Ticker

6/recent/ticker-posts

Ad Code

Responsive Advertisement

ಜನರನ್ನ ಮೂರ್ಖರನ್ನಾಗಿಸಲು ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಬಿಜೆಪಿ ಕಟ್ಟಾಳು

ಚಾಮರಾಜನಗರ ಜೆಲ್ಲೆಯ ಗಡಿಯಂಚಿನ ಕಟ್ಟಾಕಡೆಯ ತಾಲ್ಲೂಕು ಹನೂರು ವಿಧಾನಸಭಾ ಕ್ಷೇತ್ರ,

ಹನೂರು ಇತ್ತೀಚಿಗಷ್ಟೇ ನೂತನ ತಾಲೂಕಾಗಿ ಘೋಷಣೆಯಾಗಿದೆ, ಆದರೆ ಒಂದು ತಾಲ್ಲೂಕಿಗೆ ಇರಬೇಕಾದ ಯಾವುದೇ ವ್ಯವಸ್ತೆ ಕೂಡ ಹನೂರಿಗೆ ದೊರಕದೆ ಇರುವುದು ದುರಂತ, ಆದರೂ ಹನೂರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಬಿಜೆಪಿಯ ಕೆಲವು ವ್ಯಕ್ತಿಗಳು ಕ್ಷೇತ್ರದ ಜನರ ಅಸಹಾಯಕತೆಯನ್ನ ಬಂಡವಾಳವಾಗಿ ಮಾಡಿಕೊಂಡು ಹನೂರು ವಿಧಾನ ಟಿಕೇಟ್ ಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಪೈಪೋಟಿ ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ,

ಹನೂರು ಕ್ಷೇತ್ರದ ಸಮಸ್ಯೆ ನೆನ್ನೆ ಮೊನ್ನೆಯದಲ್ಲ, ಸ್ವಾತಂತ್ರ ಪೂರ್ವದಿಂದಲೂ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕಾಡಂಚಿನ ಗ್ರಾಮಗಳು ಹಕ್ಕಪಕ್ಕದ ಗ್ರಾಮಗಳಿಗೆ ಬಸ್ ವ್ಯವಸ್ಥೆ, ಬಸ್ ಇರಲಿ ಉತ್ತಮ ರಸ್ತೆ ಕೂಡ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಅಂತೂ ಹೇಳ ತೀರದು, ಸುತ್ತಿಬಳಸಿ ಹೇಳೋದೇಕೆ ಎಷ್ಟೋ ಹಳ್ಳಿಗಳಲ್ಲಿ ಇನ್ನು ಕೂಡ ಮೂಲಭೂತ ಸೌಕರ್ಯಗಳು ಕೂಡ ಇಲ್ಲದೆ ಬಡಜನರು ಪರಿತಪಿಸುತ್ತಿದ್ದಾರೆ,

ಇಷ್ಟೆಲ್ಲ ಸಮಸ್ಯೆಗಳು ಇದೆ, ಹೀಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ ಕೆಲವು ಬಾರಿ ನಾಯಕರು ನಮ್ಮದು ಡಬಲ್ ಇಂಜನ್ ಸರ್ಕಾರ ಅಂತ ಬೊಬ್ಬೆ ಹೊಡೆಯುತ್ತಾರೆ ಆದರೆ ಹನೂರು ಕ್ಷೇತ್ರ ಮತ್ತು ಕೊಳ್ಳೇಗಾಲ ಕ್ಷೇತ್ರ ಯಾಕೆ ಅಭಿವೃದ್ಧಿ ಹೊಂದಿಲ್ಲ,

ಇಲ್ಲರುವ ಬಿಜೆಪಿಯ ಲೋಕಲ್  ಲೀಡರ್ ಗಳು ಕ್ಷೇತ್ರದ ಸಮಸ್ಯೆಯ ಬಗ್ಗೆ ತಮ್ಮದೆ ಸರ್ಕಾರದ ಗಮನಕ್ಕೆ ತಂದು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಬಹುದಲ್ಲವೇ, ಅದನ್ನ ಬಿಟ್ಟು ಕ್ಷೇತ್ರದ ಟಿಕೇಟ್ ಗಾಗೈ ಪೈಪೋಟಿ ನಡೆಸುತ್ತ ಹಳ್ಳಿ ಜನರಿಗೆ ಒಂದಿಷ್ಟು ಪುಡಿಗಾಸನ್ನು ಕೊಟ್ಟು ಹಣದ ಆಮಿಷ ಹೊಡ್ದಿ ಒಂದೇ ಪಕ್ಷವನ್ನ ಮೂರು ಭಾಗ ಮಾಡಿ ಒಬ್ಬರಮೇಲೊಬ್ಬರು ಸವರಿ ಮಾಡುತ್ತಿದ್ದಾರೆ,

ಕ್ಷೇತ್ರ ಯಾಕೆ ಹಿಡಿ ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಶೂನ್ಯವಾಗಿದೆ ಇನ್ನೊಂದು ಜನರ ಅಭಿಪ್ರಾಯ, ಬಡ ಜನ ಜನರ ನೆಮ್ಮದಿಗೆ ಕೊಳ್ಳಿ ಇಟ್ಟು  ಸುಲಿಗೆ ಮಾಡುತ್ತಾ ಸಾಮಾನ್ಯ ಬಡವರು ನೆಮ್ಮದಿಯಿಂದ ಇರಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ,

ಒಂದು ಗ್ಯಾಸ್ ನ ಬೆಲೆ 1200, ಪೆಟ್ರೋಲ್, ಡೀಸಲ್ ನ ಬೆಲೆ 110- 105 ರೂಪಾಯಿ ಆಗಿದೆ ಒಂದು ಲೀಟರ್ ಅಡುಗೆ ಎಣ್ಣೆ 180 ರೂಪಾಯಿ ಆಗಿದೆ ಹಳ್ಳಿಗಳ ಬಡ ಜನರು ಹೇಗೆ ನೆಮ್ಮದಿ ಜೀವನ ಮಾಡಲು ಸಾಧ್ಯ, ಎಂಬುದು ಜನರ ನೋವಿನ ಮಾತುಗಳು,

ಇಷ್ಟೇ ಅಲ್ಲದೆ ಇನ್ನು ಹೆಚ್ಚಿನ ತೆರಿಗೆ ಹೊರೆಯನ್ನು ರೈತರ ಬಡವರ ಮೇಲೆ ಹೊರಿಸಿ ಚಲ್ಲಾಟವಾಡುತ್ತಿದೆ, ಇಷ್ಟುಲ್ಲ ಇದ್ದು ಹನೂರು ಹನೂರು ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹನೂರು ಕ್ಷೇತ್ರಕ್ಕೆ ಬರುತ್ತಿದ್ದಾರೆ,

ಜನರನ್ನು ಮೋಡಿ ಮಾಡಿ ಇನ್ನೊಮ್ಮೆ ಅಧಿಕಾರ ಪಡೆದು ಜನರನ್ನು ಮೂರ್ಖರನ್ನಗಿಸಲು ಬರುತ್ತಿದ್ದಾರೆ,

ಬಿಜೆಪಿ ರಾಜ್ಯಾಧ್ಯಕ್ಷರು ಹನೂರು ಕ್ಷೇತ್ರಕ್ಕೆ ಬರಲಿ ಮೊದಲು ಈ ಕ್ಷೇತ್ರದ ಅಭಿವೃದ್ಧಿಗೆ ಬಡ ಜನರ ಅಭಿವೃದ್ಧಿಗೆ ಈ ಸರ್ಕಾರ ಏನು ಕೊಡುಗೆ ಕೊಟ್ಟಿದೆ, ಏನೇನು ಅನುದಾನ ಕೊಟ್ಟಿದೆ, ರಾಜ್ಯದಲ್ಲಿರುವ ರೈತರ, ಬಡವರ ಅಭಿವೃದ್ಧಿಗೆ ಈ ಸರ್ಕಾರ ಕೊಟ್ಟಿರುವ ಯೋಜನೆಗಳೇನು ಎಂಬುದರ ಬಗ್ಗೆ ಜನರಿಗೆ ತಿಳಿಸಿ ಆಮೇಲೆ ಅವರ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ,

ರಾಜ್ಯದ ಅಭಿವೃದ್ಧಿಯ ಸಲುವಾಗಿ ಬಿಜೆಪಿ ಸರ್ಕಾರ ಯಾವಯಾವ ಯೋಜನೆಗಳನ್ನು ಕೊಟ್ಟಿದೆ?

ದೀನದಲಿತರ, ರೈತರ, ಹಿಂದುಳಿದ ವರ್ಗಗಳ, ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೈಗೊಂಡಿರುವ ಯೋಜನೆಗಳೇನು, ನಿಮ್ಮಿಂದ ರಾಜ್ಯದ ಜನತೆಗೆ ಏನು ಪ್ರಯೋಜನವಾಗಿದೆ ಎಂದು ಜನರ ಮೇಲೆ ಬೆಲೆ ಏರಿಕೆ ತೆರಿಗೆ ಹೊರೆ ಜನತೆಯ ಮೇಲೆ ಹೊರಿಸಿರುವ ನೀವು ಯಾವ ಮುಖ ಇಟ್ಟುಕೊಂಡು ಕ್ಷೇತ್ರದಲ್ಲಿ ಸಂಘಟನೆಗೆ ಬಂದಿದ್ದೀರಾ ಎಂಬುದನ್ನ ನಳಿನ್ ಕುಮಾರ್ ಕಟೀಲ್ ರನ್ನ ಅವರ ಪಕ್ಷದ ಕಾರ್ಯಕರ್ತರೇ ಪ್ರಶ್ನಿಸಿ ಉತ್ತರ ತಿದುಕೊಳ್ಳಲಿ, ಎಂದು ಬಿಜೆಪಿ ಸರ್ಕಾರದ ಅನೀತಿ ಕಾಯಿದೆಗಳಿಂದ ನೊಂದ ಜನತೆಯ ಅಭಿಪ್ರಾಯ,

Post a Comment

0 Comments

Ad Code

Responsive Advertisement