Ticker

6/recent/ticker-posts

Ad Code

Responsive Advertisement

ಶಿಡ್ಲಘಟ್ಟ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಭೇಟಿ

ಚಿಕ್ಕಬಳ್ಳಾಪುರ:ಶಿಡ್ಲಘಟ್ಟ  ತಹಸೀಲ್ದಾರ್ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಅವರು ಭೇಟಿ ನೀಡಿ ತಾಲ್ಲೂಕು ಆಡಳಿತದ ಕಚೇರಿಯ ಸಮಸ್ಯೆಗಳು, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ,  ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. 

ರಾಜ್ಯ ಸರ್ಕಾರದ  ಆದೇಶದನ್ವಯ ಪ್ರತಿ ಮಂಗಳವಾರ ಜಿಲ್ಲೆಯ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ  ಪರಿಶೀಲಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಂತರ ಆಧಾರ್ ನೋಂದಣಿ,  ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು.

ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ  ತ್ವರಿತ  ಸೇವೆ ನೀಡಿ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು  ಜಿಲ್ಲಾಧಿಕಾರಿಗಳು  ನೀಡಿದರು.  ತಾಲ್ಲೂಕು ಆಡಳಿತದಲ್ಲಿನ ಸಿಬ್ಬಂದಿಯ ಕೊರತೆ, ಸಾರ್ವಜನಿಕರಿಗೆ ಒದಗಿಸುವ ಸೇವೆ, ಜನರ ಕುಂದು  ಕೊರತೆಗಳನ್ನು , ಆಡಳಿತದ ಕಾರ್ಯ ವೈಖರಿಯನ್ನು  ಪರಿಶೀಲನೆ ನಡೆಸಿ ಅದರ ಸುಧಾರಣೆಗೆ ಅಗತ್ಯ ಸೌಲಭ್ಯ ಒದಗಿಸಲು  ಅಧಿಕಾರಿಗಳಿಗೆ  ಸಲಹೆ, ಸೂಚನೆಗಳನ್ನು ನೀಡಿದರು.

ತಾಲೂಕು  ಕಚೇರಿ  ಭೇಟಿಯ ನಂತರ   ಶಿಡ್ಲಘಟ್ಟ ನಗರದ 1 ಮತ್ತು 2ನೇ ವಾರ್ಡಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆಯುಷ್ಮಾನ್ ಆರೋಗ್ಯ  ಕಾರ್ಡ್ ನ  ಮಹತ್ವದ ಬಗ್ಗೆ ಜನರಲ್ಲಿ  ಜಾಗೃತಿ  ಮೂಡಿಸಿದರು . 

ಆನಂತರ ಚಿಕ್ಕದಾಸರಹಳ್ಳಿ ಹಾಗೂ ಚೀಮಂಗಲ ಗ್ರಾಮದ ಸರ್ಕಾರಿ ಶಾಲೆಗಳಿಗೆ  ಭೇಟಿ ನೀಡಿ ಶಾಲಾ ಮಕ್ಕಳ ಕಲಿಕಾ  ಪ್ರಗತಿಯನ್ನು  ಪರಿಶೀಲಿಸಿದರು  ಜೊತೆಗೆ  ಆಯುಷ್ಮಾನ್ ಆರೋಗ್ಯ ಕಾರ್ಡ್ ನ‌ ನೋಂದಣಿಯಾಗುತ್ತಿರುವುದರ ಬಗ್ಗೆ ಖುದ್ದಾಗಿ ಪರೀಶಿಲಿಸಿದರು.

ಕೊನೆಯದಾಗಿ ಏಮಾರಲಹಳ್ಳಿ  ಡೈರಿ  ಕೇಂದ್ರಕ್ಕೆ ಭೇಟಿ ನೀಡಿ  ಅಲ್ಲಿನ ಸ್ವಚ್ಚತೆ ಹಾಗೂ ನಿರ್ವಹಣೆ, ಸ್ಥಿತಿ ಗತಿಗಳ  ಬಗ್ಗೆ  ಪರಿಶೀಲಿಸಿದರು ಜೊತೆಗೆ   ಹೈನು ರೈತರೊಂದಿಗೆ   ಚರ್ಚಿಸಿ ಸಮಸ್ಯೆಗಳನ್ನು  ಆಲಿಸಿದರು.

ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲ್ಲೂಕು ತಹಸಿಲ್ದಾರ್   ರಾಜೀವ್ ಅವರು  ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Post a Comment

0 Comments

Ad Code

Responsive Advertisement