Ticker

6/recent/ticker-posts

Ad Code

Responsive Advertisement

"ರಾಯರ ಬೃಂದಾವನಕ್ಕೆ ಲಾವಂಚದಿಂದ ಅಲಂಕಾರ"

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಪ್ರತಿ ಗುರುವಾರದಂತೆ  ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಲಾವಂಚದಿಂದ ಅಲಂಕಾರ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ನೆರವೇರಿತು 









ಸಂಜೆ 6:30ಕ್ಕೆ ಉತ್ಸವಗಳು ಸ್ವಸ್ತಿ ವಾಚನ ಮಹಾಮಂಗಳಾರತಿ ನೆರವೇರಿಸಿದ ನಂತರದಲ್ಲಿ 2 ಗಂಟೆಗಳ ಕಾಲ ನೃತ್ಯ ಲಹರಿ ಕಲಾ ಕೇಂದ್ರ ಟ್ರಸ್ಟ್ ನ ವಿದ್ಯಾರ್ಥಿಗಳಿಂದ" ಶ್ರೀಮತಿ ರೂಪಾ ಗಿರೀಶ್" ನಿರ್ದೇಶನದಲ್ಲಿ ದೇಸಾಯಿ ಯವರ ಸಹಕಾರ ದೊಂದಿಗೆ "ಭರತನಾಟ್ಯ" ಕಾರ್ಯಕ್ರಮವು ನೆರವೇರಿತು ಎಂದು ಪುರೋಹಿತರಾದ ನಂದಕಿಶೋರಾಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ಹರಿಯುವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Post a Comment

0 Comments

Ad Code

Responsive Advertisement