ಕೆಯುಡಬ್ಲ್ಯೂಜೆಯಲ್ಲಿ ಆ.6ಕ್ಕೆ
ಜಿ.ಎನ್.ರಂಗನಾಥ ರಾವ್ ಅವರ
ಆ ಪತ್ರಿಕೋದ್ಯಮ ಪುಸ್ತಕ ಬಿಡುಗಡೆ
ಸುದ್ದಿಮನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಜಿ.ಎನ್.ರಂಗನಾಥ ರಾವ್ ಹೆಸರು ಎಲ್ಲರಿಗೂ ಚಿರಪರಿಚಿತ. 

ಪ್ರಜಾವಾಣಿ ಪತ್ರಿಕೆಯಲ್ಲಿ ನಾನಾ ಹಂತದಲ್ಲಿ ಹಲವು ಹುದ್ದೆ ನಿಭಾಯಿಸಿದ್ದಲ್ಲದೆ, ಅದೇ ಪತ್ರಿಕೆಯಲ್ಲಿ ಆರು ವರ್ಷ ಸಂಪಾದಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಜಿ.ಎನ್.ರಂಗನಾಥರಾವ್ ಅವರದು. ಕೆಯುಡಬ್ಲ್ಯೂಜೆ ಜತೆಗೆ ಸುಧೀರ್ಘ ಒಡನಾಟ ಇಟ್ಟಕೊಂಡಿದ್ದ ಅವರು ಬಹುಕಾಲ ಸಂಘದ ಸಕ್ರೀಯ ಸದಸ್ಯರು ಆಗಿದ್ದರು.

ರಂಗನಾಥ ರಾವ್ ಬರೆದಿರುವ ಆ ಪತ್ರಿಕೋದ್ಯಮ ಪುಸ್ತಕವನ್ನು ಬಹುರೂಪಿ ಪ್ರಕಾಶನ ಹೊರ ತಂದಿದ್ದು, ಪುಸ್ತಕ ಬಿಡುಗಡೆ ಕಾರ್ಯಕ್ರಮ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಭಾಂಗಣದಲ್ಲಿ 6.8.2022 ರಂದು ಶನಿವಾರ ಬೆಳಿಗ್ಗೆ 11 ಕ್ಕೆ ಏರ್ಪಡಿಸಲಾಗಿದೆ. ಖ್ಯಾತ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಪುಸ್ತಕ ಬಿಡುಗಡೆ ಮಾಡುವರು.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್.ಎನ್.ಆರತಿ, ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.