Ticker

6/recent/ticker-posts

Ad Code

Responsive Advertisement

Malleswaram ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿಯಲ್ಲಿ ಬೀಳಬೇಕು ಇಲ್ಲಾ ಕರೆಂಟ್ ಹೊಡೆದು ಸಾಯಬೇಕು ಎಂಬ ಪರಿಸ್ಥಿತಿ .

 *ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ ,ಶರೀಫ್ ನಗರದಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ 12ವರ್ಷದ ರುಕ್ಮಾನ್ ಮೇಲೆ ಬಿದ್ದಿದರಿಂದ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿತು ಇದರ ವಿರುದ್ದ ಮಲ್ಲೇಶ್ವರಂ ನಿವಾಸಿಗಳು  ಆಕ್ರೋಶ*



*ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್ ರವರು ಶರೀಫ್ ನಗರ ನಿವಾಸಿಗಳು ಸಮಸ್ಯೆಗಳ ವಿರುದ್ದ ಮೌನ ಪ್ರತಿಭಟಿಸಿದರು*.

*ಸಾಮಾಜಿಕ ಕಾರ್ಯಕರ್ತ ಅನೂಪ್ ಅಯ್ಯಂಗಾರ್* ಮಾತನಾಡಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿಯಲ್ಲಿ ಬೀಳಬೇಕು ಅಥವಾ ಕರೆಂಟ್ ಹೊಡೆದು ಜನರ ಸಾಯಬೇಕು ಎಂಬ ಪರಿಸ್ಥಿತಿ ಬಂದಿದೆ.

ಶರೀಫ್ ನಗರ ಸ್ಲಂ ಪ್ರದೇಶವಾಗಿದ್ದು ಸಾವಿರಾರು ಜನರು ಇಲ್ಲಿ ವಾಸವಿದ್ದಾರೆ.

ಒಂದೊಂದು ವಿದ್ಯುತ್ ಕಂಬದಲ್ಲಿ ಹಲವಾರು ಮನೆಗಳ ಸಂಪರ್ಕವಿದೆ .ಸ್ಥ ಳೀಯ ನಿವಾಸಿಗಳು ಜನಪ್ರತಿನಿಧಿಗಳಿಗೆ ಮತ್ತು ಬೆಸ್ಕಾಂನವರಿಗೆ ಹಲವಾರು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.

ಸುರಿದ ಮಳೆಯಿಂದ ವಿದ್ಯುತ್ ತಂತಿ ಕಟ್ಟಾಗಿ ಬಾಲಕನ ತಲೆ ಮೇಲೆ ಬಿದ್ದು ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ.

ಜನಪ್ರತಿನಿಧಿಗಳ ಮತ್ತು ಬೆಸ್ಕಾಂರವರ ನಿರ್ಲಕ್ಷ್ಯದಿಂದ ಈ ದುರಂತ ಸಾವು ಸಂಭವಿಸಿದೆ.ಮೃ ತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು.

Post a Comment

0 Comments

Ad Code

Responsive Advertisement