Ticker

6/recent/ticker-posts

Ad Code

Responsive Advertisement

7 ಲಕ್ಷ ಮೌಲ್ಯದ ಮದ್ಯ ನಾಶಪಡಿಸಿದ ಮಧುಗಿರಿ ಅಬಕಾರಿ ಇಲಾಖೆ*

ವಾರ್ತಾ ಜಾಲ ಸುದ್ದಿ ಮಧುಗಿರಿ: ತಾಲೂಕಿನಲ್ಲಿ ಅಬಕಾರಿ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಧ್ಯವನ್ನು ಇಂದು ಮಧುಗಿರಿಯ ಹೊರವಲಯದಲ್ಲಿರುವ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಸುಮಾರು 7ಲಕ್ಷ ಮೌಲ್ಯದ ಮಧ್ಯವನ್ನು ನಾಶಪಡಿಸಲಾಯಿತು.



ಸುಮಾರು 32 ಪ್ರಕರಣಗಳಲ್ಲಿ 638 ಲೀಟರ್ ಮಧ್ಯ  ಹಾಗೂ 78 ಲೀಟರ್ ಬಿಯರ್ ಹಾಗೂ 123 ಲೀಟರ್ ಸೇಂದಿ  ಹಾಗೂ 1 ಪ್ಲಾಸ್ಟಿಕ್ ಡ್ರಮ್ ಅನ್ನು ಅಬಕಾರಿ ಉಪಾಧಿಕ್ಷರಾದ ಸುರೇಶ್,

ಗ್ರೇಡ್ ಟು ತಹಶೀಲ್ದಾರ್ ತಿಪ್ಪೇಸ್ವಾಮಿ ಹಾಗೂ ಸಬ್ ಡಿವಿಷನ್ ಇನ್ಸ್ಪೆಕ್ಟರ್ ಆದ ನಾಗರಾಜು ಅಬಕಾರಿ ನಿರೀಕ್ಷಕರಾದ ರಾಮುಮೂರ್ತಿ ಡಿಪೋ ಮ್ಯಾನೇಜರ್ ವೀರಾರೆಡ್ಡಿ ಇವರ ಸಮ್ಮುಖದಲ್ಲಿ

ಪಟ್ಟಣದ  ಹೊರವಲಯದಲ್ಲಿರುವ ಪುರಸಭಾ ಕಸ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

ಈ ವೇಳೆಯಲ್ಲಿ ಅಬಕಾರಿ ನಿರೀಕ್ಷಕರಾದ ರಾಮಮೂರ್ತಿ ಮಾತನಾಡಿ ವಿವಿಧ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಧ್ಯ ಬಿಯರ್ ಸೇಂದಿ ಇನ್ನಿತರ ವಸ್ತುಗಳನ್ನು ಮಾನ್ಯ ಉಪಯುಕ್ತರ ಆದೇಶದ ಮೇರೆಗೆ ಮಧುಗಿರಿ ತಾಲೂಕಿನ ಪುರಸಭೆ ಹೂರವಲಯದ ಕಸ ವಿಲೇವಾರಿ ಘಟಕದಲ್ಲಿ ಇಂದು ನಾಶಪಡಿಸಲಾಗುತ್ತಿದ್ದು ಒಟ್ಟು 32 ಪ್ರಕರಣಗಳಲ್ಲಿ 638ಲೀಟರ್ ಮಧ್ಯ ಹಾಗೂ 78 ಲೀಟರ್ ಬಿಯರ್ ಹಾಗೂ 123 ಲೀಟರ್ ಸೇಂದಿ ಹಾಗೂ ಒಂದು ಪ್ಲಾಸ್ಟಿಕ್ ಡ್ರಮ್ ಇನ್ನಿತರ ವಸ್ತುಗಳನ್ನು ನಾಶಪಡಿಸಲಾಗುತ್ತಿದ್ದು ಅಬಕಾರಿ ನಿಯಮಗಳನ್ವಯ ಜಪ್ತಿ ಪಡಿಸಿದ ಮಧ್ಯವನ್ನು ಮರು ಬಳಕೆಗೆ ಅವಕಾಶವಿರುವುದಿಲ್ಲ ಆದ್ದರಿಂದ ವಿವಿಧ ಪ್ರಕರಣಗಳಲ್ಲಿ  ಜಪ್ತಿ ಪಡಿಸಿದಂತಹ ಮಧ್ಯ ಬಿಯರ್ ಸೇಂದಿಯನ್ನು ಮಾನ್ಯರ ಆದೇಶದ ಮೇರೆಗೆ ಈ ದಿನ ನಾಶಪಡಿಸಲಾಗಿದೆ ಎಂದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement