ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಪ್ರಕರಣದಲ್ಲಿ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು,
40% ಭ್ರಷ್ಟ ಬಿಜೆಪಿ ಸರ್ಕಾರ ನಿರಂತರವಾಗಿ ಹಗಲು ದರೋಡೆ ನಡೆಸುತ್ತಿದೆ ಎಂಬುದಕ್ಕೆ ನಂದೀಶ್ ಸಾವಿನ ಪ್ರಕರಣವೇ ಸಾಕ್ಷಿಯಾಗಿದೆ,
ಸಚಿವ ಎಂಟಿಬಿ ನಾಗರಾಜ್ ರವರು ನೀಡಿರುವ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಂದೀಶ್ ಅವರ ಹೃದಯಾಘಾತ ಪ್ರಕರಣದಲ್ಲಿ ಸರ್ಕಾರದ ಹಾಗೂ ಗೃಹ ಇಲಾಖೆಯ ಒತ್ತಡ ಇರುವುದು ಬಹಿರಂಗಗೊಂಡಿದೆ,
70 ರಿಂದ 80 ಲಕ್ಷ ಹಣ ನೀಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಅವರಿಗೆ ಎಷ್ಟು ಒತ್ತಡ ಇದೆ ಎಂಬುದು ಇಂದು ರಾಜ್ಯದ ಜನತೆಗೆ ತಿಳಿಯುತ್ತಿದೆ,
ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟು ಮೊತ್ತದ ಹಣ ನೀಡಿ ಕರ್ತವ್ಯ ನಿರ್ವಹಿಸಬೇಕಾದ ಅತ್ಯಂತ ದುಷ್ಟ ಪರಿಸ್ಥಿತಿ ಇಂದು ರಾಜ್ಯದಲ್ಲಿ ನಿರ್ಮಾಣವಾಗಿದೆ ಅದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವೇ ಮೂಲ ಕಾರಣ,
ಪ್ರತಿ ಇಲಾಖೆಯಲ್ಲೂ ಸಹ ಬಿಜೆಪಿ ಭ್ರಷ್ಟ ಸರ್ಕಾರ ಹಗಲು ದರೋಡೆ ನಡೆಸಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ,
ಪೊಲೀಸ್ ಇನ್ಸ್ ಪೆಕ್ಟರ್ ಸಾವಿನ ಬಗ್ಗೆ ಅವರ ಕುಟುಂಬದವರೇ ಬಹಿರಂಗಪಡಿಸಿದ್ದಾರೆ
ಅವರಿಗೆ ಹೆಚ್ಚು ಒತ್ತಡವಿತ್ತು ಅದಕ್ಕಾಗಿ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾರೆ,
ಭ್ರಷ್ಟಾಚಾರದ ಬಗ್ಗೆ ಸಚಿವರೇ ಬಹಿರಂಗಪಡಿಸಿದ್ದರು ಈ ಮೊಂಡು ಸರ್ಕಾರ ಕಿವಿ ಕಣ್ಣು ಕಾಣಿಸದೆ ಕೇಳಿಸದ ರೀತಿಯಲ್ಲಿ ವರ್ತಿಸುತ್ತಿದೆ ಕೂಡಲೇ ಈ ಸರ್ಕಾರ ತೊಲಗದೆ ಹೋದರೆ ಯಾವ ಇಲಾಖೆಯಲ್ಲೂ ಸಹ ಪ್ರಾಮಾಣಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ,
ನಂದೀಶ್ ಅವರ ಕುಟುಂಬಕ್ಕೆ ನ್ಯಾಯ ದೊರಕಬೇಕಾದರೆ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ಅವರ ಸಾವಿಗೆ ಸರಕಾರವೇ ನೇರ ಹೊಣೆ ಆಗಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಅರಗ ಜ್ಞಾನೇಂದ್ರ ರಾಜಿನಾಮೆ ನೀಡಿ ತೊಲಗಬೇಕೆಂದು ಪ್ರತಿಭಟನೆ ಮೂಲಕ ಆಗ್ರಹಪಡಿಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಜಿ ಜನಾರ್ಧನ್
ಎ ಆನಂದ್ ಪ್ರಚಾರ ಸಮಿತಿಯ ಸದಸ್ಯರಾದ ಸುಧಾಕರ್ ಪ್ರಕಾಶ್ ಮಂಜುನಾಥ್ ಪುಟ್ಟರಾಜು ಚೇತನ್ ಅನಿಲ್ ಮಾಧವಹನೂರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.

0 Comments