Ticker

6/recent/ticker-posts

Ad Code

Responsive Advertisement

ಗುಲಬರ್ಗಾ ರಾಜ್ಯ ಮಟ್ಟದ ಒಬಿಸಿ ಮೊರ್ಚಾ ಬೃಹತ್ ಸಮಾವೇಶ ಕುರಿತಾದ ಪೂರ್ವಬಾವಿ ಸಭೆ

ಬೆಂಗಳೂರು : ನಗರದ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭಾದ ಹವ್ಯಕ ಭವನದಲ್ಲಿ ಗುರುವಾರ ಸಂಜೆ, ಮುಂಬರುವ  ಅಕ್ಟೋಬರ್ ತಿಂಗಳ 30 ರಂದು ಗುಲಬರ್ಗಾ ಮಾಹಾನಗರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಒಬಿಸಿ ಮೊರ್ಚಾ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮಂಜಸ ಕಾರ್ಯಯೋಜನೆ ಹಾಗೂ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲು, ಬೆಂಗಳೂರು ಕೇಂದ್ರ ಹಾಗೂ ಉತ್ತರ ವಿಭಾಗದ ಎಲ್ಲಾ  ಒಬಿಸಿ ಮೋರ್ಚಾಗಳ ಸದಸ್ಯರ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು. 






ಈ ಸಭೆಯಲ್ಲಿ  ಸಂಸದರುಗಳಾದ ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಪ್ರಮೋದ್ ಮಧ್ವರಾಜ್, ಕೇಂದ್ರ ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಸಿ.ಶ್ರೀನಿವಾಸ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಬಿ.ಗೋವಿಂದರಾಜು, ಬ್ಯಾಟರಾಯನಪುರ ನಗರ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ವೆಂಕಟೇಶ್, ಬೆಂಗಳೂರು ಉತ್ತರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಭಾನು ರಂಗಸ್ವಾಮಿ, ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಮಂಡಲ ಒಬಿಸಿ ಮೋರ್ಚಾ  ಅಧ್ಯಕ್ಷ ಎನ್.ಹರೀಶ್,   ಪ್ರಧಾನ ಕಾರ್ಯದರ್ಶಿ ಶಶಿಧರನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶೇಖರ್, ಸಾಮಾಜಿಕ ಜಾಲತಾಣದ ಮಾಧ್ಯಮ ಪ್ರಮುಖ್ ವಿ. ಶ್ರೀನಿವಾಸ, ಬೆಂಗಳೂರು ಕೇಂದ್ರ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕರುಣಾಕರ ಯಾದವ್, ಯಶವಂತಪುರ ವಾರ್ಡ್ ಅಧ್ಯಕ್ಷ ಭುವನೇಂದ್ರ ಮುಂತಾದ ಅನೇಕ ಮುಖಂಡರು ಉಪಸ್ಥಿತಿಯಲ್ಲಿ 

ಜಿಲ್ಲಾ ಪ್ರಭಾರಿಗಳು, ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಒಬಿಸಿ ಮೊರ್ಚಾದ  ಎಲ್ಲಾ ಪದಾಧಿಕಾರಿಗಳು  ಒಬಿಸಿ ಮಂಡಲ ಅಧ್ಯಕ್ಷರು,ಒಬಿಸಿ ಮಂಡಲ ಎಲ್ಲಾ ಪದಾಧಿಕಾರಿಗಳು ಜಿಲ್ಲಾ ಸಂಯೊಜಕರು,ಮಂ ಡಲ ಸಂಯೊಜಕರು,ಜಿ ಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರು,ಸಹ ಸಂಚಾಲಕರಾದಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement