ವಾರ್ತಾಜಾಲ ಸುದ್ದಿ ಮಧುಗಿರಿ : ತಾಲೂಕಿನ ಪುರವರ ಗ್ರಾಮ ಪಂಚಾಯ್ತಿಯ ಪುರವರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಂದು ಮಕ್ಕಳ ವಿಶೇಷ ಗ್ರಾಮ ಸಭೆ ಏರ್ಪಡಿಸಲಾಗಿತ್ತು.
ಈ ಪಂಚಾಯಿತಿಯ ಸ್ಥಾನವನ್ನು ಅಲಂಕರಿಸಿದ್ದವರು ಪುರವರ ಪಂಚಾಯ್ತಿ ಅಧ್ಯಕ್ಷರಾದ ವನಜಾಕ್ಷಿ ಸಿದ್ದರಾಜು ರವರು. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪುರವರ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲೆಗಳ ವಿಧ್ಯಾರ್ಥಿಗಳು ,ಉಪಾಧ್ಯಾಯರು ಭಾಗವಹಿಸಿದ್ದರು.
ಶಿಸ್ತುಬದ್ಧವಾಗಿ ನಡೆಸಿದ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ಶಾಲೆಗಳಲ್ಲಿರುವ ಅನೇಕ ಸಮಸ್ಯೆಗಳು ಮತ್ತು ಗ್ರಾಮದ ಸಮಸ್ಯೆಗಳನ್ನು ಹೇಳಿಕೊಂಡರು.ವಿಶೇಷವಾಗಿ ಮೂಲ ಭೂತ ಸೌಲಭ್ಯಗಳ ಕೊರತೆ, ಶಿಥಿಲಗೊಂಡಿರುವ ಕಟ್ಟಡಗಳ ನಿರ್ಮೂಲನೆ,
ಶಾಲಾ ಕೊಠಡಿಗಳಿಗೆ ಕಿಟಕಿ ಬಾಗಿಲುಗಳು ವಿದ್ಯುತ್ ವ್ಯವಸ್ಥೆ ಇಲ್ಲದ್ದು, ಕುಡಿಯುವ ನೀರಿನ ಕೊರತೆ ಶಾಲಾ ಅಂಗಳದಲ್ಲಿ ಗುಂಡಿಗಳು ಉಂಟಾಗಿ ನೀರು ತುಂಬಿ ಕೊಂಡಿರುವ ಸಮಸ್ಯೆ,ಸಾರ್ವಜನಿಕರು ಶಾಲೆಗಳನ್ನು ತಮ್ಮ ಅನೈತಿಕ ವಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ,ಊಟದ ದಿನಸಿಯಲ್ಲಿ ಹುಳಗಳು ಕಾಣಿಸಿಕೊಳ್ಳುವ ಬಗ್ಗ ಅರ್ಜಿಗಳನ್ನು ಸಲ್ಲಿಸುವುದರ ಜೊತೆಗೆ ವೇದಿಕೆಯಲ್ಲೂ ಹೇಳಿಕೊಂಡರು. ಇವುಗಳ ಕಡೆ ಹೆಚ್ಚಿನ ಗಮನ ವಹಿಸಬೇಕಾಗಿ ವಿನಂತಿಸಿಕೊಂಡರು.
ಪಿ.ಡಿ.ಒ ಪುಂಡಲೀಕ ಸಮಸ್ಯೆಗಳಿಗೆ ಪಂಚಾಯಿತಿ ವತಿಯಿಂದ ಕೈಗೊಂಡಿರುವ ಕ್ರಮಗಳು
ಈಗಾಗಲೇ ಮಾಡಿರುವ ಪ್ರಯತ್ನಗಳನ್ನು ವೇದಿಕೆಯಲ್ಲೇ ವಿಧ್ಯಾರ್ಥಿಗಳಿಗೆ ಮನವರಿಕೆ ಅರ್ಥವಾಗುವಂತೆ ವಿವರಿಸಿದರು.
ಮಕ್ಕಳ ಗ್ರಾಮಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಧುಗಿರಿಯ ಸಿ.ಡಿ.ಪಿ.ಒ ಅನಿತಾ ರವರು ಮಾತನಾಡಿ. ಮಕ್ಕಳಿಗೆ ಇರುವ ವಿಶೇಷ ಹಕ್ಕುಗಳ ಕುರಿತು ವಿವರವಾಗಿ ಮತ್ತು ಕೂಲಂಕುಶವಾಗಿ ತಿಳಿಸಿದರು.ಬಹುತೇಕ ಮಕ್ಕಳು ಶೌಚಾಲಯ,ಗ್ರಂಥಾಲಯ,ಕಟ್ಟಡಗಳ ಸಮಸ್ಯೆಗಳನ್ನು ಹೇಳಿಕೊಂಡಿದ್ದೀರ.ಶಿಥಿಲ ಕಟ್ಟಡಗಳನ್ನು ತೆರವು ಮಾಡಲು ಪಂಚಾಯ್ತಿಯವರು ಸೂಕ್ತ ಕ್ರಮ ಕೈಗೊಳ್ಳಿ,
ಶಾಲಾ ಆವರಣಗಳನ್ನು ಸ್ವಚ್ಛ ವಾಗಿಟ್ಟು ಕೊಳ್ಳುವ ಬಗ್ಗೆ ನಿಮ್ಮ ತಂದೆ ಅಣ್ಣಂದಿರೊಂದಿಗೆ ಮಾತನಾಡಿ ಮನವರಿಕೆ ಮಾಡಿಕೊಡಿ ಆಗ ತಂತಾನೆ ಸ್ವಚ್ಛ ವಾಗಿರುತ್ತದೆ .ಹದಿ ಹರೆಯದ ಲ್ಲಿರುವ ನೀವು ವಯೋ ಸಹಜ ದೈಹಿಕ ಚಪಲಗಳೆಡೆ ಮನಸ್ಸು ಕೊಡದೆ ವಿಧ್ಯಾಭ್ಯಾಸದ ಕಡೆ ಗಮನ ನೀಡಿ ಚೆನ್ನಾಗಿ ವಿದ್ಯಾವಂತರಾಗಿ ತಂದೆ ತಾಯಿಗೆ ಒಳ್ಳೆಯ ಹೆಸರು ತನ್ನಿ ಎಂದು ಸಲಹೆ ನೀಡಿದರು. ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ಅತಿಮುಖ್ಯವಾದ ಘಟ್ಟ ಎಂದು ಮಕ್ಕಳಿಗೆ ಮನವರಿಕೆ ಮಾಡಿದ್ದರು.
ಆ ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂ.ಅಧ್ಯಕ್ಷೆ ವನಜಾಕ್ಷಿ ಸಿದ್ದರಾಜು ಮಾತನಾಡಿ ' ನಮ್ಮ ಪಂಚಾಯಿತಿ ವ್ಯಾಪ್ತಿಯ ನಿಮ್ಮ ಸಲಹೆಗಳನ್ನು ಗಮನವಿಟ್ಟು ಆಲಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದು ಕೆಲವೇ ದಿನಗಳಾಗಿವೆ,ಸಮಸ್ಯೆಗಳಿಗೆ ಪರಿಹಾರ ಗಳನ್ನು ಕಂಡು ಹಿಡಿದು ಬಗೆ ಹರಿಸಲು ಶ್ರಮಿಸುತ್ತಿದ್ದೇನೆ ಹಂತ ಹಂತವಾಗಿ ಒಂದೊಂದೇ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಾಮಾಣಿಕ ವಾಗಿ ಪ್ರಯತ್ನಿಸುತ್ತೇನೆ.' ಎಂದರು. ಇದೇ ಕಾರ್ಯ ಕ್ರಮದಲ್ಲಿ ಮುಖ್ಯ ಶಿಕ್ಷಕ ಕೆ.ಆರ್ ಮಹೇಶ್ ಕುಮಾರ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಸಂಪತ್ ಕುಮಾರ್ ಇಬ್ಬರಿಗೂ ಪಂಚಾಯ್ತಿ ವತಿಯಿಂದ ಬೀಳ್ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಪುರವರ ಪಂ ಉಪಾಧ್ಯಕ್ಷೆ ಲೋಕಮ್ಮ ಶಿವ ಕುಮಾರ್ ,ಸದಸ್ಯರಾದ ವಿಜಯಲಕ್ಷ್ಮಿ ,ಸಂಕಾಪುರ ದಿಲೀಪ್ ,ಕಮಲಮ್ಮ ,ನಾಗಮ್ಮ,ಪ.ಪೂ.ಕಾ.ಪ್ರಾಂಶುಪಾಲ ಶ್ರೀಧರ ದತ್ತರಾಜು ,ಉಪ ಪ್ರಾಂಶು ಪಾಲ ಕೆ.ಆರ್ ಮಹೇಶ್ ಬಾಬು , ಮುಖಂಡರಾದ ಸಿದ್ದರಾಜು ಸಂಕಾಪುರ ,ಲಿಂಗಾರೆಡ್ಡಿ ,ಹರೀಶ್ ಕುಮಾರ್ ,ರಾಮ ಚಂದ್ರಪ್ಪ ,ಸತೀಶ್ ,ನರಸಿಂಹ ಮೂರ್ತಿ , ಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲಾ ಶಿಕ್ಷಕರು, ಅಂಗನ ವಾಡಿ ಕಾರ್ಯ ಕರ್ತೆಯರು ಮತ್ತು ಪಂಚಾಯ್ತಿ ಸಿಬ್ಬಂದಿ , ಭಾಗವಹಿಸಿದ್ದರು. ಪಂಚಾಯಿತಿ ಕಾರ್ಯದರ್ಶಿ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ:ನಾಗೇಶ್ ಜೀವಾ ಮಧುಗಿರಿ. ವಾರ್ತಾಜಾಲ

.jpeg)


0 Comments