Ticker

6/recent/ticker-posts

Ad Code

Responsive Advertisement

ಅಪ್ಪು ಅಭಿಮಾನಿ ಮುಜಮಿಲ್ ಪಾಷರವರಿಂದ ಅಪ್ಪು ನಮನ ಕಾರ್ಯಕ್ರಮ,

 ಕೊಳ್ಳೇಗಾಲ ಸುದ್ದಿ

ವರದಿ : ಶಂಕರ್

 ಹನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ  ಅಪ್ಪು ಅಭಿಮಾನಿ ಮುಜಮಿಲ್ ಪಾಷರವರು ಪುನೀತ್ ರಾಜ್ ಕುಮಾರ್ ರವರ ವಾರ್ಷಿಕ ಪುಣ್ಯ ಸ್ಮರಣೆಯ ಅಂಗವಾಗಿಕ್ಷೇತ್ರದ ಕೆ. ಗುಂಡಪುರ ಗ್ರಾಮದ ತಮ್ಮ ನಿವಾಸದಲ್ಲಿ ಅಪ್ಪು ನಮನ ಕಾರ್ಯಕ್ರಮವನ್ನು ಆಯೋಜಿಸಿದರು,


ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು,  ಮುಖಂಡರು, ಹಾಗೂ ಯುವಕರ ಜೊತೆಗೂಡಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಪುನೀತ್ ರಾಜ್ ಕುಮಾರ್ ರವರಿಗೆ ಇಷ್ಟವಾದ ನಾನ್ ವೆಜ್ ಅಡುಗೆಯನ್ನು ಮಾಡಿಸಿ ಗ್ರಾಮದ ಎಲ್ಲ ಜನರಿಗೂ ಊಟ ಹಾಕಿದರೂ,

ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಮುಜಮಿಲ್ ಪಾಷ ರವರು ಮಾತನಾಡಿ

ಅಪ್ಪು ನಮ್ಮಗಲಿ ಒಂದು ವರ್ಷಗಳು ಕಳೆದಿದೆ ಅಪ್ಪುರವರ ಅಗಲಿಕೆಯ ನೋವನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಪುನೀತ್ ರಾಜ್ ಕುಮಾರ್ ರವರು ಜೀವಿತ ಕಾಲದಲ್ಲಿ ಬಡವರಿಗೆ ನಿರ್ಗತಿಕರಿಗೆ ಹಲವಾರು ಆರ್ಥಿಕವಾಗಿ ಸಹಾಯವನ್ನು ಮಾಡಿಕೊಟ್ಟಿದ್ದಾರೆ, ಅನೇಕ ಅನಾಥಶ್ರಮಗಳಿಗೆ ಸಹಾಯವನ್ನು ಮಾಡಿದ್ದಾರೆ ಅವರ ಸೇವೆಗಳ ಬಗ್ಗೆ ಎಷ್ಟು ಹೇಳಿದರು ಸಾಲದು, ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿದ ಅಪ್ಪು ರವರು ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ,

ಅಪ್ಪುರವರಿಗೆ ನಾನ್ ವೆಜ್ ಊಟವನ್ನ ತುಂಬಾ ಇಷ್ಟಪಡುತ್ತಿದ್ದರು ಆದ್ದರಿಂದ ನಾವು ಅವರ ಪುಣ್ಯ ಸ್ಮರಣೆಯ ಈ ದಿನ ನಾನ್ ವೆಜ್ ಅಡುಗೆಯನ್ನ ಮಾಡಿಸಿ ಗ್ರಾಮದ ಪ್ರತಿಯಬ್ಬರಿಗೂ ಊಟದ ವ್ಯವಸ್ಥೆಯನ್ನು ಮಾಡಿಸಿದ್ದೇವೆ, ಎಂದರು

Post a Comment

0 Comments

Ad Code

Responsive Advertisement