Ticker

6/recent/ticker-posts

Ad Code

Responsive Advertisement

ಡಾ.ಯತೀಂದ್ರ ಸಿದ್ದರಾಮಯ್ಯರಿಂದ ಕೊಳ್ಳೇಗಾಲ ಪಟ್ಟಣದಲ್ಲಿ ರಂಗೇರಿದ ನಗರಸಭೆ ಚುನಾವಣೆಯ ಅಭ್ಯರ್ಥಿ ಪರ ಮತ ಪ್ರಚಾರ ,

ನಗರಸಭೆ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಹಿರಿಯ ಮುಖಂಡರುಗಳಾದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ , ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ದೃವನಾರಾಯಣ್, ಆರ್. ನರೇಂದ್ರ ರವರಿಂದ ಕೊಳ್ಳೇಗಾಲ ನಗರಸಭೆ ಅಭ್ಯರ್ಥಿಯ ಪರ ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರ ನಗರಸಭೆಯಲ್ಲಿ ತೆರವಾಗಿದ್ದ ಏಳು ಸ್ಥಾನಗಳ  ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ದಿಸಿರುವ  ಪೈಕಿ ನಗರಸಭೆಯ 26 ನೇ ವಾರ್ಡ್ ಗೆ ಸ್ಪರ್ದಿಸಿರುವ ಅಭ್ಯರ್ಥಿ ಸುನೀತಾರವರ  ಪರವಾಗಿ26 ನೇ ವಾರ್ಡ್ ನ ಶಂಕನಪುರ ದಲ್ಲಿ ಅಬ್ಬರದ ಪ್ರಚಾರವನ್ನು ನಡೆಸಿದರು,

 ನಂತರ ವೇದಿಕೆಯಲ್ಲಿ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಾ ಡಾ.ಯತೀಂದ್ರ ಸಿದ್ದರಾಮಯ್ಯ ರವರು ಮಾತನಾಡಿ ನಗರಸಭೆಯ 7 ವಾರ್ಡ್ ಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಲಾಗುತ್ತಿದ್ದೂ

ಏಳು ವಾರ್ಡ್ ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ,

ನಗರಸಭೆಯಲ್ಲಿ  ಬಿ. ಎಸ್.ಪಿ., ಪಕ್ಷದಿಂದ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಪಕ್ಷಕ್ಕೆ ದ್ರೋಹ ಬಗೆದು ಹಣದ ಆಸೆಗೆ ಮತ್ತೊಂದು ಪಕ್ಷಕ್ಕೆ ಹೋಗಿ ಸೇರಿದ್ದ ಕಾರಣ ಪಕ್ಷದ ಚಿನ್ಹೆಯಲ್ಲಿ ಗೆದ್ದು ಮತ್ತೊಂದು ಪಕ್ಷ ಕ್ಕೆ ಹೋದದ್ದರಿಂದ ಅವರ ಸದಸ್ಯತ್ವವನ್ನು ರದ್ದು ಪಡಿಸಲಾಗಿತ್ತು

ಬಿಎಸ್.ಪಿ ಯಿಂದ ಗೆದ್ದ ಶಾಸಕರ ಸಹಿತ ಎಲ್ಲ ಸದಸ್ಯರು ಸಹ ಪಕ್ಷ ದ್ರೋಹ ಬಗೆದು ಬಿಜೆಪಿ ಪಕ್ಷವನ್ನು ಸೇರಿ ಪಕ್ಷ ದ್ರೋಹ ಮಾಡಿದ್ದರಿಂದ ತಮ್ಮ ಸ್ಥಾನಗಳನ್ನ ಕಳೆದುಕೊಂಡಿದ್ದಾರೆ, ಈಗ ತೆರವಾಗಿರುವ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ ನಮ್ಮದು ನುಡಿದ್ದಂತೆ ನಡೆದ ಸರ್ಕಾರ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಗಳನ್ನು ಸಂಪೂರ್ಣವಾಗಿ ನೆರವೇರಿಸಿದೆ ಸಿದ್ದರಾಮಯ್ಯನವರು ಹಸಿದವರ ಹಸಿವನ್ನು ನೀಗಿಸಲು ಅನ್ನಭಾಗ್ಯ ಯೋಜನೆ ತಂದು ಒಬ್ಬರಿಗೆ 7 ಕೆ. ಜಿ ಅಕ್ಕಿಯನ್ನ ಕೊಟ್ಟಿದ್ದಾರೆ, ಕ್ಷೀರ ಭಾಗ್ಯವನ್ನು ಕೊಟ್ಟಿದೆ ಮನೆ ಮನೆಗೆ ಉಚಿತ ಗ್ಯಾಸ್ ಕೊಡಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾಸ್ ಬೆಲೆ 1200 ಆಗಿದೆ ಇದು ಬಡ ಜನರಿಗೆ ತುಂಬಾ ಅನಾನುಕೂಲ ಉಂಟು ಮಾಡಿದೆ, ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೇರಿದೆ,

ಬಡವರು ಮಧ್ಯಮ ವರ್ಗದವರು ಉಪಯೋಗಿಸುವ, ಬಳಸುವ ವಸ್ತುಗಳಿಗೆ ಬೆಲೆ ಏರಿಕೆ ಮಾಡಿ ಜಿಎಸ್ ಟಿ ಹಾಕಿ ಬಡವರನ್ನ ಸುಲಿಗೆ ಮಾಡುತ್ತಿದೆ, ಬಿಜೆಪಿ ಸರ್ಕಾರದಿಂದ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಜನ ವಿರೋಧಿ ಸರ್ಕಾರವನ್ನ ಸೋಲಿಸಿ ನಮ್ಮ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕಾಗಿದೆ ಆದ್ದರಿಂದ ನೀವೆಲ್ಲರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ  ಸುನೀತಾ ರವರಿಗೆ ನಿಮ್ಮ ಅಮೂಲ್ಯವಾದ ಮತಗಳನ್ನು ಹಾಕಿ ಜಯಶೀಲಾರನ್ನಾಗಿ ಮಾಡಿ ಸಿದ್ದರಾಮಯ್ಯರವರ ಕೈ ಬಲಪಡಿಸಬೇಕು ಎಂದರು,


ನಂತರ ಕೆ.ಪಿ.ಸಿ.ಸಿ., ಕಾರ್ಯಧ್ಯಕ್ಷರಾದ ಆರ್. ದೃವನಾರಾಯಣ್ ರವರು ಮಾತನಾಡಿ ಕಳೆದ ಚುನಾವಣೆಯಲ್ಲಿ ಬಿ.ಎಸ್. ಪಿ. ಪಕ್ಷದಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಶಾಸಕರ ಸಹಿತವಾಗಿ ಪಕ್ಷ ದ್ರೋಹ ಮಾಡಿ ಹಣ ಅಧಿಕಾರದ ಆಸೆಗೆ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ, ಇದೆ

ಬಿ.ಎಸ್. ಪಿ., ಪಕ್ಷದಲ್ಲಿ ಗೆದ್ದಿರುವಾ ಶಾಸಕರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕೊಳ್ಳೇಗಾಲವನ್ನ ಎರಡನೇ  ಸಿಂಗಪುರ ಮಾಡುತ್ತೇನೆ ದಲಿತರ ಏಳಿಗೆಗಾಗಿ ದುಡಿಯುತ್ತೇನೆ ಎಂದು ಜನರಿಗೆ  ಪೊಳ್ಳು ಭರವಸೆಗಳನ್ನು ಕೊಟ್ಟು ಬಿ.ಎಸ್. ಪಿ ಪಕ್ಷದ ತತ್ವ ಸಿದ್ದಾಂತಗಳಿಗೆ ದ್ರೋಹ ಬಗೆದು ಹಣದ ಆಸೆಗೆ ಬಿಜೆಪಿ ಪಕ್ಷವನ್ನು ಸೇರಿ ಜನರ ಆಶಯಗಳಿಗೆ ದ್ರೋಹ ಬಗೆದಿದ್ದಾರೆ,

ಆದ್ದರಿಂದ ಕೊಳ್ಳೇಗಾಲ ನಗರಸಭೇಯಲ್ಲಿ ಏಳು ಸದಸ್ಯರ ಸ್ಥಾನವನ್ನು ರದ್ದು ಪಡಿಸಲಾಗಿತ್ತು, ಈ ಹಿನ್ನಲೆ  ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ನಗರಸಭೆಯ ಏಳು ಸ್ಥಾನಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ, ಹಾಗೂ 26 ನೇ ವಾರ್ಡ್ ಗೆ ಸುನೀತಾರವರು ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದಾರೆ, ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಸರ್ಕಾರ ಕಳೆದ ಐದು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಸಾಲ  ಮನ್ನಾ ಮಾಡಿದೆ, ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನ ಜಾರಿ ಮಾಡಿದೆ ಹಳ್ಳಿ ಹಳ್ಳಿಗಳಿಗೆ ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಿಕೊಟ್ಟಿದೆ, ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳ ಜೊತೆ ಇನ್ನು ಹೆಚ್ಚಿನ ಯೋಜನೆಗಳನ್ನು ಜನತೆ ಕೊಟ್ಟು ಜನರ ವಿಶ್ವಾಸಕ್ಕೇ ಪಾತ್ರವಾದ ಸರ್ಕಾರ ನಮ್ಮದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆಯುತ್ತಿದೆ ಆದರೆ ಇದುವರೆಗೂ ಬಿಜೆಪಿ ಸರ್ಕಾರ ಜನತೆಗೆ ಯಾವುದೇ ಯೋಜನೆಗಳನ್ನು ಕೊಟ್ಟಿಲ್ಲ ಒಂದು ಅನುದಾನವನ್ನು ಕೊಟ್ಟಿಲ್ಲ ಬೆಲೆ ಏರಿಕೆ, ಜಿ ಎಸ್ ಟಿ ಯಂತ ಹೊರೆಯನ್ನು ಜನರ ಮೇಲೆ ಹೊರಿಸಿ ಜನರ ನೆಮ್ಮದಿಯನ್ನು ಹಾಳು ಮಾಡಿದೆ, ಜನತಾ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಿ ಕಾಂಗೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆ.ಪಿ. ಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು ಮತ್ತು ಸಿದ್ದರಾಮಯ್ಯ ನವರು ಜೋಡೆತ್ತುಗಳಂತೆ ದುಡಿಯುತ್ತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ, ಆದ್ದರಿಂದ ಕೊಳ್ಳೇಗಾಲ ನಗರಸಭೆಯಲ್ಲಿ 7 ಸ್ಥಾನಗಳಿಗೆ ಗೆದ್ದೇ ಗೆಲ್ಲಬೇಕು, 26 ನೇ ವಾರ್ಡ್ ನಲ್ಲಿ ಸ್ಪರ್ಧೆ ಮಾಡಿರುವ ಸುನೀತಾರವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕೆಂದು ವಾರ್ಡ್ ನ ಮತದಾರರನ್ನು ಕೇಳಿಕೊಂಡರು,

ಈ ಸಂದರ್ಭದಲ್ಲಿ ಕೊಳ್ಳೇಗಾಲ ಮಾಜಿ ಶಾಸಕರುಗಳಾದ ಜಯಣ್ಣ, ಬಾಲರಾಜ್,  ಹನೂರು ಶಾಸಕರಾದ ಆರ್. ನರೇಂದ್ರ, ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ, ತಾಲೂಕು ಅಧ್ಯಕ್ಷ ತೊಟೇಶ್, ಮಧುವನಹಳ್ಳಿ ಶಿವಕುಮಾರ್, ಶಾಂತರಾಜು, ರಮೇಶ್, ಮಾಜಿ ಅಧ್ಯಕ್ಷೆ ಸುಶೀಲ ಶಾಂತರಾಜು, ಹಾಗೂ ಇನ್ನಿತರರು ಇದ್ದರು,

Post a Comment

0 Comments

Ad Code

Responsive Advertisement