ಕೊಳ್ಳೇಗಾಲ ಸುದ್ದಿ: ಭಾರತೀಯ ಜನತಾ ಪಾರ್ಟಿ ಒಬಿಸಿ, ಮೋರ್ಚಾ ಬಿಜೆಪಿ ಜಿಲ್ಲೆ ಒಬಿಸಿ ಮೋರ್ಚಾ ಸಂಯೋಜಕರಾದ ಹನೂರು ವಿಧಾನಸಭಾ ಕ್ಷೇತ್ರದ ಜನಧ್ವನಿ ಬಿ. ವೆಂಕಟೇಶ್ ಹಾಗೂ ಕುರುವಿಲ್ ಕ್ರೀಯೇಷನ್ಸ್ ಇವರುಗಳ ಸಹಯೋಗದಲ್ಲಿ ಮಹಿಳಾ ಸ್ವಯಂ ಉದ್ಯೋಗ ಕಲ್ಪಿಸುವ ಅರಿವು ಮೂಡಿಸುವ ಹಾಗೂ ಸ್ವ ಉದ್ಯೋಗ ತರಭೇತಿ ಕಾರ್ಯಕ್ರಮವನ್ನು ಬಿ. ವೆಂಕಟೇಶ್ ರವರ ಬಿಜೆಪಿ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮವನ್ನು ಜನಧ್ವನಿ ಬಿ. ವೆಂಕಟೇಶ್ ರವರು ಉದ್ಘಾಟಿಸಿ ಚಾಲನೆಯನ್ನು ನೀಡಿದರು,
ನಂತರ ಕುರುವಿಲ್ ಕ್ರೀಯೇಷನ್ ನ ಕುಮಾರ್ ರವರು ಮಾತನಾಡಿ ಮಹಿಳೆಯಾರು ಪಕೃತಿಯಲ್ಲಿ ಸಿಗುವ ವಸ್ತುಗಳನ್ನ ಉಪಯೋಗಿಸಿಕೊಂಡು ಬ್ಯಾಗ್, ಗಿಫ್ಟ್ ಬಾಕ್ಸ್, ಜ್ಯುಯಲರ್ ಹಾಗೂ ಇನ್ನಿತರ ವಸ್ತುಗಳನ್ನಿ ಹೇಗೆ ತಯಾರಿಸಿ ಮಾರಾಟ ಮಾಡಬಹುದು ಹೇಗೆ ಮಾಡಬಹುದು ಎಂಬುದರ ಬಗ್ಗೆ ತರಭೇತಿಯನ್ನು ನೀಡಿದರು,
ಈ ಸಂದರ್ಭದಲ್ಲಿ ಹನೂರು ಬಿಜೆಪಿ ಮುಖಂಡ ಬಿ. ವೆಂಕಟೇಶ್ ರವರು ಮಾತನಾಡಿ ಮಹಿಳೆಯರು ಸಭಲೀಕಾರಣ ಹೊಂದಬೇಕಾದರೆ ಸ್ವ ಉದ್ಯೋಗವನ್ನ ಅವಲಂಬಿಸಬೇಕು ಅದಕ್ಕಾಗಿ ವಿವಿಧ ತರಭೇತಿಗಳನ್ನು ಪಡೆದುಕೊಳ್ಳಬೇಕು, ಸ್ವ ಉದ್ಯೋಗವನ್ನು ಮಾಡಬೇಕಾದರೆ ನಿಮಗೆ ಬೇಕಾದ ಕಸುಬಿಗೆ ಅದರವಾದ ಸಲಕಾರಣಿಗಳನ್ನ ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಕೊರಗಬೇಕಾದ ಅವಶ್ಯಕತೆ ಇಲ್ಲ ನಿಮಗೆ ತರಭೇತಿ ನೀಡಿದ ಕಂಪನಿಯವರಿಂದಲೇ ನಿಮಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತವೆ, ಅದನ್ನು ಪಡೆದುಕೊಂಡು ವಸ್ತುಗಳನ್ನ ತಯಾರು ಮಾಡಿ ಅದೇ ಕಂಪನಿಗೆ ಮಾರಾಟ ಮಾಡಿ, ನಿಮಗೆ ಒಳ್ಳೆಯ ಉದ್ಯೋಗ ಸಿಗಬೇಕು ನಿಮ್ಮ ಜೊತೆ ನಾನು ಕೂಡ ಇರುತ್ತೇನೇ ನಿಮ್ಮ ಕಷ್ಟಸುಖ ದುಃಖ ದುಮ್ಮಾನಗಳಲ್ಲಿ ನಿಮ್ಮ ಜೊತೆ ನಾನು ಸದಾ ಇರುತ್ತೇನೆ, ನಮ್ಮ ತಾಯಿಂದಿರು ನೀವು ಮಹಿಳೆಯಾರು ಈ ಭಾಗದಲ್ಲಿ ಅಭಿವೃದ್ಧಿ ಹೊಂದಿದರೆ ನನಗೆ ಅಷ್ಟೇ ಸಾಕು, ನಿಮ್ಮ ಅಭಿವೃದ್ಧಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ,
ನೀವೆಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಅಭಿವೃದ್ಧಿ ಹೊಂದಬೇಕು, ಎಂದರು,
ಈ ಸಂದರ್ಭದಲ್ಲಿ ತಮಿಳು ನಾಡಿನ ಕುರುವಿಲ್ ಕ್ರಿಯೇಷನ್ ಬಿಜೆಪಿ ಮೋರ್ಚಾ ಮಹಿಳಾ ಅಧ್ಯಕ್ಷರು, ಸದಸ್ಯರುಗಳು ಹಾಗೂ ಇನ್ನಿತರರು ಇದ್ದರು

0 Comments