Ticker

6/recent/ticker-posts

Ad Code

Responsive Advertisement

ಶ್ರೀ ವಿಜಯದಾಸರ ಕೃತಿಗಳ ಗಾಯನ ಸ್ಪರ್ಧೆ

ದಾಸವಾಣಿ ಫೇಸ್ಬುಕ್ ಸಮೂಹವು ಪ್ರತಿ ವರ್ಷದಂತೆ ಈ ವರ್ಷವೂ 'ಚಿಪ್ಪಗಿರಿಯ ತಪೋಮೂರ್ತಿ' ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ ವಿಜಯದಾಸರ ಕೃತಿಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ.

 ಹಾಡುಗಳನ್ನು ಕಳಿಸುವವರಿಗೆ  ಅಕ್ಟೋಬರ್ 29 ರಿಂದ ನವೆಂಬರ್ 4, ಸಂಜೆ 6 ಗಂಟೆಯವರೆಗೆ ಕಳಿಸಲು ಅವಕಾಶವಿರುತ್ತದೆ.  ನಿಯಮಗಳು : ಇದರಲ್ಲಿ ನಾಲ್ಕು ವಿಭಾಗಳಿರುತ್ತವೆ. 8 ರಿಂದ 12, 13 ರಿಂದ 17, 18 ರಿಂದ 30 ಹಾಗೂ 31 ರಿಂದ 45 ವಯೋಮಿತಿ ಇರುತ್ತದೆ. ಒಬ್ಬ ಅಭ್ಯರ್ಥಿ ಒಂದೇ ಹಾಡನ್ನು ಕಳಿಸಬೇಕು. 



ಇದರೊಂದಿಗೆ ಹಾಡಿನ ಅಂಕಿತ, ಹಾಡುವವರ ಹೆಸರು, ವಯಸ್ಸು ಮತ್ತು ಊರು ಇಷ್ಟನ್ನು ಕಡ್ಡಾಯವಾಗಿ ನಮೂದಿಸಿ, ದಾಸವಾಣಿ ಫೇಸ್ಬುಕ್ ಗ್ರೂಪ್ ಗೆ ಕಳಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. (ವಿಜೇತರಿಗೆ ಅಂಚೆ ಮೂಲಕ, ಉಳಿದವರಿಗೆ ಆನ್ ಲೈನ್ ಮೂಲಕ ತಲುಪಿಸಲಾಗುವುದು), ಫಲಿತಾಂಶವು ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.

* ಈ ಸ್ಪರ್ಧೆಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. *

Post a Comment

0 Comments

Ad Code

Responsive Advertisement