Ticker

6/recent/ticker-posts

Ad Code

Responsive Advertisement

ಕೆ.ಜಿ.ಎಫ್. ಬಾಬುರವರಿಗೆ ಹುಟ್ಟುಹಬ್ಬಕ್ಕೆ ಅಭಿಮಾನಿ ಹಾಗೂ ಹಿತೈಷಿಗಳಿಂದ ಶುಭ ಹಾರೈಕೆ

ಬೆಂಗಳೂರು : ರಾಜ್ಯದಾದ್ಯಂತ ಕೆಜಿಎಫ್ ಬಾಬು ಎಂದು ಪ್ರಖ್ಯಾತರಾಗಿರುವ ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರೂ ಆಗಿರುವ ಯೂಸುಫ್ ಶರೀಫ್ ರವರು, ಶುಕ್ರವಾರದಂದು ತಮ್ಮ  55 ನೇ ಹುಟ್ಟು ಹಬ್ಬವನ್ನು  ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಹಿತೈಷಿಗಳ ಶುಭ ಹಾರೈಕೆಗಳೊಂದಿಗೆ ಸರಳವಾಗಿ ಆಚರಿಸಿಕೊಂಡರೂ..., ನಾಡಿನಾದ್ಯಂತ ಅಪಾರ ಸಂಖ್ಯೆಯಲ್ಲಿರುವ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟಿದ ಹಬ್ಬವನ್ನು ಅತ್ಯಂತ ಸಂಭ್ರಮವಾಗಿ ಹಿಂದೂ - ಮುಸಲ್ಮಾನ -  ಕ್ರೈಸ್ತರೆಂಬುದನ್ನು ಪರಿಗಣಿಸದೆ, ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ  ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಬಹುಸಂಖ್ಯೆಯಲ್ಲಿ, ತಮ್ಮ ನೆಚ್ಚಿನ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಿ ಶಾಸಕರಾಗಿ ಆಯ್ಕೆಯಾಗುವ   ವಿಶ್ವಾಸವನ್ನು ಮೂಡಿಸಿರುವ, ಭರವಸೆಯ ನಾಯಕ ಭಾವಿ ಶಾಸಕರೆಂದು ಈಗಾಗಲೇ ಪರಿಗಣಿಸಲ್ಪಡುತ್ತಿರುವ

ಕೆಜಿಎಫ್ ಬಾಬುರವರು ತಮ್ಮ ಕುಟುಂಬದ ಸದಸ್ಯರಲ್ಲೊಬ್ಬರೆಂಬಂತೆ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿನ ಅಭಿಮಾನಿಗಳು ಹಿತೈಷಿಗಳು ಹಾಗೂ ಬೆಂಬಲಿಗರು ದಿನವಿಡೀ ಸಂಭ್ರಮ ಹಾಗೂ ಸಡಗರದಿಂದ ಇವರ ಜನ್ಮದಿನವನ್ನು ಆಚರಿಸುವ ಮೂಲಕ ಕ್ಷೇತ್ರದಾದ್ಯಂತ ಹಬ್ಬದ ವಾತಾವರಣವನ್ನು ಉಂಟು ಮಾಡಿದ್ದದ್ದು ವಿಶೇಷವಾಗಿತ್ತು. ಇದು  ಕೆಜಿಎಫ್ ಬಾಬುರವರು ಈ ಕ್ಷೇತ್ರದ  ಜನರ ಮನದಲ್ಲಿ ವಿಶೇಷ ಸ್ಥಾನಮಾನವನ್ನು ಗಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು.  




 ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಜನಪ್ರತಿನಿಧಿಯಾಗುವ ಅವಕಾಶ ಕೆಜಿಎಫ್ ಬಾಬು ರವರಿಗೆ ದೇವರ ಕೃಪಾಶೀರ್ವಾದದಿಂದ  ಸಿಗಲಿ ಎಂದು ಆಶಿಸಿ, ದೇವರು ಅವರಿಗೆ ಧೀರ್ಘಾಯುರಾರೋಗ್ಯ ಭಾಗ್ಯವನ್ನು ನೀಡಿ ಹರಸಲಿ ಎಂದು ಶುಭ ಕೋರಿದವರಲ್ಲಿ ಯುವ ನಾಯಕರು ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಧರ್ಮರಾಯಸ್ವಾಮಿ ವಾರ್ಡ್ ನ ಜಮೀನ್ ಪ್ರಕಾಶ್ ರವರು,  ನಿರ್ಮಾಣ ಕ್ಷೇತ್ರದಲ್ಲಿ ಖ್ಯಾತರಾದ ಶ್ರೀ ಎಂಟರ್‌ಪ್ರೈಸಸ್ ನ ಮಾಲೀಕರು, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಪವಿತ್ರ ಗೌಡರವರು, ಹೊಂಬೇಗೌಡನಗರದ ಮಾ ಎನ್ ಜಿ ಒ ಅಧ್ಯಕ್ಷರಾದ ಚಾಂದ್ ಪಾಶ, ಸಮಾಜ ಸೇವಕರು ಹಾಗೂ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಸಮಾಜ ಸೇವಕಿ ಮಾ ಎನ್ ಜಿ ಒ ಉಪಾಧ್ಯಕ್ಷೆ  ಜುಲೇಖ, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಸುನೀತಾ ರೆಡ್ಡಿ, ಉದ್ಯಮಿ ಮಂಜುನಾಥ್, 

ಸಮಾಜ ಸೇವಕರುಗಳಾದ ಇಮ್ತೀಯಾಜ್ ಪಾಷ, ಅಲ್ತಾಫ್, ಎಂ.ಶರೀಫ್, ಸೈಯದ್ ಶೇಖ್, 

ಕೋದಂಡರಾಮ,   ಅಂಬೇಡ್ಕರ್ ಮುಂತಾದ ಪ್ರಮುಖರೊಡನೆ ಕ್ಷೇತ್ರದ ಸಹಸ್ರಾರು ಸಂಖ್ಯೆಯ ಆಬಾಲವೃದ್ಧರಾದಿಯಾಗಿ ಸಾರ್ವಜನಿಕರು ಇಡೀ ದಿನ  ತಮ್ಮ ನೆಚ್ಚಿನ ನಾಯಕನನ್ನು ಖುದ್ದಾಗಿ ಭೇಟಿಯಾಗಿ ಶುಭಕಾಮನೆಗಳನ್ನು ವ್ಯಕ್ತಪಡಿಸಿದರು. 

ವರದಿ : *ಕೆ.ಎಸ್.ಆರ್.*

Post a Comment

0 Comments

Ad Code

Responsive Advertisement