಜೀವನವನ್ನು ಕಪ್ಪಾಗಿಸುತ್ತವೆ. ಆದ್ದರಿಂದ ಈ ಕತ್ತಲೆಯನ್ನು ದೂರ ಮಾಡಲು ದೀಪವು ಉಪಯೋಗವಾಗುತ್ತದೆ.

ಆಧಾರ : Sanatan.org/kannada

ಸಂಗ್ರಹ ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : ೯೩೪೨೫೯೯೨೯೯)

Post a Comment

0 Comments

Ad Code

Responsive Advertisement