Ticker

6/recent/ticker-posts

Ad Code

Responsive Advertisement

ಕೊರಟಗೆರೆ ವ್ಯಾಪ್ತಿಯ ವೀರನಾಗೇನಹಳ್ಳಿಯಲ್ಲಿ ಸ್ವಾತಂತ್ರ್ಯೋತ್ಸವ

 ವಾರ್ತಾ ಜಾಲ ಸುದ್ದಿ ಮಧುಗಿರಿ:ತಾಲೂಕಿನ ಪುರವರ ಹೋಬಳಿಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೀರನಾಗೇನಹಳ್ಳಿಯಲ್ಲಿ ಇಂದು ಸ್ವಾತಂತ್ರ್ಯೋತ್ಸವದ ಕುರಿತು ಐಎಎಸ್ ನಿವೃತ್ತ ಅಧಿಕಾರಿಗಳಾದ ಅನಿಲ್ ರವರು ಅರಿವನ್ನು ಮೂಡಿಸಿದರು.




ಭಾರತ ದೇಶವು 75ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿರವರ ಆಶಯದಂತೆ ಪ್ರತಿ ಮನೆಗಳ ಮೇಲೆ ಹರ್ ಘರ್ ತಿರಂಗ್ ಆಚರಿಸಬೇಕಾಗಿ ನಿವೃತ ಐ.ಎ.ಎಸ್ ಅಧಿಕಾರಿ ಅನಿಲ್ ರವರು ವಿನಂತಿಸಿದರು. ಈ ಶುಭ ಸಂದರ್ಭದಲ್ಲಿ ಪುರವರ ಹೋಬಳಿಯ ವೀರನಾಗೇನಹಳ್ಳಿಯ ಜೊತೆಗೆ ಸುಮಾರು 6 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಅದರಲ್ಲಿ ಮೊದಲನೆಯ ಭೇಟಿಯನ್ನಾಗಿ ವೀರ ನಾಗೇನಹಳ್ಳಿ ಯನ್ನು ಸಂಪರ್ಕಿಸಿದ್ದಾಗಿ ಹೇಳಿದರು ನಮ್ಮ ದೇಶದ ಹೆಮ್ಮೆಯ ಪ್ರತಿಕವಾಗಿರುವ ತ್ರಿವರ್ಣ ಧ್ವಜವನ್ನು ನಿಯಮದ ಪ್ರಕಾರ ಮನೆಯ ಮೇಲೆ ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಸ್ವತಂತ್ರವಾಗಿ ಹಾರಾಡಲು ಅನುವಾಗುವಂತೆ ಹಾರಿಸಬೇಕಾಗಿ ತಿಳಿ ಹೇಳಿದರು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದ ಹಕ್ಕು ಇರುವುದರಿಂದ ನಾವು ಸಹ ನಮ್ಮ ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಗೌರವವನ್ನು ಭಕ್ತಿ ಪೂರ್ವಕವಾಗಿ ನೀಡಬೇಕೆಂದು ತಿಳಿಸಿದರು 

ನಂತರ ಬಿಜೆಪಿ ಮುಖಂಡ ಕೃಷ್ಣಮೂರ್ತಿ ಮಾತನಾಡಿ ಸ್ವಾತಂತ್ರ್ಯದ ಬಗ್ಗೆ ಹೆಚ್ಚಿನದಾಗಿ ತಿಳುವಳಿಕೆ ನೀಡಿದರು ಹಾಗೂ ರಾಷ್ಟ್ರಧ್ವಜವನ್ನು ಯಾವ ರೀತಿಯಾಗಿ ಹಾರಿಸಿ ಆಗಸ್ಟ್ 15ರ ಸಂಜೆ ಆರು ಗಂಟೆಗೆ ಸಮರ್ಪಕ ರೀತಿಯಲ್ಲಿ ಬಿಚ್ಚಿ ನಿಯಮಗಳ ಪ್ರಕಾರ ಮಡಚಿ ಸುರಕ್ಷಿತವಾದ ಸ್ಥಳದಲ್ಲಿ ಇಡಬೇಕೆಂದು ವಿನಂತಿಸಿದರು. ಧ್ವಜವನ್ನು ನೆಲದ ಮೇಲಾಗಲಿ ಅಥವಾ ಮಳೆಯಲಾಗಲಿ ನೆನೆಸದೆ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿ ಹೇಳಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿ ಭಾರತದ ಸಾರ್ವಭೌಮತೆಯನ್ನು ಮೆರೆಯಲು ನಾವೆಲ್ಲರೂ ಪಣತೊಡಬೇಕಾಗಿ ಆಶಿಸಿದರು ಸುವರ್ಣ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ರಾರಾಜಿಸುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ವಿವರಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯದ ಬಿ.ಎಚ್ ಅನಿಲ್ ಕುಮಾರ್ ರವರು ಕೃಷ್ಣಮೂರ್ತಿ ರವರು ಪಕ್ಷದ ಮುಖಂಡರುಗಳಾದ ವೆಂಕಟಚಲಯ್ಯ, ರಕ್ಷಿತ್, ನರೇಂದ್ರಕುಮಾರ್, ನರಸಿಂಹಯ್ಯ, ನಾಗರಾಜು, ರಘು, ಕೃಷ್ಣಮೂರ್ತಿ, ಹರೀಶ್, ಹಾಗೂ ಮುಂತಾದವರಿದ್ದರು.

ವರದಿ:ನಾಗೇಶ್ ಜೀವಾ  ಮಧುಗಿರಿ

Post a Comment

0 Comments

Ad Code

Responsive Advertisement