ಬೆಂಗಳೂರು: ರಾಜ್ಯ ರಾಜಧಾನಿಯ ಆಡಳಿತ ಕೇಂದ್ರವಾದ ಬಿಬಿಎಂಪಿ ಚುನಾವಣೆ ನಡೆಸಲು ಪಾಲಿಕೆ ಸಿದ್ಧ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ರಾಜ್ಯ ಹೈಕೋರ್ಟ್ ಆದೇಶ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ ಆಯುಕ್ತರು, ವಾರ್ಡ್ ವಿಂಗಡಣೆ ಬಗ್ಗೆ ಕೆಲವರು ತಕರಾರು ಎತ್ತಿ ಕೋರ್ಟ್ಗೆ ಅರ್ಜಿ ಹಾಕಿದ್ದರು. ಕೋರ್ಟ್ ಆ ಅರ್ಜಿಯನ್ನ ವಜಾ ಮಾಡಿದೆ. ಈಗ ಇರುವುದು ಮೀಸಲಾತಿ ಪಟ್ಟಿ ವಿಚಾರಣೆ ಮಾತ್ರ. ಮೀಸಲಾತಿ ಪಟ್ಟಿಗೂ ನಮಗೂ ಸಂಬಂಧ ಇಲ್ಲ, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರುವ ಹಿನ್ನೆಲೆ ಚುನಾವಣೆ ನಡೆಸಲು ಪಾಲಿಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಗೊಂದಲವಿಲ್ಲ: ಚುನಾವಣಾ ಆಯೋಗ ಯಾವಾಗ ದಿನಾಂಕ ನಿಗದಿಪಡಿಸಿದರು ನಾವು ಚುನಾವಣೆಗೆ ಸಿದ್ಧ. ಇನ್ನೂ, ಮತದಾರರ ಪಟ್ಟಿಯನ್ನು ಕೂಡ ಅಂತಿಮಗೊಳಿಸಿ ಪ್ರಕಟಿಸಿದ್ದೇವೆ. ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿ ಗೊಂದಲ ದೋಷ ಇಲ್ಲ ಎಂದು ವಿವರಿಸಿದರು.
2011ರ ಜನಗಣತಿ ಪ್ರಕಾರ ಮತದಾನ : 2011ರ ಜನಗಣತಿ ಪ್ರಕಾರವೇ ಮತದಾರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಸಂಬಂಧ ನಮ್ಮ ಕಡೆಯಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದರು.

0 Comments