ವಾರ್ತಾ ಜಾಲ ಸುದ್ದಿ ಮಧುಗಿರಿ : ಹೆಂಡತಿಯ ಮೇಲೆ ಅನುಮಾನಗೊಂಡು ಆಕೆಯ ಕೊಲ್ಲಲು ಯತ್ನಿಸಿದ ಸಂದರ್ಭದಲ್ಲಿ ರಕ್ಷಿಸಲು ಬಂದಿದ್ದ ಹೆಂಡತಿಯ ತಂಗಿ ಎಡಗೈಗೆ ಕತ್ತರಿಸಿದ್ದ ಆರೋಪಿಗೆ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸಂತ್ರನ ನ್ಯಾಯಾಲಯ ಏಳು ವರ್ಷ ಸದಾ ಸಜೆ ಮತ್ತು 30000 ದಂಡ ವಿಧಿಸಿ ತೀರ್ಪು ನೀಡಿದೆ.
ಪಕ್ಕದ ರಾಜ್ಯದ ಆಂಧ್ರಪ್ರದೇಶ ಮಡಕಶಿರದ ಹನುಮಂತ (45) ಶಿಕ್ಷೆಗೊಳಗಾದ ಅಪರಾಧಿ 2020ರ ಮಾರ್ಚ್ ನಲ್ಲಿ ಮಧುಗಿರಿ ತಾಲೂಕು ಡಿ ವಿ ಹಳ್ಳಿಯಲ್ಲಿ ತನ್ನ ಮಾವನ ತಿಪ್ಪೇಸ್ವಾಮಿ ಮನೆಯಲ್ಲಿ ಹೆಂಡತಿ ಅನಿತಾಳ ಕೊಲೆಗೆ ಯತ್ನಿಸಿದ್ದ ದೂರು ದಾಖಲಾಗಿತ್ತು.
ಮನೆಯಲ್ಲಿದ್ದ ಹೆಂಡತಿಯ ತಂಗಿ ಮೇಘನಾ (16) ಕೈ ಅಡ್ಡ ಇಟ್ಟಾಗ ಆರೋಪಿ ಬೀಸಿದ ಮಚ್ಚಿನ ಏಟು ಮೇಘನಾಳ ಎಡಗೈಗೆ ಬಿದ್ದು ಕತ್ತರಿಸಿ ಹೋಗಿತ್ತು.
ಆಗಿನ ಪಿಎಸ್ಐ ಎಲ್. ಕಾಂತರಾಜು ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಬಿಎಂ ನಿರಂಜನ್ ಮೂರ್ತಿ ವಾದ ಮಂಡಿಸಿದರು.
ವರದಿ:ನಾಗೇಶ್ ಜೀವಾ ಮಧುಗಿರಿ

0 Comments