Ticker

6/recent/ticker-posts

Ad Code

Responsive Advertisement

ಅವ್ಯವಹಾರಕ್ಕೆ ಅವಕಾಶ ನೀಡದ ಕಾರಣ ಹಿಂದಿನ ಪಿಡಿಓ ರವರು ನನ್ನ ಆಡಳಿತದ ತೆಜೋವಧೆ ಮಾಡುತ್ತಿದ್ದಾರೆಂದು ಗಂಜಲಗುಂಟೆ ಗ್ರಾ.ಪಂ. ಅಧ್ಯಕ್ಷೆ ಆರೋಪ

 ಮಧುಗಿರಿ : ಆಡಳಿತದಲ್ಲಿ ಅವ್ಯವಹಾರಕ್ಕೆ ಅವಕಾಶ ನೀಡದ ಕಾರಣ ಹಿಂದಿನ ಪಿಡಿಓ ರವರು ನನ್ನ ಆಡಳಿತದ ತೆಜೋವಧೆ ಮಾಡುತ್ತಿದ್ದಾರೆಂದು ಗಂಜಲಗುಂಟೆ ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಮ್ಮ ಆರೋಪಿಸಿದ್ದಾರೆ . 



ತಾಲೂಕಿನ ಕಸಬಾ ಗಂಜಲಗುಂಟೆ ಗ್ರಾ.ಪಂ.ನಲ್ಲಿ ಕರೆದಿದ್ದ ಪತ್ರಿರಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ 2017 ರಿಂದ 2020 ರವರೆಗೂ ಹಲವಾರು ಅವ್ಯವಹಾರಕ್ಕೆ ಹಿಂದಿನ ಆಡಳಿತ ಕಾರಣವಾಗಿದ್ದು , ಪಿಡಿಓ ರವರು ಅಭಿವೃದ್ಧಿಗೆ ಸಹಕಾರ ನೀಡಲಿಲ್ಲ . ಕಾಮಗಾರಿ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು ಅಧ್ಯಕ್ಷ ಳಾದ ನಮ್ಮ ಮಾತಿಗೂ ಕಿಮ್ಮತ್ತು ನೀಡುತ್ತಿರಲಿಲ್ಲ . ಇದರಿಂದ ಬೇಸತ್ತು ಅವರನ್ನು ವರ್ಗಾವಣೆ ಮಾಡಿಸಿದ ಕಾರಣಕ್ಕೆ ಇತರೆ ಸದಸ್ಯರಿಂದ ನನ್ನ ವಿರುದ್ಧ ಮಸಲತ್ತು ಮಾಡಲು ಹೊರಟಿದ್ದಾರೆ . ಎಂದು ಆರೋಪಿಸಿದ್ದು ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ . ಕಳೆದ ತಿಂಗಳಿಂದ ನೂತನ ಪಿಡಿಓ ಬಂದಿದ್ದು ಮುಂದೆ ಗ್ರಾ.ಪಂ.ನ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು .

ಸದಸ್ಯ ವಿರೇಶ್ ಮಾತನಾಡಿ, ಹಿಂದಿನ ಪಿಡಿಓ ರವಿಚಂದ್ರ ಇಂದಿಗೂ ಹೊಸ ಪಿಡಿಓಗೆ ಜವಾಬ್ದಾರಿ ನೀಡಿಲ್ಲ . ಅವರ ಕಾಲದ ಎಲ್ಲ ಕಾಮಗಾರಿಗಳನ್ನು ತನಿಖೆ ಮಾಡಿಸಲು ಈಗಾಗಲೇ ಸಿಇಓ ರವರಿಗೆ ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ . ಈ ಬಾರಿ ಸೆ .28 ಕ್ಕೆ ಲೋಕಾಯುಕ್ತರು ಬರುತ್ತಿದ್ದು ಅವರಿಗೆ ಈ ಕುರಿತು ದೂರು ನೀಡುವುದಾಗಿ ತಿಳಿಸಿದರು . 

ನಾನು ಗಂಜಲಗುಂಟೆಯಿಂದ ಹೊರಡುವಾಗ ಸಾಜೀದ ಬಾನು ಎಂಬುವವರಿಗೆ ಚಾರ್ಜ್ ನೀಡಿದ್ದೆ . ಅವರಿಂದ ಈಗಿನ ಪಿಡಿಓ ಚಾರ್ಜ್ ಪಡೆದಿದ್ದಾರೆ . ನನ್ನಿಂದ ಯಾವುದೇ ಲೋಪವಾಗಿಲ್ಲ . ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಡಿರುವ ಈ ಆರೋಪಗಳು ಸತ್ಯಕ್ಕೆ ದೂರವಾದವು – ರವಿಚಂದ್ರ , ಹಿಂದಿನ ಪಿಡಿಓ . 

 ನನ್ನ ಅವಧಿಯಲ್ಲಿನ ಎಲ್ಲ ಕಾಮಗಾರಿಗಳ ಆಡಿಟ್ ನಡೆದಿದ್ದು ಸಂಪೂರ್ಣ ಪಾರದರ್ಶಕವಾಗಿದೆ . ಯಾವುದೇ ಲೋಪವಿಲ್ಲದೆ ಕೆಳಗಿಳಿದಿದ್ದೇನೆ . ಅವರು ತನಿಖೆ ಮಾಡಿಸುವುದಾದರೆ ನನ್ನ ಅಭ್ಯಂತರವಿಲ್ಲ . - ನರಸಿಂಹಮೂರ್ತಿ , ಹಿಂದಿನ ಅಧ್ಯಕ್ಷ , 

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಚೇತನ ಶಿವಕುಮಾರ್, ಸದಸ್ಯರಾದ ದಾಸೇಗೌಡ ಅಮರಾವತಿ, ವಿರೇಶ್, ಮಾಲ, ರಂಗರಾಜು, ನಂದಿನಿ, ರಘುನಾಥ್, ನಾಗಭೂಷಣ್, ಮಹೇಶ್ ಹಾಗೂ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement