Ticker

6/recent/ticker-posts

Ad Code

Responsive Advertisement

ಶುಕ್ರವಾರ ಶ್ರೀ ಮುತ್ತು ಮಾರಿಯಮ್ಮನವರ ಹೂವಿನ ಕರಗ

ಬೆಂಗಳೂರು : ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ಮುನೇಶ್ವರ ಬ್ಲಾಕ್ ನ ಓಂ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಇದೇ ಆಗಸ್ಟ್ 5 ರಿಂದ 7 ನೇ ತಾರೀಖಿನಲ್ಲಿ, ಆಷಾಢ ಮಾಸದ ಆಚರಣೆ ಹಾಗೂ ಕರಗದ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ 5-08-2022 ರಂದು ಸಂಜೆ 6 ಘಂಟೆಗೆ "ಹೂವಿನ ಕರಗ" ವನ್ನು ಗೌತಮ್ ಕೆ. ರವರು ಹೊರಲಿದ್ದು, ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಶ್ರೀ ಅಮ್ಮನವರ ಹೂವಿನ ಕರಗ ಸಂಚರಿಸಲಿದ್ದು, ನಗರದ ಸುತ್ತುಮುತ್ತಲಿನಿಂದಷ್ಟೇ ಅಲ್ಲದೇ ನೆರೆಯ ತಮಿಳುನಾಡು ಭಾಗಗಳಿಂದಲೂ ಭಕ್ತಾದಿಗಳು ಇಲ್ಲಿ ಮೂರು ದಿನಗಳ ಕಾಲ ನಡೆಯಲಿರುವ  ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವರು.



ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಯಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು, ಸಾರ್ವಜನಿಕವಾಗಿ ಈ ಮೂಲಕವೂ ಆಸ್ತಿಕ ಭಕ್ತಾದಿಗಳನ್ನು ದೇವಸ್ಥಾನ ವತಿಯಿಂದ  ಸ್ವಾಗತಿಸುತ್ತಿದ್ದಾರೆ.

Post a Comment

0 Comments

Ad Code

Responsive Advertisement