Ticker

6/recent/ticker-posts

Ad Code

Responsive Advertisement

Panel Discussion -BMLTA, A need of the hour to provide commuter centric, seamless and inclusive mobility

 ಬೆಂಗಳೂರು ನಗರದ ಅಸಮರ್ಪಕ ಸಾರಿಗೆ ವ್ಯವಸ್ಥೆ, ಬಿಎಂಟಿಸಿ, ಬಿ ಎಂ ಆರ್ ಸಿ ಎಲ್, ಬಿಡಿಎ, ಆರ್ ಟಿ ಒ ಮತ್ತು ಇತರ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆಯ ಕಾರಣದಿಂದ ಇಂದು ಕರ್ನಾಟಕ ಸರಕಾರವು ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯ ಕುರಿತು ಮರು ಮೌಲ್ಯಮಾಪನ ಮಾಡಬೇಕಿರುವ ಪರಿಸ್ಥಿತಿ ಓದಗಿಬಂದಿದೆ.


ಈ ಸಮಸ್ಯೆಯ ಪ್ರತಿಕ್ರಿಯೆಯಾಗಿ ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ (BMLTA) ಮಸೂದೆ 2021 ಅನ್ನು ನಗರ ಭೂ ಸಾರಿಗೆ ನಿರ್ದೇಶನಾಲಯವು (DULT) ಬೆಂಗಳೂರು ಮಹಾನಗರದಲ್ಲಿ ಸಾರಿಗೆ ಆಡಳಿತದ ಅಂತಿಮ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವ ಏಕೀಕೃತ, ಸಮಗ್ರ ಸಂಸ್ಥೆಯನ್ನು ಸ್ಥಾಪಿಸಲು ಅಭಿವೃದ್ಧಿಪಡಿಸಿದೆ.

ಇದಕ್ಕೆ ಪೂರಕವಾಗಿ, ನಗರದ ಸಂಚಾರ ಸಾರಿಗೆ ಯೋಜನೆ ಹಾಗೂ ನಗರಾಡಳಿತವನ್ನು ಮನದಲ್ಲಿಟ್ಟುಕೊಂಡು ಬಿ.ಪ್ಯಾಕ್  ಸಂಸ್ಥೆಯು, ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ (BMLTA), ಪ್ರಯಾಣಿಕರ ಕೇಂದ್ರಿತ, ಸುಧಾರಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದರ ಬಗ್ಗೆ ಎಂಬ ವರ್ಚುವಲ್ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಿ ಎಂ ಎಲ್ ಟಿ ಎ ಯ ಆಡಳಿತ ವ್ಯವಸ್ಥೆಯ ರಚನೆ ಮತ್ತು ಈ ಸಂಸ್ಥೆಯು ಇತರ ಸಲಹಾ ಸಂಸ್ಥೆಗಳಿಂದ ಹೇಗೆ ಕಾರ್ಯಗಳು, ನಿಧಿಗಳು ಮತ್ತು ಅನುಷ್ಠಾನದ ಆಧಾರದ ಮೇಲೆ ಬಿನ್ನವಾಗಿದೆ ಎಂಬುದನ್ನು ಈ ಸಂವಾದದ ಮೂಲಕ ತಿಳಿಯುವ ಗುರಿಯನ್ನು ಹೊಂದಿದೆ.

8ನೇ ಜುಲೈ 2022, ಸಂಜೆ 6:00 - 7:30 ರ ವರೆಗೆ ಜೂಮ್ ನಲ್ಲಿ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ನೋಂದಾಯಿಸಿಕೊಳ್ಳಿ - https://bit.ly/3yLfOOS  


Post a Comment

0 Comments

Ad Code

Responsive Advertisement