Ticker

6/recent/ticker-posts

Ad Code

Responsive Advertisement

ಖಾಸಗಿ ಹಾಲಿನ ಮಾದರಿಗಳ ಆಂದೋಲನ

ಬೆಂಗಳೂರು, ಸೆಪ್ಟೆಂಬರ್ 19 (ಕರ್ನಾಟಕ ವಾರ್ತೆ):    ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿರುವ ಖಾಸಗಿ ಹಾಲಿನ ಮಾದರಿಗಳನ್ನು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖಾ ವತಿಯಿಂದ ಜುಲೈ ಮತ್ತು ಆಗಸ್ಟ್-2022ರ ಮಾಹೆಯಲ್ಲಿ ಆಂದೋಲನ ಕೈಗೊಂಡು ಎಲ್ಲಾ ಜಿಲ್ಲೆಗಳಿಂದ ತಲಾ 05 ಖಾಸಗಿ ಹಾಲಿನ ಆಹಾರ ಮಾದರಿಗಳ ಲೀಗಲ್ ಸ್ಯಾಂಪಲ್‍ನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಎಲ್ಲಾ ಜಿಲ್ಲಾ ಅಂಕಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

ರಾಜ್ಯದಲ್ಲಿ 160 ಖಾಸಗಿ ಹಾಲಿನ ಆಹಾರ ಮಾದರಿಗಳ ಲೀಗಲ್ ಸ್ಯಾಂಪಲ್‍ನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿರುತ್ತಾರೆ. 06 ಹಾಲಿನ ಆಹಾರ ಮಾದರಿಗಳು ಅಸುರಕ್ಷಿತ (ಹಾಲಿನಲ್ಲಿ ಕೋಲಿಫಾರಂ ಬ್ಯಾಕ್ಟಿರೀಯ ಕಂಡು ಬಂದಿರುತ್ತದೆ) 04 ಸಬ್ ಸ್ಟ್ಯಾಂಡರ್ಡ್ (ಹಾಲಿನಲ್ಲಿ ಎಫ್.ಎಸ್.ಎಸ್.ಎ ನಿಗದಿ ಪಡಿಸಿರುವುದಕ್ಕಿಂತ ಫ್ಯಾಟ್ ಅಂಶವು ಕಡಿಮೆ ಇರುತ್ತದೆ) ಎಂದು ಕೇಂದ್ರ ಎಫ್.ಎಸ್.ಎಸ್.ಎ.ಐ ನೊಂದಾಯಿತ ಎನ್.ಎ.ಬಿ.ಎಲ್ ಪ್ರಯೋಗಾಲಯಗಳಿಂದ ವರದಿ ಬಂದಿರುತ್ತದೆ. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ವರದಿಯಲ್ಲಿ ಅಸುರಕ್ಷಿತ ಎಂದು ಕಂಡುಬಂದರೆ JMFC ನ್ಯಾಯಾಲಯದಲ್ಲಿ ಹಾಗೂ ಸಬ್ ಸ್ಟ್ಯಾಡಂರ್ಡ್ ಎಂದು ಕಂಡುಬಂದರೆ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸದರಿ ಆಹಾರ ಉದ್ದಿಮೆದಾರರ ಮೇಲೆ ಎಫ್.ಎಸ್.ಎಸ್.ಎ.ಐ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಅಡುಗೆ ಎಣ್ಣೆ ಮಾದರಿಗಳ ಆಂದೋಲನ
ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿರುವ ಅಡುಗೆ ಎಣ್ಣೆ ಮಾದರಿಗಳನ್ನು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖಾ ವತಿಯಿಂದ ಆಗಸ್ಟ್-2022ರ ಮಾಹೆಯಲ್ಲಿ ಅಂದೋಲನ ಕೈಗೊಂಡು ಎಲ್ಲಾ ತಾಲ್ಲೂಕುಗಳಿಂದ ತಲಾ 02 ಖಾಸಗಿ ಅಡುಗೆ ಎಣ್ಣೆ ಮಾದರಿಗಳ ಸರ್ವೆ ಸ್ಯಾಂಪಲ್‍ನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಎಲ್ಲಾ ಜಿಲ್ಲಾ ಅಂಕಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ರಾಜ್ಯದಲ್ಲಿ 385 ಅಡುಗೆ ಎಣ್ಣೆ ಮಾದರಿಗಳ ಸರ್ವೆ ಸ್ಯಾಂಪಲ್‍ನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿರುತ್ತಾರೆ. ಅಡುಗೆ ಎಣ್ಣೆ ಮಾದರಿಗಳು 26 ಸಬ್ ಸ್ಟ್ಯಾಂಡರ್ಡ್ (ಅಡುಗೆ ಎಣ್ಣೆಯಲ್ಲಿ ಎಫ್.ಎಸ್.ಎಸ್.ಎ) ನಿಗದಿ ಪಡೆಸಿರುವುದಕ್ಕಿಂತ ಫ್ಯಾಟಿ ಆಸಿಡ್ ಅಂಶವು ಕಡಿಮೆ ಇರುತ್ತದೆ.  unsaponifiable matter ಅಂಶವು ಹೆಚ್ಚು ಇರುವುದು ಕಂಡು ಬಂದಿರುತ್ತದೆ).

93 ಮಿಸ್ ಬ್ರಾಂಡ್ (ಎಫ್.ಎಸ್.ಎಸ್.ಎ) ನಿಗದಿಪಡಿಸಿದ ಮಾನದಂಡಗಳನ್ನು ಪ್ಯಾಕ್ ಮೇಲೆ ನಮೂದಿಸಿರುವುದಿಲ್ಲ) ಎಂದು ಕೇಂದ್ರ ಎಫ್.ಎಸ್.ಎಸ್.ಎ.ಐ ನೊಂದಾಯಿತ ಎನ್.ಎ.ಬಿ.ಎಲ್ ಪ್ರಯೋಗಾಲಯಗಳಿಂದ ವರದಿ ಬಂದಿರುತ್ತದೆ. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement