ಬೆಂಗಳೂರು: ನಮ್ಮೂರ ಸುದ್ಧಿ ಹಾಗೂ ನಮ್ಮೂರ ಅಭಿವೃದ್ಧಿ ವಿವಿದೋದ್ದೇಶಗಳ ಸೇವಾಸಂಸ್ಥೆ, ವಿಜಯಪುರ, ಇವರ ಸಹಯೋಗದಲ್ಲಿ, ಜನನಿ ಪಾರ್ಟಿ ಹಾಲ್, ನವರಂಗ್ ವೃತ್ತ ಸಮೀಪ, ರಾಜಾಜಿನಗರದಲ್ಲಿ, ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿರುವ ಹಾಗೂ ಸಲ್ಲಿಸುತ್ತಿರುವ ಸಾಧಕರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಪತ್ರಕರ್ತರು, ಉದ್ಯಮಿಗಳು, ಸಮಾಜಸೇವಕರು, ಕೃಷಿಕರು, ನಿವೃತ್ತ ಸೈನಿಕರು, ನಿಷ್ಟಾವಂತ ಪೋಲಿಸ್ ಅಧಿಕಾರಿಗಳು, ಚಿತ್ರನಟರು, ರಾಜಕೀಯ ಮುಖಂಡರು, ಚಾಲಕರು, ಶಿಕ್ಷಕರು ಹಾಗೂ ಮತ್ತಿತರೆ ಸಾಧಕರು (ಅವರವರ ಕ್ಷೇತ್ರಗಳಲ್ಲಿ ನಿಸ್ವಾರ್ಥಸೇವೆ ಹಾಗೂ ಸಾಧನೆ ಸಲ್ಲಿಸಿದವರು ಮತ್ತು ಸಲ್ಲಿಸುತ್ತಿರುವವರು) ಇಂತವರನ್ನು ನಿಷ್ಪಕ್ಷಪಾತವಾಗಿ ಗುರುತಿಸಿ ಅವರುಗಳಿಗೆ ನಮ್ಮೂರ ಕಾಯಕ ರತ್ನ ಹಾಗೂ ನಮ್ಮೂರ ರತ್ನ ಎಂಬ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತರಾದ ಜಾಣಗೆರೆ ವೆಂಕಟ್ರಾಮಯ್ಯ ಮತ್ತು ವೆಂಕಟಸುಬ್ಬು ಮೋಕ್ಷಗುಂಡಮ್, ವಾರ್ತಾಜಾಲ ಪತ್ರಿಕೆ ಮುಖ್ಯ ಸಂಪಾದಕ ಬಿ.ಕೆ. ಪ್ರಸನ್ನ, ರಾಜಕೀಯ ಮುಖಂಡರಾದ ಶ್ರೀಮತಿ ಲತಾ (ಜೆಡಿಎಸ್ ಪಕ್ಷದ ಮಹಿಳಾ ಅಧ್ಯಕ್ಷರು, ರಾಜರಾಜೇಶ್ವರಿನಗರ ವಿ. ಸ. ಕ್ಷೇತ್ರ, ಬೆಂಗಳೂರು), ನಾರಾಯಣಸ್ವಾಮಿ (ನಾಣಿ, ಹಿರಿಯ ಕಾಂಗ್ರೆಸ್ ಮುಖಂಡರು, ಯಶವಂತಪುರ, ಬೆಂಗಳೂರು), ಗೋವಿಂದರಾಜು (ಜೆಡಿಎಸ್ ಪಕ್ಷದ ಅಧ್ಯಕ್ಷರು, ಜೆಪಿ ಪಾರ್ಕ್ ವಾರ್ಡ್, ಬೆಂಗಳೂರು) ಮತ್ತಿತರೆ ಸಾಧಕರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತರಾದ ಜಾಣಗೆರೆ ವೆಂಕಟ್ರಾಮಯ್ಯರವರು ಕಿರಿಯ ಪತ್ರಕರ್ತರಿಗೆ ಹಾಗೂ ಯುವಪೀಳಿಗೆ ಪತ್ರಕರ್ತರಿಗೆ ಪಾರದರ್ಶಕತೆಯ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಪತ್ರಿಕೋದ್ಯಮದ ನಿಷ್ಟತೆಯೆನ್ನು ವಿವರಿಸಿದರು. ನಂತರ ಮಾತನಾಡಿದ ಶ್ರೀಮತಿ ಲತಾ (ಜೆಡಿಎಸ್ ಮುಖಂಡರು) ಈಗಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನೆಡೆಯುತ್ತಿರುವ ಕೊಲೆ, ದಬ್ಬಾಳಿಕೆ, ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಯುವಪೀಳಿಗೆ ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂದು ತಮ್ಮ ಮನದಾಳದ ಮಾತುಗಳನ್ನು ಹೇಳಿದರು. ಅದೇ ರೀತಿಯಾಗಿ ನಾರಾಯಣಸ್ವಾಮಿ ಮತ್ತು ಗೋವಿಂದರಾಜುರವರು ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇವಲ ಪ್ರಶಸ್ತಿಗಾಗಿ ಸಮಾಜಸೇವೆ ಮಾಡದೆ ನಿಸ್ವಾರ್ಥ ಸೇವೆಗೆ ಪ್ರಶಸ್ತಿ - ಗೌರವ ಸಿಗಬೇಕೆಂಬುದು ಇವರೆಲ್ಲರ ಅಭಿಪ್ರಾಯ ಅನಿಸಿಕೆಯಾಗಿತ್ತು.
ಇದೇ ರೀತಿಯಾಗಿ ಪ್ರತಿ ವರ್ಷವು ನಿಸ್ವಾರ್ಥ ಸಮಾಜಸೇವಕರು ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಶಕ್ತಿ ಈ ಸೇವಾ ಸಂಸ್ಥೆಗೆ ಸಿಗಲಿ.
-ಶಿವ ಪ್ರಸಾದ್ ಜಿ






0 Comments