Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ : ರಾಚಶೆಟ್ಟಿ ದೊಡ್ಡಿ,( ಬಂಡಿದಾರಿ ) ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆ

ಕೊಳ್ಳೇಗಾಲ :ಕರ್ನಾಟಕ ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದ ಅಂಗವಾಗಿ,ಕೊಳ್ಳೇಗಾಲ ತಾಲ್ಲೂಕಿನ ರಾಚಶೆಟ್ಟಿ ದೊಡ್ಡಿ,( ಬಂಡಿದಾರಿ ) ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಗೈರು ಹಾಜರಿಯಲ್ಲಿ ಕೊಳ್ಳೇಗಾಲ ತಾಲ್ಲೂಕು ತಹಸೀಲ್ದಾರ್ ಮಂಜುಳಾರವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಡೆಸಲಾಯಿತು ,

ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಹಾಜರಾಗಿದ್ದುತಹಸೀಲ್ದಾರ್ ರವರ ಬಲಿ ತಮ್ಮ ಕೊಂದುಕೊರತೆಗಳ ಬಗ್ಗೆ ಹಾಗೂ ತಮಗೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಲಿಖಿತ ರೂಪದಲ್ಲಿ ಮನವಿಗಳನ್ನ ಸಲ್ಲಿಸಿದರು, 

ಹಾಗೂ ಜಮೀನು ಖಾತೆ ಮಾಡಿಸುವ ಬಗ್ಗೆ, ಮನೆಗಳ ಖಾತೆ ಮಾಡಿಸುವ ಬಗ್ಗೆ, ತಮ್ಮ ಗ್ರಾಮಗಳಿಗೆ ಸ್ಮಶಾನದ ಜಾಗ ಗುರುತಿಸಿ ಕೊಡುವ ಬಗ್ಗೆ ಮನವಿಗಳನ್ನು ಸಲ್ಲಿಸಿದರು,

ರಾಚಶೆಟ್ಟಿ ದೊಡ್ಡಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಂಗನವಾಡಿ ಕೇಂದ್ರಕ್ಕೆ ಮಕ್ಕಳಿಗಾಗಿ ಬರುವ ದವಸ ದಾನ್ಯಗಳನ್ನು ಕದ್ದು ಮಕ್ಕಳಿಗೆ ದ್ರೋಹ ಬಗೆಯುತ್ತಿರುವ ಬಗ್ಗೆ ಹಾಗೂ ಅರಣ್ಯ ಇಲಾಖೆಯವರು ಗ್ರಾಮದ ಕೆರೆಯನ್ನು ಅಕ್ರಮಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದರು, ಮತ್ತು ಕೊತ್ತನೂರು ಗ್ರಾಮ ಪಂಚಾಯಿತಿಯಲ್ಲಿ  ನರೇಗಾ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಅಕ್ರಮವಾಗಿ ಬಿಲ್ ಮಾಡಿಕೊಂಡಿರುವ ಬಗ್ಗೆ ದೂರನ್ನು ನೀಡಿದರು,

ಈ ಸಂದರ್ಭದಲ್ಲಿ ತಹಸೀಲ್ದಾರ್  ಮಂಜುಳಾರವರು ಮಾತನಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಂಬಂಧಪಟ್ಟವರ ಬಗ್ಗೆ ಕ್ರಮವಹಿಸಿವುದಾಗಿ ತಿಳಿಸಿದರು, ರೆವಿನ್ಯು ಸಂಬಂಧ ಪಟ್ಟ ಜಮೀನುಗಳನ್ನು ಅಕ್ರಮಿಸಿಕೊಂಡಿದ್ದರೆ ಕೂಡಲೇ ರೈತರಿಗೆ ಬಿಟ್ಟು ಕೊಡಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು,

ಈ ಸಂದರ್ಭದಲ್ಲಿ ಸಿಡಿಪಿಒ ನಾಗೇಶ್, ಎಡಿ ಗೋಪಾಲಕೃಷ್ಣ,  ಪಿಡಿಒ ಶಿವಕುಮಾರ್, ಜಿಲ್ಲಾ ಪಂಚಾಯತ್ ಇಲಾಖೆ ಇಂಜಿನಿಯರ್ ಮಂಜುನಾಥ್, ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ಮುತ್ತುರಾಜು, ಹಾಗೂ ಇನ್ನಿತರರು ಇದ್ದರು

Post a Comment

0 Comments

Ad Code

Responsive Advertisement