Ticker

6/recent/ticker-posts

Ad Code

Responsive Advertisement

ಕನ್ನಡ ಸಾಹಿತ್ಯ ಪರಿಷತ್ತು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

 ಕನ್ನಡ ಸಾಹಿತ್ಯ ಪರಿಷತ್ತು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು ತೆಗೆದುಕೊಂಡು  ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಕನ್ನಡ ಭಾಷಾ ಶಿಕ್ಷಕರಿಗೆ ಗೌರವ ಅರ್ಪಣೆ ಹಾಗೂ ಸ್ಕೌಟ್ ಕನ್ನಡ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಕಾಚರಕನಹಳ್ಳಿ ಜ್ಯೋತಿ ಪದವಿ








ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. 


ಈ ಕಾರ್ಯಕ್ರಮದಲ್ಲಿ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ವಿವಿಧ ಶಾಲೆಯ 288  ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದರು ಮತ್ತು 48 ವಿವಿಧ  ಶಾಲೆಯ ಕನ್ನಡ ಭಾಷಾ ಶಿಕ್ಷಕರು ಹಾಗೂ 13 ಸ್ಕೌಟ್ ಅಂಡ್ ಗೈಡ್ ಶಿಕ್ಷಕರು ಅಭಿನಂದಿಸಲ್ಪಟ್ಟರು

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿ. ಬಿ .ಎಂ. ಪಿ ಮಾಜಿ ವಿರೋದ ಪಕ್ಷದ ನಾಯಕರಾದ ಶ್ರೀ ಪದ್ಮನಾಭ ರೆಡ್ಡಿ ಮಾತನಾಡಿ ಗುರು ಶಿಷ್ಯರು ಹಾಗೂ ಪಾಲಕರ ತ್ರಿವೇಣಿ ಸಂಗಮ ಈ ಕಾರ್ಯಕ್ರಮವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ ಸಿ ಬಿ ಪ್ರಾದೇಶಿಕ -6 ವಲಯ -3 ಲಯನ್ಸ್ ಸಂಸ್ಥೆ ಕನ್ನಡ ಸಂಸ್ಕೃತಿ ವಿಭಾಗದ ಶ್ರೀ ರಾಧಾಕೃಷ್ಣ ಹೆಗಡೆ ಮಾತನಾಡಿ ಕನ್ನಡದಲ್ಲಿ ಲಾಂಛನವನ್ನು ಅಳವಡಿಸಿಕೊಂಡಿದೆ ಹಾಗೂ ಕನ್ನಡ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿವೆ ಎಂದು ತಿಳಿಸಿದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷರಾದ ಯೋಗ ಶ್ರೀ ವರ್ಧಮಾನ ಕಳಸೂರು ಇವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ  ವಿಜ್ಞಾನ, ವೈದ್ಯಕೀಯ, ಇಂಜನೀಯರಿಂಗ್ ಪದವಿ ಗಳಲ್ಲೂ ಕನ್ನಡ ಭಾಷೆಯನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಳ್ಳಲು ಅವಕಾಶವಿದೆಯೆಂದು , ಶಾಲೆಗಳಲ್ಲಿ ಕನ್ನಡ ಬೋಧಕ ಶಿಕ್ಷಕರಿಗೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ನಗರ ಜಿಲ್ಲೆ ಕ ಸಾ ಪ  ಅಧ್ಯಕ್ಷರಾದ ಎಂ. ಪ್ರಕಾಶ್ ಮೂರ್ತಿ ಕಾರ್ಯಕ್ರಮದ  ಸ್ಜದುದ್ದೇಶ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಎಲ್ ಸಿ ಬಿ ಪ್ರಾದೇಶಿಕ -6 ವಲಯ-3  ಮುಖ್ಯಸ್ಥರು ವಿಕ್ಟರ್ ರೂಪ ಕುಮಾರ್, ಎಲ್ ಸಿ ಬಿ ಶಿಕ್ಷಣ ಅಧ್ಯಕ್ಷರು  ಲಿಟ್ಲ್ ಏಂಜಲ್ಸ್ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ಡಾ. ಗ್ಲೋರಿ ವಿಕ್ಟರ್ ಕನ್ನಡ ಪರ ಹೋರಾಟಗಾರರಾದ ಪಾ. ಮುರುಳಿದರ, ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ .ಸಿ ಜಗನ್ನಾಥ ರೆಡ್ಡಿ, ಸ್ಕೈಲಾಬ್ ಎಸ್ಟೇಟ್ಸ್ ಮುಖ್ಯಸ್ಥರಾದ ಪುಷ್ಪ ಹೆಚ್. ಮುರುಳಿ ,ವಿದುಷಿ ಗೀತಾ ಶ್ರೀನಾಥ್, ರಾಜೇಶ್ ಸದ್ಗೋಪನ್ ಬೆಥನಿ ಶಿಕ್ಷಣ ಸಂಸ್ಥೆಯ ಸಿಸ್ಟರ್ ಸೈಮನ್ ಮುಂತಾದ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗೆ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಸಾಂಘಟಿಕವಾಗಿ ಶ್ರಮಿಸಿದರು.

Post a Comment

0 Comments

Ad Code

Responsive Advertisement