ವಾರ್ತಾ ಜಾಲ ಸುದ್ದಿ ಮಧುಗಿರಿ :-ಪರಿಸರ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕಾಗಿದೆ ಎಂದು 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಯಾದವ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ , ಕಂದಾಯ ಇಲಾಖೆ ,, ಉಪವಿಭಾಗಧಿಕಾರಿಗಳ ಕಾರ್ಯಾಲಯ , ತಾಲೂಕು ಪಂಚಾಯತ್,ಪುರಸಭೆ ಇವರ ಸಂಯುಕಾಶ್ರಯದಲ್ಲಿ : " ಐತಿಹಾಸಿಕ ಕಲ್ಯಾಣಿಗಳ ಸ್ವಚ್ಛತಾ ಕಾರ್ಯಕ್ರಮ "
ಅಂಗವಾಗಿ ಛತ್ರತೋಪಿನ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಸ್ವಚ್ಚತಾ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತಾನಾಡಿದರು.
ಪೂರ್ವಿಕರು ನಿರ್ಮಿಸಿರುವ ನೀರಿನ ಸೆಲೆಗಳನ್ನು ಉಳಿಸಿಕೊಂಡು ಹೋಗಬೇಕು.ಹೊಸದು ನಿರ್ಮಾಣ ಮಾಡುವುದರ ಬದಲು ಇರುವುದನ್ನೇ ಮಲಿನ ಗೊಳಿಸದೆ ಸ್ವಚ್ಛವಾಗಿಟ್ಟುಕೊಂಡು.
ಪುರಾತನ ಕಲ್ಯಾಣಿಗಳ ಉಳಿಸಿಕೊಂಡರೆ ಸಾಕು. ಸರ್ಕಾರ ಮತ್ತು ನೌಕರರೇ ಸ್ವಚ್ಛತೆ ಮಾಡಬೇಕೆಂಬುದಲ್ಲ ಜನ ರು ಕೂಡ ಇದರಲ್ಲಿ ಸ್ವಯಂಪ್ರರಣೆಯಿಂದ ಪಾಲ್ಗೊಳ್ಳಬೇಕೆಂದರು.
ಕಲ್ಯಾಣಿಗಳನ್ನು ಮಲಿನಗೊಳಿಸದೆ ಇರುವುದು ಸಾರ್ವಜನಿಕರ ಕರ್ತವ್ಯ. ಅಪವಿತ್ರ ಮಾಡುವುದರ ಬದಲು ಪವಿತ್ರವಾಗಿ ಇರಿಸಿಕೊಳ್ಳಬೇಕು ಕಲ್ಯಾಣಿಗಳ ಬಳಿ ಬಟ್ಟೆ ಒಗೆಯೋದು ಮತ್ತಿತರ ಚಟುವಟಿಕೆಗಳಿಂದ ಸಾರ್ವಜನಿಕರು ದೂರವಿರಬೇಕು ತಮ್ಮ ಮನೆಯ ಆವರಣದಲ್ಲಿರುವ ಬಾವಿಗಳನ್ನು ಹೇಗೆ ಸ್ವಚ್ಛವಾಗಿ ಇಟ್ಟು ಕೊಂಡಿರುತ್ತಾರೊ ಅದೇ ರೀತಿ ಕಲ್ಯಾಣಿ ಮತ್ತು ನೀರಿನ ಸೆಲೆಗಳನ್ನು ಕೆರೆಕಟ್ಟೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
ನಮ್ಮ ಊರು -ನಮ್ಮ ಪರಿಸರ- ನಮ್ಮ ಕೆರೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಾಗಿದೆ ಎಂದರು.
ಉಪವಿಭಾಗಾಧಿಕಾರಿ ಸೋಮಪ್ಪ ಕಡುಕೋಳ , ನ್ಯಾಯಾಧೀಶ ಸಾಗರ್ ಗುರು ಗೌಡ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ , ತಹಶಿಲ್ದಾರ್ ಸುರೇಶ ಚಾರ್ , ತಾ.ಪಂ. ಬಿ.ಎಸ್. ಲಕ್ಷಣ್ . ಪುರಸಭೆ ಮುಖ್ಯಾಧಿಕಾರಿ ಎಂ.ಬಿ. ಪಿರೋಜ್,ವಕೀಲರ ಸಂಘದ ಉಪಾಧ್ಯಕ್ಷ ಜಿ ಎನ್ ನರಸಿಂಹಮೂರ್ತಿ ಕಾರ್ಯದರ್ಶಿ ರಂಗನಾಥ ಸಾಫ್ಟ್ ವೇರ್ ಎಂಜಿನಿಯರ್ ಚಂದ್ರಹಾಸ ರೆಡ್ಡಿ ,ಪುರಸಭೆಯ ಅರೋಗ್ಯ ನಿರೀಕ್ಷಕ ಬಾಲಾಜಿ,ನ್ಯಾಯಾಂಗ ಇಲಾಖೆ ನೌಕರರು, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.




0 Comments