Ticker

6/recent/ticker-posts

Ad Code

Responsive Advertisement

ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆ: ಗೊಂದಿಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷ ರಂಗನಾಥ್

 ವಾರ್ತಾ ಜಾಲ ಸುದ್ದಿ 

ಮಧುಗಿರಿ: ಗೊಂದಿಹಳ್ಳಿ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ರಂಗನಾಥ್ ಜಿ.ಎಂ. ಅವಿರೋಧವಾಗಿ ಆಯ್ಕೆಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.



ತಾಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದ ಅವರು, ಗ್ರಾ.ಪಂ.ನ ಸದಸ್ಯರಿಗೆ ಎಷ್ಟೇ ಆಮಿಷ ತೋರಿದರೂ ಸದಸ್ಯರೆಲ್ಲ ನನ್ನ ಬೆಂಬಲಿಸಿ ಅವಿರೋಧವಾಗಿ ಆಯ್ಕೆಮಾಡಿದ್ದು, ನನ್ನ ಮೇಲೆ ನಂಬಿಕೆಯಿರಿಸಿ ಇಷ್ಟು ಚಿಕ್ಕ ವಯಸ್ಸಿಗೆ ನನಗೆ ಈ ಜವಾಬ್ದಾರಿಯನ್ನು ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಲಾಗುವುದು ಹಾಗೂ ನನ್ನ ಅವಧಿಯಲ್ಲಿ ಗ್ರಾ.ಪಂ.ಗೆ ನೂತನ ಕಟ್ಟಡ, ಗ್ರಾಮಕ್ಕೆ ಸ್ಮಶಾನ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಯಾವುದೇ ಅಪವಾದಗಳು ಬರದಂತೆ ಸಾರ್ವಜನಿಕರ ಸೇವೆಗೆ ಬದ್ಧನಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ  ಗ್ರಾ.ಪಂ.ಸದಸ್ಯರಾದ ಮಲ್ಲಿಕಾರ್ಜುನಯ್ಯ, ರೂಪ ಮಂಜುನಾಥ್, ಚಂದ್ರಶೇಖರ್, ನಾಗಮ್ಮ ರಾಜನಾಯಕ, ಶಿವರುದ್ರಯ್ಯ, ಗಿರಿಜಾ, ಆನಂದ ಕುಮಾರ್, ಲಕ್ಷ್ಮಮ್ಮ ಜಗದೀಶ್, ಹರ್ಷಿತಾ ಪ್ರಸಾದ್, ಸುನೀತಾ ರಮೇಶ್, ತಾ.ಪಂ. ಮಾಜಿ ಸದಸ್ಯ ಸೌಭಾಗ್ಯ ಹನುಮಂತರಾಯಪ್ಪ, ಪಿಡಿಒ ಪುಂಡಲೀಕ, ಕಾರ್ಯದರ್ಶಿ ಭಾಗ್ಯಮ್ಮ, ಮಾಜಿ ಗ್ರಾ.ಪಂ.ಸದಸ್ಯರಾದ ರಮೇಶ್, ಮುನೀರ್, ಮುಖಂಡರಾದ ಬಾಲಾಜಿ, ರಮೇಶ್, ಲೊಕೇಶ್, ಲಕ್ಷ್ಮೀಕಾಂತ, ಗೋವಿಂದಪ್ಪ, ರಾಮಾಂಜಿನಪ್ಪ, ಮೂರ್ತಪ್ಪ, ಕರಿಯಪ್ಪ, ಮುದ್ದರಂಗಪ್ಪ, ಹನುಮಂತ, ಪುಟ್ಟರಂಗಪ್ಪ, ರಾಖಿ, ಸತೀಶ್, ನಂಜುಂಡಪ್ಪ, ಶ್ರೀನಿವಾಸ್, ಉಮೇಶ್, ರವಿ, ಅನಂತ, ಗಜೇಂದ್ರ, ರಂಗಧಾಮ, ಪುಟ್ಟರಂಗಪ್ಪ ಹಾಗೂ ಇತರರು ಇದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement