ಅಖಿಲ ಕರ್ನಾಟಕ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟವು ಕಳೆದ 51 ವರ್ಷಗಳಿಂದ ಮುಜರಾಯಿ ಅರ್ಚಕರ ಒಳಿತಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ದಿನ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರು, ಅಡುಗೆಯವರಿಗೆ ಸ್ವಂತ ಮನೆಯನ್ನು ಹೊಂದಿಲ್ಲ ರವರಿಗೆ ಸರ್ಕಾರದ ವಸತಿಯೋಜನೆಗಳಲ್ಲಿ ಮನೆ ಮಂಜೂರಾತಿ ಮಾಡಲು ವಿಶೇಷ ಪ್ರಕರಣವೆಂದು ಪರಿಗಣಿಸಿ ಅರ್ಚಕರುಗಳಿಗೆ ಮತ್ತು ಅಡುಗೆಯವರಿಗೆ ಕನಿಷ್ಠ ಒಂದು ಸಾವಿರ ಮನೆಗಳನ್ನು ಮಂಜೂರು ಮಾಡಬೇಕೆಂಬ ಮನವಿಯನ್ನು ವಸತಿ ಸಚಿವರಿಗೆ ಸಲ್ಲಿಸಲಾಯಿತು.
ಈ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ವಸತಿ ಸಚಿವರಾದ ಶ್ರೀ ಸೋಮಣ್ಣನವರು ಮನವಿಯ ಬಗ್ಗೆ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಈ ದಿನ ಭೇಟಿಯ ನಿಯೋಗದಲ್ಲಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಯ ದೇವಾಲಯಗಳ ಅರ್ಚಕ ಬಂಧುಗಳು ಉಪಸ್ಥಿತರಿದ್ದರು.
.jpeg)


.jpeg)


0 Comments