`ವಂದೇ ಮಾತರಂ'ನ ಗೌರವಕ್ಕಾಗಿ ದೇಶದಲ್ಲಿ ಕಾನೂನು ಜಾರಿಯಾಗಬೇಕು ! - ನ್ಯಾಯವಾದಿ ಉಮೇಶ ಶರ್ಮಾ
`ವಂದೇ ಮಾತರಂ'ಅನ್ನು ಮೊದಲ ಬಾರಿಗೆ 1909 ರಲ್ಲಿ ಮುಸ್ಲಿಂ ಲೀಗ್ ವಿರೋಧಿಸಿತು ಮತ್ತು `ವಂದೇ ಮಾತರಂ' ಅನ್ನು ವಿರೋಧಿಸಿದವರು 1947 ರಲ್ಲಿ ಭಾರತವನ್ನು ವಿಭಜಿಸಿ ಇನ್ನೊಂದು ದೇಶವಾದ ಪಾಕಿಸ್ತಾನಕ್ಕೆ ತೆರಳಿದರು. `ವಂದೇ ಮಾತರಂ' ಇದು ಭಾರತದ ಸಾಂಸ್ಕೃತಿಕ ಪರಂಪರೆಯಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಒಪ್ಪಬೇಕು. ಇಲ್ಲದಿದ್ದರೆ ದೇಶದ ಪ್ರಜೆಗಳೆಂದು ಹೇಳಿಕೊಳ್ಳುವ ಹಕ್ಕು ನಮಗಿಲ್ಲ. `ವಂದೇ ಮಾತರಂ' ಗೀತೆಯು ಭಾರತಮಾತೆಯನ್ನು ಗೌರವಿಸುತ್ತದೆ ಮತ್ತು ಅದನ್ನು ವಿರೋಧಿಸುವವರು ಭಾರತಮಾತೆಯನ್ನು ಗೌರವಿಸುವುದಿಲ್ಲ. `ವಂದೇ ಮಾತರಂ'ಗೆ ವಿರೋಧ ಅಂದರೆ ರಾಷ್ಟ್ರವಿರೋಧವಾಗಿದೆ. `ವಂದೇ ಮಾತರಂ' ಅನ್ನು ಗೌರವಿಸಲು ದೇಶದಲ್ಲಿ ಕಾನೂನು ರೂಪಿಸಬೇಕು ಎಂದು `ಸರ್ವೋಚ್ಚ ನ್ಯಾಯಾಲಯ'ದ ನ್ಯಾಯವಾದಿ ಉಮೇಶ ಶರ್ಮಾ ಇವರು ಒತ್ತಾಯಿಸಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ `...ವಂದೇ ಮಾತರಂಗೆ ಎಲ್ಲಿಯವರೆಗೆ ವಿರೋಧಿಸುವಿರಿ ?' ಈ ಕುರಿತು ಆನ್‍ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಬಿಹಾರದ `ಭಾರತೀಯ ಜನಕ್ರಾಂತಿ ದಳ'ದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರಾಕೇಶ ದತ್ತ ಮಿಶ್ರಾ ಇವರು ಮಾತನಾಡುತ್ತಾ, `ವಂದೇ ಮಾತರಂ' ಇದು ನಮ್ಮಲ್ಲಿ ದೇಶದ ಬಗ್ಗೆ ಗೌರವದ ಭಾವನೆಯನ್ನು ನಿರ್ಮಿಸುವ ಗೀತೆಯಾಗಿದೆ. ದೇಶದ ಮೇಲೆ ನಂಬಿಕೆ ಇಲ್ಲದವರು ಮಾತ್ರ ಅದನ್ನು ವಿರೋಧಿಸಬಹುದು. ರಾಷ್ಟ್ರಗೀತೆ ಮತ್ತು ರಾಷ್ಟ್ರವನ್ನು ಗೌರವಿಸದವರ ಪೌರತ್ವವನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಜಾರಿಯಾಗಬೇಕು. ಅಲ್ಲದೆ, `ವಂದೇ ಮಾತರಂ' ಅನ್ನು ವಿರೋಧಿಸುವ ಶಾಸಕರು, ಸಂಸದರು ಅಥವಾ ಅವರ ಯಾವುದೇ ರಾಜಕೀಯ ಹುದ್ದೆ ಇದ್ದರೆ ಅದನ್ನು ತೆಗೆದುಹಾಕಬೇಕು' ಎಂದು ಹೇಳಿದರು.
ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು ಮಾತನಾಡುತ್ತಾ, ಅಂದು ಬ್ರಿಟಿಷರು `ವಂದೇ ಮಾತರಂ'ಅನ್ನು ನಿಷೇಧಿಸಿದ್ದರೂ ದೇಶದಲ್ಲಿ ಅನೇಕ ಕ್ರಾಂತಿಕಾರಿಗಳು `ವಂದೇ ಮಾತರಂ' ಹೇಳುತ್ತಾ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಮತ್ತು ನೇಣುಗಂಬಕ್ಕೆ ಏರಿದ್ದಾರೆ. `ವಂದೇ ಮಾತರಂ'ಗೆ ವಿರೋಧಿಸುವವರು ಆಂಗ್ಲರ ಭಾಷೆಯನ್ನು ಮಾತನಾಡುತ್ತಾರೆ. `ವಂದೇ ಮಾತರಂ'ಗೆ ಸಂವಿಧಾನದಲ್ಲಿ ರಾಷ್ಟ್ರಗೀತೆಯ ಸ್ಥಾನಮಾನ ನೀಡಬೇಕು ಮತ್ತು ಅದನ್ನು ವಿರೋಧಿಸಲು ಯಾರೂ ಧೈರ್ಯ ಮಾಡದಂತಹ ಸ್ಥಾನವನ್ನು ನೀಡಬೇಕು ಎಂದು ಹೇಳಿದರು.

0 Comments